Karnataka Rains: ರಾಜ್ಯದ 5 ಜಿಲ್ಲೆಗಳಿಗೆ ರಣಮಳೆ 'ರೆಡ್ ಅಲರ್ಟ್': ಶಾಲೆಗಳಿಗೆ ರಜೆ ಸಾಧ್ಯತೆ?
ಬೆಂಗಳೂರು, ಜೂನ್ 15: ರಾಜ್ಯದ ವಿವಿಧ ಭಾಗಗಳಲ್ಲಿ ಮುಂಗಾರು ಮಳೆ ಬಿರುಸಿನಿಂದ ಕೂಡಿದೆ. ಭಾರೀ ಮಳೆ ಮುಂದುವರಿದಿದೆ. ಹವಾಮಾನ ಬದಲಾವಣೆ, ವೈಪರೀತ್ಯ ತೀವ್ರಗೊಂಡಿದ್ದು, ರಾಜ್ಯಾದ್ಯಂತ ಮುಂದಿನ ನಾಲ್ಕರಿಂದ ಐದು ದಿನ ಗುಡುಗು ಸಹಿತ ಭಾರೀ ಮಳೆ ಆಗಲಿದೆ. ಹವಾಮಾನ ಇಲಾಖೆಯು 05 ಜಿಲ್ಲೆಗಳಿಗೆ ಮುಂದಿನ 48 ಗಂಟೆ 'ರೆಡ್ ಅಲರ್ಟ್' ನೀಡಿದೆ. ಮಳೆ ಹೀಗೆ ಮುಂದುವರಿದರೆ, ರೆಡ್ ಅಲರ್ಟ್ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಆಗುವ ಸಾಧ್ಯತೆ ಇದೆ.
ಕರ್ನಾಟಕದಾದ್ಯಂತ ಮಳೆ ಮುಂದುವರಿದಿದ್ದು, ಚಳಿಗಾಲ ರೀತಿಯ ವಾತಾವರಣ ಭಾಸವಾಗುತ್ತಿದೆ. ಮುಂದಿನ ಐದು ದಿನಗಳಲ್ಲಿ ಮೊದಲ ಎರಡು ದಿನ (ಜೂನ್ 15& 16) ರಂದು ಕರಾವಳಿಯ ಉಡುಪಿ, ಉತ್ತರ ಕನ್ನಡ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಸೇರಿ ಐದು ಜಿಲ್ಲೆಗಳಿಗೆ ವಿಪರೀತ ಮಳೆ ಆಗಲಿದ್ದು, ಐಎಂಡಿ 'ರೆಡ್ ಅಲರ್ಟ್' ನೀಡಲಾಗಿದೆ. ನಂತರ ಎರಡು ದಿನ ಕರಾವಳಿ ಭಾಗಕ್ಕೆ ಭಾರೀ ಮಳೆ ಕಾರಣಕ್ಕೆ ಎರಡು ದಿನ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ.

ಭಾರೀ ಮಳೆಯ ಪ್ರಯುಕ್ತ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡದ ಮಂಗಳೂರು, ಉಡುಪಿ ಜಿಲ್ಲೆಗಳ ಶಾಲೆಗಳಿಗೆ ಜೂನ್ 16ರಂದು ಸೋಮವಾರ ರಜೆ ಘೋಷಿಸಲಾಗಿದೆ. ಈ ಮೂಲಕ ಭಾರೀ ಮಳೆ ಮಧ್ಯ ಮಕ್ಕಳ ಹಿತರಕ್ಷಣೆ, ಸುರಕ್ಷತೆ ಕಾಯಲಾಗುತ್ತಿದೆ. ಶಾಲೆ ರಜೆ ಬಗ್ಗೆ ಆಯಾ ಜಿಲ್ಲೆಗಳ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಸೋಮವಾರದವರೆಗೆ ಒಳನಾಡು ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಚಾಮರಾಜನಗರ, ದಾವಣಗೆರೆ, ಹಾಸನ, ಮೈಸೂರು ಜಿಲ್ಲೆಗಳಿಗೆ ಭಾರೀ ಮಳೆ ಪ್ರಯುಕ್ತ 'ಆರೆಂಜ್ ಅಲರ್ಟ್' ನೀಡಲಾಗಿದೆ. ಇನ್ನೂಳಿದ ಜಿಲ್ಲೆಗಳಲ್ಲಿ ಅಲಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ ಎಂದು ಹವಾಮಾನ ಇಲಾಖೆ ಕರ್ನಾಟಕ ಕೇಂದ್ರವು ಮುನ್ಸೂಚನೆ ವರದಿಯಲ್ಲಿ ತಿಳಿಸಿದೆ.
ರಾಜ್ಯದ ಮಲೆನಾಡು, ಒಳನಾಡು ಸೇರಿದಂತೆ ವಿವಿಧೆಡೆ ಮಳೆ ಮುಂದುವರಿಯುವುದರಿಂದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಏರಿಕೆ ಆಗಿದೆ. ಬೆಂಗಳೂರಿನಲ್ಲಿ ಆಗಾಗ ತುಂತುರು ಮಳೆ ಆಗುತ್ತಿದೆ. ಜೋರು ಮಳೆ ಮುನ್ಸೂಚನೆ ಇಲ್ಲ. ಬಂಗಾಳಕೊಲ್ಲಿ, ಅರಬ್ಬಿ ಸಮುದ್ರ ಭಾಗದಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತವು ತೀವ್ರಗೊಂಡಿದ್ದೇ ಹೆಚ್ಚಿನ ಮಳೆಗೆ ಕಾರಣವಾಗಿದೆ. ಮುಂಗಾರು ಮಳೆ ದಿಢೀರ್ ಚುರುಕಾಗಲು ಇದೂ ಕಾರಣವಾಗಿದೆ. ಮಳೆ ಪ್ರದೇಶಗಳಲ್ಲಿ ಬಿಸಿಲಿನ ತಾಪ ಇಳಿಕೆ ಆಗಿದೆ. ಗಾಳಿಯ ಬೀಸುವಿಕೆ ವೇಗ ಪ್ರತಿ ಕಿಲೋ ಮೀಟರ್ ಗೆ ಗರಿಷ್ಠ 50 ಕಿಲೋ ಮೀಟರ್ ತಲುಪಿದೆ.
ರಾಜ್ಯದಲ್ಲಿ ತಾಪಮಾನ ಎಷ್ಟಿದೆ?
ರಾಜ್ಯದ ಬೀದರ್‌ನಲ್ಲಿ ಬರೋಬ್ಬರಿ 33 ಡಿಗ್ರಿ ಸೆಲ್ಸಿಯಸ್, ದಕ್ಷಿಣ ಕನ್ನಡ 31 ಡಿಗ್ರಿ ಸೆಲ್ಸಿಯಸ್, ರಾಯಚೂರು 32 ಡಿಗ್ರಿ ಸೆಲ್ಸಿಯಸ್, ಬಾಗಲಕೋಟೆ 33 ಡಿಗ್ರಿ ಸೆಲ್ಸಿಯಸ್, ಕಲಬುರಗಿ 31, ಕೋಲಾರ, ಚಿತ್ರದುರ್ಗದಲ್ಲಿ ತಲಾ 30 ಡಿಗ್ರಿ ಸೆಲ್ಸಿಯಸ್,
ಕಾರವಾರ 30 ಡಿಗ್ರಿ ಸೆಲ್ಸಿಯಸ್, ಚಾಮರಾಜನಗರ 29 ಡಿಗ್ರಿ ಸೆಲ್ಸಿಯಸ್, ಕೊಪ್ಪಳ ಮತ್ತು ಗದಗ ತಲಾ 29 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.












Click it and Unblock the Notifications