Karnataka Heat Wave alert: ಇಂದು 6-7 ಜಿಲ್ಲೆಗಳಿಗೆ ಮಳೆ ಸಾಧ್ಯತೆ: ರಾಜ್ಯಾದ್ಯಂತ ಒಣಹವೆ ಮುಂದುವರಿಕೆ: IMD
ಬೆಂಗಳೂರು, ಮಾರ್ಚ್ 24: ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಳೆ ಬೀಳುವ ಮುನ್ಸೂಚನೆ ಜೊತೆಗೆ ರಾಜ್ಯಾದ್ಯಂತ ಬಹುತೇಕ ಕಡೆಗಳಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆಗಳು ಇವೆ ಎಂದು ಹೇಳಲಾಗಿದೆ. ಇಂದು ಸುಮಾರು 6-7 ಜಿಲ್ಲೆಗಳಿಗೆ ಮಳೆ ಬರುವ ಲಕ್ಷಣ ಇವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದ ಹಾಸನ, ಕೊಡಗು ಮಲೆನಾಡು ಜಿಲ್ಲೆಗಳು ಸೇರಿದಂತೆ ಆರಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇಂದು ಭಾನುವಾರ ಮಳೆ ಬರುವ ಸಂಭವವಿದೆ. ದಕ್ಷಿಣ ಕನ್ನಡದ ಪೆಣಂಬೂರಿನಲ್ಲಿ ಶನಿವಾರ ಮಳೆ ದಾಖಲಾಗಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಅಧಿಕ ತಾಪಮಾನದ ವಾತಾವರಣ ಮುಂದುವರಿದಿದೆ ಎಂದು ವರದಿ ತಿಳಿಸಿದೆ.

ಬೇಸಿಗೆ ಕಾಲದ ಮಧ್ಯಭಾಗದಲ್ಲಿ 'ಮೈ ಚುರ್' ಎನ್ನುವ ಬಿಸಿಲಿನ ಶಾಖದ ಮಧ್ಯೆ ಮಳೆ ಮುನ್ಸೂಚನೆ ನೋಡಿ ಜನರು ಸಂತಸಪಟ್ಟಿದ್ದರು. ಸದ್ಯ ಈ ಖುಷಿಗೆ ಬ್ರೇಕ್ ಬೀಳಲಿದೆ. ಹೌದು ಇಂದು ಭಾನುವಾರ ಕೆಲವೆಡೆ ಮಾತ್ರ ಮಳೆ ನಿರೀಕ್ಷೆ ಬಿಟ್ಟರೆ, ಮತ್ತೆ ಸದ್ಯಕ್ಕೆ ವ್ಯಾಪಕ ಮಳೆ ಮುನ್ಸೂಚನೆ ಇಲ್ಲ.
ಕೆಲ ಜಿಲ್ಲೆಗಳಿಗೆ 01 ದಿನ ಮಳೆ ಸಾಧ್ಯತೆ
ಮಾರ್ಚ್ 30ರ ವರೆಗೂ ರಾಜ್ಯಾದ್ಯಂತ ಒಣಹವೆ, ಶಾಖದ ಅಲೆ ಮುಂದುವರಿಯಲಿದೆ. ನಂತರ ಒಂದು ದಿನ ಮಾರ್ಚ್ 31ರಂದು ಕೆಲವು ಜಿಲ್ಲೆಗಳಿಗೆ ಮಾತ್ರ ಮಳೆ ಬರಬಹುದು ಎಂದು ಹೇಳಲಾಗುತ್ತಿದೆ.
ಅಂದು (ಮಾ.31) ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಹಾಗೂ ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳ ಹಲವೆಡೆ ಲಘು ಮಳೆ ಸುರಿಯುಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.

ಇಲ್ಲೆಲ್ಲ ಒಣಹವೆ ಮುಂದುವರಿಕೆ
ಉತ್ತರ ಒಳನಾಡಿನ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಹಾವೇರಿ, ಗದಗ, ಕೊಪ್ಪಳ್ಳ, ರಾಯಚೂರು, ಕಲಬುರಗಿ, ಯಾದಗಿರಿ, ಬೀದರ್ ಹಾಗೂ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ.
ಸಕ್ಕರೆ ನಾಡಿನಲ್ಲಿ ರಾಜ್ಯದ ಕನಿಷ್ಠ ತಾಪಮಾನ
ಕಲಬುರಗಿಯಲ್ಲಿ ರಾಜ್ಯದ ಗರಿಷ್ಠ ತಾಪಮಾನ 39.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬಾಗಲಕೋಟೆ, ಕೊಪ್ಪಳದಲ್ಲಿ ತಲಾ 38 ಡಿಗ್ರಿ ಸೆಲ್ಸಿಯಸ್, ರಾಯಚೂರು, ವಿಜಯಪುರ ಜಿಲ್ಲೆಯಲ್ಲಿ ತಲಾ 37 ಡಿಗ್ರಿ ಸೆಲ್ಸಿಯಸ್, ಗದಗ, ಬೀದರ್, ಹಾವೇರಿ, ಚಾಮರಾಜನಗರ, ಚಿತ್ರದುರ್ಗ ಸೇರಿದಂತೆ ವಿವಿಧ ಕಡೆಗಳಲ್ಲಿ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಮಂಡ್ಯದಲ್ಲಿ ರಾಜ್ಯದ ಕನಿಷ್ಠ
ಇನ್ನೂ ಬೆಂಗಳೂರಿನಲ್ಲಿ ಸದ್ಯ ಯಾವ ಮಳೆ ಮುನ್ಸೂಚನೆ ಇಲ್ಲ. ಇಲ್ಲಿ ಶುಷ್ಕ ವಾತಾವರಣವೇ ಮುಂದುವರಿಯಲಿದೆ. ಭಾನುವಾರ ಹುಬ್ಬಳ್ಳಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮಳೆ ಆಗಿದೆ. ಇದು ಮುಂದಿನ ಮೂರು ದಿನವು ಮುಂದುವರಿಯಲಿದ್ದು, ವಿವಿಧ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಕಂಡು ಬರಲಿದೆ. ಅಲ್ಲಲ್ಲಿ ಹಗುರ ಮಳೆ ಆಗುವ ಸಾಧ್ಯತೆಗಳು ಇವೆ ಎನ್ನಲಾಗಿದೆ.












Click it and Unblock the Notifications