ಪೋಕ್ಸೋ ಸಂತ್ರಸ್ತೆಯನ್ನೇ ಮದುವೆ ಆಗಲು ಆರೋಪಿಗೆ ಅವಕಾಶ ಕೊಟ್ಟ ಕೋರ್ಟ್

ಬೆಂಗಳೂರು, ಜುಲೈ 23: ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಆರೋಪಿಗೆ ಜಾಮೀನು ನೀಡಿ ಸಂತ್ರಸ್ತೆಯನ್ನೇ ಮದುವೆಯಾಗಲು ಹೈಕೋರ್ಟ್ ಅವಕಾಶ ಮಾಡಿಕೊಟ್ಟಿದೆ. ಅಲ್ಲದೆ, ಆರೋಪಿಯ ವಿರುದ್ಧದ ಪೋಕ್ಸೋ ಕಾಯ್ದೆಯಡಿ ದಾಖಲಿಸಿದ್ದ ಪ್ರಕರಣ ಸಹ ರದ್ದುಪಡಿಸಿದೆ.

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶವನ್ನು ಮಾಡಿದೆ. ಸಂತ್ರಸ್ತೆ ವಯಸ್ಕರಾಗಿರುವ, ಆಕೆಯನ್ನೇ ಆರೋಪಿ ಮದುವೆಯಾಗಿರುವ ಹಾಗೂ ಅವರಿಗೆ ಮಗು ಜನಿಸಿರುವ ಕಾರಣ ಪರಿಗಣಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಆರೋಪಿ ವಿರುದ್ಧದ ಮೈಸೂರು ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ (ಪೋಕ್ಸೋ ವಿಶೇಷ ಕೋರ್ಟ್‌) ಮುಂದಿದ್ದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿದೆ.

HC Quashed POCSO Case Against Accused And Allowed To Live With Victim And Child

ಆ ಮೂಲಕ ಆರೋಪಿ, ಸಂತ್ರಸ್ತೆ ಹಾಗೂ ಅವರ ಮಗುವಿಗೆ ನೆಮ್ಮದಿಯಿಂದ ಜೀವನ ನಡೆಸಲು ಅನುವು ಮಾಡಿಕೊಟ್ಟಿದೆ. ಪ್ರೀತಿಯಲ್ಲಿದ್ದ ಸಂತ್ರಸ್ತೆ ಹಾಗೂ ಆರೋಪಿ ಮದುವೆಯಾಗಲು ಬಯಸಿದ್ದರು. ಆದರೆ, ಸಂತ್ರಸ್ತೆಯ ತಾಯಿ ದಾಖಲಿಸಿದ್ದ ದೂರಿನಿಂದ ಆರೋಪಿ ಬಂಧನಕ್ಕೆ ಒಳಗಾಗಿದ್ದ.

ದೂರಿನಲ್ಲಿ ಆರೋಪಿಸಿದಂತೆ ಆರೋಪಿ ಎಸಗಿದ್ದಾನೆ ಎನ್ನಲಾದ ಲೈಂಗಿಕ ದೌರ್ಜನ್ಯ ಘಟನೆ ಸಂಭವಿಸಿದ ವೇಳೆ ಸಂತ್ರಸ್ತೆಗೆ 16 ವರ್ಷ 9 ತಿಂಗಳಾಗಿತ್ತು. ಆರೋಪಿಗೆ 21 ವರ್ಷ, 2023ರ ಫೆ.15ರಂದು ದೂರು ದಾಖಲಾದ ದಿನದಿನದಿಂದಲೇ ಆರೋಪಿಯ ಬಂಧನವಾಗಿದೆ.

ಈ ನಡುವೆ 2024ರ ಜೂ.13ರಂದು ಹೈಕೋರ್ಟ್‌ ಆರೋಪಿಗೆ ಮಧ್ಯಂತರ ಜಾಮೀನು ನೀಡಿತ್ತು. ಈ ವೇಳೆ ಸಂತ್ರಸ್ತೆಗೆ 18 ವರ್ಷ ತುಂಬಿತ್ತು. ಜೈಲಿನಿಂದ ಹೊರಬಂದಿದ್ದ ಆರೋಪಿ ಪೋಷಕರ ಒಪ್ಪಿಗೆ ಮೇರೆಗೆ ಜೂ.21ರಂದು ಆರೋಪಿ ಸಂತ್ರಸ್ತೆಯನ್ನು ಮದುವೆಯಾಗಿದ್ದ. ಜೂ.26ರಂದು ವಿವಾಹವು ನೋಂದಣಿಯಾಗಿದೆ. ನಂತರ ಆರೋಪಿ ಜೈಲಿಗೆ ಹಿಂದಿರುಗಿದ ಎಂದು ಆದೇಶದಲ್ಲಿ ನ್ಯಾಯಪೀಠ ತಿಳಿಸಿದೆ.

ಅಲ್ಲದೆ, ಕೋರ್ಟ್‌ ಆದೇಶದಂತೆ ಮಗುವಿನ ಡಿಎನ್‌ಎ ವರದಿ ಸಲ್ಲಿಸಲಾಗಿದೆ. ಅದರ ಪ್ರಕಾರ ಸಂತ್ರಸ್ತೆ ಮತ್ತು ಆರೋಪಿಯೇ ಮಗುವಿನ ತಂದೆ-ತಾಯಿ. ಆ ಮಗುವಿಗೆ ಪ್ರಕರಣದ ಘಟನಾವಳಿಗಳು ತಿಳಿದಿಲ್ಲ. ಆರೋಪಿ ವಿರುದ್ಧದ ಪ್ರಕರಣ ರದ್ದುಪಡಿಸದಿದ್ದರೆ ಮಗು ಮತ್ತು ತಾಯಿ ತತ್ತರಿಸಿ ಹೋಗುತ್ತಾರೆ.

ಅವರ ಜೀವನದಲ್ಲಿ ಭೀಕರವಾದ ಕಂದಕ ಸೃಷ್ಟಿಯಾಗುತ್ತದೆ. ಕೊನೆವರೆಗೂ ಸಂಕಟವಾಗಲಿದ್ದು, ಸಮಾಜದಲ್ಲಿ ಅವಮಾನ ಎದುರಿಸಬೇಕಾಗುತ್ತದೆ. ಅವರ ಸಂತೋಷವನ್ನು ಸಂಪೂರ್ಣವಾಗಿ ಮರೆ ಮಾಚಿದಂತಾಗುತ್ತದೆ. ಅದನ್ನು ತಡೆಹಿಡಿಯಲು ಪ್ರಕರಣ ರದ್ದುಪಡಿಸಲಾಗುತ್ತಿದೆ ಎಂದು ಪೀಠ ಆದೇಶದಲ್ಲಿ ವಿವರಿಸಿದೆ.

ಪ್ರಕರಣದ ಹಿನ್ನೆಲೆ: ಒಂದೇ ಶಾಲೆಯಲ್ಲಿ ಓದುತ್ತಿದ್ದ ಆರೋಪಿ ಹಾಗೂ ಸಂತ್ರಸ್ತೆ ಪರಸ್ಪರ ಪ್ರೀತಿಸುತ್ತಿದ್ದರು. 2023ರ ಫೆ.15ರಂದು ಸಂತ್ರಸ್ತೆಯ ತಾಯಿ ದೂರು ನೀಡಿ, ಆರೋಪಿ ತನ್ನ ಮಗಳನ್ನು ಆಗಾಗ್ಗೆ ಭೇಟಿಯಾಗಿದ್ದ. ಬೈಕಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂದು ಆರೋಪಿಸಿದ್ದರು.

ಈ ಹಿನ್ನೆಲೆಯಲ್ಲಿ ಆರೋಪಿ ಜೈಲು ಸೇರಿದ್ದ. ಮತ್ತೊಂದೆಡೆ ಸಂತ್ರಸ್ತೆ ಗರ್ಭ ಧರಿಸಿದ್ದರು. ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಆರೋಪಿ ಪೋಕ್ಸೋ ಕಾಯ್ದೆಯಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ರದ್ದುಪಡಿಸಲು ಕೋರಿ ಆರೋಪಿ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದು, ಅದನ್ನು ಹೈಕೋರ್ಟ್‌ ಪುರಸ್ಕರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+