ನುಡಿದಂತೆ ನಡೆದ ಕುಮಾರಣ್ಣ, ಸರ್ಕಾರಿ ಕಾರು ಬಳಸಲೇ ಇಲ್ಲ

ಬೆಂಗಳೂರು, ಜುಲೈ 24 : ಕರ್ನಾಟಕದ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡು ಪತನವಾಗಿದೆ. ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಧಿಕಾರವಹಿಸಿಕೊಂಡ ದಿನ ನೀಡಿದ್ದ ಮಾತಿಗೆ ತಕ್ಕಂತೆ ಕುಮಾರಸ್ವಾಮಿ ನಡೆದುಕೊಂಡಿದ್ದಾರೆ.

ವಿಶ್ವಾಸಮತದ ನಿರ್ಣಯದ ಮೇಲೆ ಮಂಗಳವಾರ ವಿಧಾನಸಭೆಯಲ್ಲಿ ಮಾತನಾಡುವಾಗ ಎಚ್. ಡಿ. ಕುಮಾರಸ್ವಾಮಿ ಕಾರಿನ ವಿಚಾರವನ್ನು ಪ್ರಸ್ತಾಪ ಮಾಡಿದರು. ಪ್ರಮಾಣ ವಚನ ಸ್ವೀಕರಿಸಿದಾಗಲೂ ಅವರು ಇದೇ ವಿಚಾರವನ್ನು ಹೇಳಿದ್ದರು.

ಸದನದಲ್ಲಿ ಭಾಷಣ ಮಾಡುವಾಗ ಎಚ್. ಡಿ. ಕುಮಾರಸ್ವಾಮಿ, "ಸರ್ಕಾರಿ ಕಾರನ್ನೂ ನಾನು ಬಳಸುತ್ತಿಲ್ಲ. ಸರ್ಕಾರದ ಬಂಗ್ಲೆಯನ್ನೂ ಪಡೆದಿಲ್ಲ" ಎಂದು ಹೇಳಿದರು. 14 ತಿಂಗಳ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ ಸರ್ಕಾರಿ ಕಾರು ಬೇಡ ಎಂದು ತಿಳಿಸಿದ್ದರು.

ಜಿಲ್ಲಾ ಕೇಂದ್ರಗಳಲ್ಲಿ ಸಂಚಾರ ಮಾಡುವಾಗ ಜಿಲ್ಲಾಡಳಿತ ನಿಗದಿಪಡಿಸಿದ ಕಾರಿನಲ್ಲಿ ಕುಮಾರಸ್ವಾಮಿ ಸಂಚಾರ ನಡೆಸುತ್ತಿದ್ದರು. ಆದರೆ, ಬೆಂಗಳೂರು ಮತ್ತು ಸುತ್ತ-ಮುತ್ತಲಿನ ಜಿಲ್ಲೆಗಳಲ್ಲಿ ಸಂಚಾರ ನಡೆಸುವಾಗ ಅವರು ಎಂದೂ ಸರ್ಕಾರಿ ಕಾರು ಬಳಕೆ ಮಾಡಲಿಲ್ಲ.

ಸರ್ಕಾರಿ ಕಾರು ಬೇಡ ಎಂದು ಹೇಳಿದ್ದರು

ಸರ್ಕಾರಿ ಕಾರು ಬೇಡ ಎಂದು ಹೇಳಿದ್ದರು

ಮುಖ್ಯಮಂತ್ರಿಯಾಗಿ ಎಚ್. ಡಿ. ಕುಮಾರಸ್ವಾಮಿ ಅವರು ಅಧಿಕಾರ ವಹಿಸಿಕೊಂಡ ಬಳಿಕ ಸರ್ಕಾರಿ ಕಾರನ್ನು ಬಳಕೆ ಮಾಡಲಿಲ್ಲ. ಮುಖ್ಯಮಂತ್ರಿಯಾದ ದಿನವೇ ಅವರು ಸರ್ಕಾರಿ ಕಾರು ಬೇಡ ಎಂದು ಹೇಳಿದ್ದರು. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅವರಿಗೆ ಟೊಯೋಟಾ ಫಾರ್ಚುನರ್ ಕಾರನ್ನು ನೀಡಿತ್ತು.

ರೇಂಜ್ ರೋವರ್ ಕಾರಿನಲ್ಲಿ ಸಂಚಾರ

ರೇಂಜ್ ರೋವರ್ ಕಾರಿನಲ್ಲಿ ಸಂಚಾರ

ಎಚ್. ಡಿ. ಕುಮಾರಸ್ವಾಮಿ 2018ರ ಚುನಾವಣಾ ಫಲಿತಾಂಶ ಬಂದ ಬಳಿಕ ಕಪ್ಪು ಬಣ್ಣದ ರೇಂಜ್ ರೋವರ್ ಕಾರಿನಲ್ಲಿ ಸಂಚಾರ ನಡೆಸುತ್ತಿದ್ದರು. ಕೆಎ 42 ಪಿ 0002 ನಂಬರ್‌ನ ಕಾರನ್ನು ಸದಾ ಅವರು ಬಳಕೆ ಮಾಡುತ್ತಿದ್ದರು. ಜಿಲ್ಲಾ ಕೇಂದ್ರಗಳಿಗೆ ತೆರಳಿದಾಗ ಮಾತ್ರ ಜಿಲ್ಲಾಡಳಿತ ನಿಗದಿ ಮಾಡಿದ ಕಾರನ್ನು ಬಳಕೆ ಮಾಡುತ್ತಿದ್ದರು.

ಅದೃಷ್ಟದ ಕಾರು ಎಂದು ಭಾವಿಸಿದ್ದರು

ಅದೃಷ್ಟದ ಕಾರು ಎಂದು ಭಾವಿಸಿದ್ದರು

2018ರ ವಿಧಾನಸಭೆ ಚುನಾವಣೆ ಫಲಿತಾಂಶ ಬಂದ ಬಳಿಕ ಕುಮಾರಸ್ವಾಮಿ ಕಪ್ಪು ಬಣ್ಣದ ರೇಂಜ್ ರೋವರ್ ಕಾರು ಬಳಸುತ್ತಿದ್ದರು. ಇದನ್ನು ಅವರು ಅದೃಷ್ಟದ ಕಾರು ಎಂದು ನಂಬಿದ್ದರು. ಆದ್ದರಿಂದ, ಸರ್ಕಾರ ನೀಡಿದ ಕಾರನ್ನು ಅವರು ಬೇಡ ಎಂದು ಹೇಳಿ ಖಾಸಗಿ ಕಾರಿನಲ್ಲಿಯೇ ಸಂಚಾರ ನಡೆಸುತ್ತಿದ್ದರು.

ಕಪ್ಪು ಕಾರು ಕೈ ಕೊಟ್ಟಿತ್ತು

ಕಪ್ಪು ಕಾರು ಕೈ ಕೊಟ್ಟಿತ್ತು

ಲೋಕಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕುಮಾರಸ್ವಾಮಿ ಸಂಚಾರ ನಡೆಸುತ್ತಿದ್ದ ರೇಂಜ್ ರೋವರ್ ಕಾರಿನ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆಗ ಕೆಲವು ದಿನಗಳ ಕಾಲ ಅವರು ಬಿಳಿ ಬಣ್ಣದ ಖಾಸಗಿ ಕಾರಿನಲ್ಲಿ ಸಂಚಾರ ನಡೆಸುತ್ತಿದ್ದರು. ಉಳಿದಂತೆ ಕಪ್ಪು ರೇಂಜ್ ರೋವರ್ ಕಾರನ್ನು ಅವರು ಇಷ್ಟ ಪಡುತ್ತಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+