KRS Dam: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ.. ಮಳೆ; ಕೆಆರ್​​ಎಸ್​ ಡ್ಯಾಂ ತುಂಬಲು ಕೆಲವೇ ಅಡಿಗಳು ಮಾತ್ರ ಬಾಕಿ

ಮಂಡ್ಯ, ಜುಲೈ 19: ರಾಜ್ಯದ ಹಲವು ಪ್ರದೇಶಗಳಲ್ಲಿ ವರುಣಾರ್ಭಟ ಜೋರಾಗಿದ್ದು ಇತ್ತ ಕಾವೇರಿ ಜಲಾನಯನ ಪ್ರದೇಶದಲ್ಲೂ ಧಾರಾಕಾರ ಮಳೆಯಾಗುತ್ತಿದೆ. ಎಡೆಬಿಡದೇ ಸುರಿದ ಮಳೆಯಿಂದಾಗಿ ಕಾವೇರಿ ನದಿಯು ಮೈದುಂಬಿ ಹರಿಯುತ್ತಿದೆ. ಇದರಿಂದಾಗಿ ಕಾವೇರಿ ಒಡಲು ತುಂಬಲು ಇನ್ನೇನು ಕೆವಲ 11 ಟಿಎಂಸಿ ಮಾತ್ರ ಬಾಕಿ ಉಳಿದಿದೆ.

ಎಡೆಬಿಡದೇ ಸುರಿದ ಮಳೆಯಿಂದಾಗಿ ಕಾವೇರಿ ನದಿಯು ಮೈದುಂಬಿ ಹರಿಯುತ್ತಿದೆ. ಇದರಿಂದಾಗಿ ಕೆ.ಆರ್.ಎಸ್ ಅಣೆಕಟ್ಟೆಯಲ್ಲಿ ಒಳ ಹರಿವಿನ ಪ್ರಮಾಣ ನಿನ್ನೆ(ಗುರುವಾರ) 40,490 ಕ್ಯೂಸೆಕ್ ತಲುಪಿದೆ. ಅಣೆಕಟ್ಟೆಯ ನೀರಿನ ಮಟ್ಟ ಗುರುವಾರ ರಾತ್ರಿ 8 ಗಂಟೆಯ ವೇಳೆಗೆ 114.90 ಅಡಿಗೆ ತಲುಪಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಿಂದ ಕೆಆರ್‌ಎಸ್ (ಕೃಷ್ಣ ರಾಜ ಸಾಗರ) ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಇಂದು ಆರ್‌ಎಸ್​​ನ ಒಳಹರಿವಿನ ಮಟ್ಟ 44,617 ಕ್ಯೂಸೆಕ್ ಇದೆ. 116.60 ಅಡಿ ನೀರಿನ ಮಟ್ಟ ತಲುಪಿದೆ. ಕೆಆರ್‌ಎಸ್ ಅಣೆಕಟ್ಟೆಯ ಗರಿಷ್ಠ ಮಟ್ಟ 124.80 ಅಡಿ ಆಗಿದೆ.

Heavy Rain KRS Dam Just Short Of 9 FT To Reach

ಗುರುವಾರ ಬೆಳಿಗ್ಗೆ 8 ಗಂಟೆಯ ವೇಳೆ ನೀರಿನ ಮಟ್ಟವು 113.40 ಅಡಿಗೆ ಮುಟ್ಟಿ, ಒಳಹರಿವು 36,772 ಕ್ಯೂಸೆಕ್ ದಾಖಲಾಗಿತ್ತು. ಆದರೆ ರಾತ್ರಿ ವೇಳೆಗೆ ಒಳಹರಿವಿನ ಪ್ರಮಾಣ 40 ಸಾವಿರ ಕ್ಯೂಸೆಕ್ ಗಿಂತ ಹೆಚ್ಚಾಗಿದ್ದು, ಅಣೆಕಟ್ಟೆ ನೀರಿನ ಮಟ್ಟವನ್ನು ಗಣನೀಯವಾಗಿ ಹೆಚ್ಚಿಸಿದೆ. ಕೆ.ಆರ್.ಎಸ್ ಅಚ್ಚು ಕಟ್ಟಿನ ನಾಲೆಗಳಿಗೆ 2,560 ನೀರನ್ನು ಹೊರ ಹರಿಸಲಾಗುತ್ತಿದೆ. ಇಂದು ಆರ್‌ಎಸ್​​ನ ಒಳಹರಿವಿನ ಮಟ್ಟ 44,617 ಕ್ಯೂಸೆಕ್ ಇದೆ. ಇನ್ನೂ ಕಾವೇರಿ ಒಡಲು ತುಂಬಲು ಇನ್ನೇನು ಕೆವಲ 11 ಟಿಎಂಸಿ ಮಾತ್ರ ಬಾಕಿ ಉಳಿದಿದೆ.

ಇನ್ನೂ ಮುಂದಿನ ಒಂದು ವಾರಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆಯನ್ನ ನೀಡಿದ್ದು, ಜಲಾಶಯದ ಸುತ್ತಮುತ್ತ ಇನ್ನಷ್ಟು ಮಳೆಯಾದರೆ ಅತೀ ಶೀಘ್ರದಲ್ಲೇ ಕೆಆರ್​ಎಸ್​ ಡ್ಯಾಂ ತುಂಬುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಲಾಗಿದೆ. ಕನ್ನಂಬಾಡಿ ಕಟ್ಟೆ ಭರ್ತಿಗೆ ಕೇವಲ 8 ಅಡಿಗಳು ಮಾತ್ರ ಬಾಕಿ ಇವೆ. ಕೆಆರ್‌ಎಸ್‌ನಲ್ಲಿ 38.900 ಟಿಎಂಸಿ ನೀರು ಸಂಗ್ರಹವಾಗಿದೆ. ಇನ್ನೂ‌ ಭರ್ತಿಗೆ ಬೇಕಿರೋದು ಕೇವಲ 11 ಟಿಎಂಸಿ ನೀರು ಮಾತ್ರ. ಇಂದು ಕೆಆರ್‌ಎಸ್​ನ ಹೊರ ಹರಿವು 2,566 ಕ್ಯೂಸೆಕ್ ಇದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಹಿನ್ನೆಲೆ.KRS ಡ್ಯಾಂಗೆ ಭಾರೀ ಪ್ರಮಾಣದ ನೀರಿನ ಒಳ ಹರಿವು ಹೆಚ್ಚಳವಾಗಿದ್ದು, ಒಂದೇ ರಾತ್ರಿಯಲ್ಲಿ 3 ಅಡಿಯಷ್ಟು ನೀರು ಶೇಖರಣೆಯಾಗಿದೆ. ಇದೇ ರೀತಿ ಒಳ ಹರಿವಿನ ಪ್ರಮಾಣ ಬಂದರೆ ಒಂದೇ ವಾರದಲ್ಲಿ ಡ್ಯಾಂ ಭರ್ತಿ ಸಾಧ್ಯತೆಇದ್ದು, ಪುನರ್ವಸು ಮಳೆಗೆ ಈ ಬಾರೀ ಬಹುತೇಕ ಡ್ಯಾಂ ಭರ್ತಿಯಾಗುವ ಸಾಧ್ಯತೆ ಇದೆ.

ಇಂದಿನ ಕೆಆರ್‌ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ- 124.80 ಅಡಿ
ಇಂದಿನ ಮಟ್ಟ- 116.60 ಅಡಿ
ಗರಿಷ್ಠ ಸಾಮರ್ಥ್ಯ- 49.452 ಟಿಎಂಸಿ
ಇಂದಿನ ಸಾಮರ್ಥ್ಯ- 38.900 ಟಿಎಂಸಿ
ಒಳ ಹರಿವು- 44,617 ಕ್ಯೂಸೆಕ್
ಹೊರ ಹರಿವು- 2,566 ಕ್ಯೂಸೆಕ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+