ಉತ್ತರ ಕನ್ನಡ, ಬೆಳಗಾವಿಯನ್ನು ತೋಯಿಸಿತು ಭಾರೀ ಮಳೆ
ಕಾರವಾರದಲ್ಲಿ ಎರಡು ದಿನದಿಂದ ಉತ್ತಮ ಮಳೆಯಾಗುತ್ತಿದ್ದು, ಮಳೆಮಾಪನದಲ್ಲಿ 6 ಸೆಂ.ಮೀ. ದಾಖಲಾಗಿದೆ. ಇಲ್ಲಿನ ಕುಮಟಾ (3 cm), ಹೊನ್ನಾವರ (1cm), ಮಂಕಿ(2 cm), ಮುಂಡಗೋಡು(1 cm)ಗಳಲ್ಲಿಯೂ ಭಾರೀ ಮಳೆಯಾಗಿದೆ.
ಕುಮಟಾ, ಜೂನ್ 1: ಮುಂಗಾರು ಮಳೆಗೆ ರಾಜ್ಯ ಭರದ ಸಿದ್ಧತೆ ನಡೆಸುತ್ತಿರುವ ಹೊತ್ತಲ್ಲೇ ಮಲೆನಾಡು, ಅರೆಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ವರುಣನ ಆಗಮನವಾಗಿದೆ.
ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆ ಜಿಲ್ಲೆಯ ಜನರಲ್ಲಿ ಕೊಂಚ ಸಮಾಧಾನ ಮೂಡಿಸಿದೆ.
ಈ ಬಾರಿ ಬರದ ಬಿಸಿಯನ್ನು ತಟ್ಟಿಸಿಕೊಂಡು ಕಂಗಾಲಾಗಿದ್ದ ಜನರಿಗೆ ನಿನ್ನೆ ಬಂದ ಮಳೆ ನಿರಾಳತೆಯನ್ನುಂಟುಮಾಡಿದೆ. ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಇನ್ನೂ ಮೂರು ದಿನ ಹಿಗೆಯೇ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.[ಮಲೆನಾಡಿನಾ ಮಳೆಹಾಡಿನಾ ಪಿಸು ಮಾತಿನಾ ಹೊಸತನ... ಸವಿದೆನಾ..]

ಕಾರವಾರದಲ್ಲಿ ಎರಡು ದಿನದಿಂದ ಉತ್ತಮ ಮಳೆಯಾಗುತ್ತಿದ್ದು, ಮಳೆಮಾಪನದಲ್ಲಿ 6 ಸೆಂ.ಮೀ. ದಾಖಲಾಗಿದೆ. ಇಲ್ಲಿನ ಕುಮಟಾ (3 cm), ಹೊನ್ನಾವರ (1cm), ಮಂಕಿ(2 cm), ಮುಂಡಗೋಡು(1 cm)ಗಳಲ್ಲಿಯೂ ಭಾರೀ ಮಳೆಯಾಗಿದೆ.
ಬೆಳಗಾವಿ, ಚಿಕ್ಕಮಗಳೂರು, ತುಮಕೂರಿನಲ್ಲೂ ಮಳೆ
ಬೆಳಗಾವಿ ಜಿಲ್ಲೆಯ ಖಾನಾಪುರ (5cm), ಚಿಕ್ಕಮಗಳೂರಿನ ಪಂಚನಹಳ್ಳಿ(4 cm), ಬೆಳ್ತಂಗಡಿ(3 cm), ಮೂಡಿಗೆರೆ (1 cm), ಕೊಟ್ಟಿಗೆಹಾರ (2 cm) ಮತ್ತು ತುಮಕೂರಿನ ಶಿರಾ(1 cm)ನಲ್ಲೂ ಉತ್ತಮ ಮಳೆಯಾಗಿದೆ.
ಮಳೆ ಮುನ್ಸೂಚನೆ
ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂದಿನ ಮೂರುದಿನಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.












Click it and Unblock the Notifications