ಹೆಣ್ಣು ಮಗುವನ್ನು ಮತ್ತೆ ತಾಯಿಯ ಮಡಿಲಿಗೆ ಸೇರಿಸಿದ ಹೈಕೋರ್ಟ್
ಬೆಂಗಳೂರು, ಮೇ 18; ಚಿಕಿತ್ಸೆ ಕೊಡಿಸಲು ವೈದ್ಯರ ಬಳಿಗೆ ಕರೆದುಕೊಂಡು ಹೋಗುವುದಾಗಿ ತಂದೆ ಅಕ್ರಮವಾಗಿ ಅಪ್ರಾಪ್ತ ಮಗಳನ್ನು ಪಶ್ವಿಮ ಬಂಗಾಳಕ್ಕೆ ಕರೆದೊಯ್ದ ಪ್ರಕರಣ ಕರ್ನಾಟಕ ಹೈಕೋರ್ಟ್ ಮಧ್ಯಪ್ರವೇಶದಿಂದ ಸುಖಾಂತ್ಯವಾಗಿದೆ. ಹೈಕೋರ್ಟ್ ಮಗಳವನ್ನು ಮತ್ತೆ ಸುರಕ್ಷಿತವಾಗಿ ತಾಯಿ ಮಡಿಲಿಗೆ ಸೇರಿಸಿದೆ.
ಮಹಿಳೆಯೊಬ್ಬರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಲೋಕ್ ಆರಾಧೆ ಮತ್ತು ವಿಜಯ ಕುಮಾರ ಎ. ಪಾಟೀಲ್ ಅವರಿದ್ದ ವಿಭಾಗೀಯ ಪೀಠ, ತಂದೆ ಅಕ್ರಮವಾಗಿ ಮಗಳನ್ನು ಪಶ್ವಿಮ ಬಂಗಾಳಕ್ಕೆ ಕರೆದೊಯ್ದಿದ್ದಾರೆಂದು ಹೇಳಿದೆ.

ಅಲ್ಲದೇ, ಮಗಳನ್ನು ಕೂಡಲೇ ಪತ್ನಿಯ ಸುಪರ್ದಿಗೆ ಒಪ್ಪಿಸುವಂತೆ ಆಕೆಯ ಪತಿಗೆ ನಿರ್ದೇಶನ ನೀಡಿದೆ. ಮಗಳ ಶಾಶ್ವತ ಸುಪರ್ದಿಗೆ ಕೋರಿ ಪತ್ನಿ ಬೆಂಗಳೂರಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮತ್ತೊಂದೆಡೆ ತಾನು ಮಗುವಿನ ಕಾನೂನು ಬದ್ಧ ಪೋಷಕನೆಂದು ಘೋಷಿಸುವಂತೆ ಕೋರಿ ಪಶ್ಚಿಮ ಬಂಗಾಳದಲ್ಲಿ ಪತಿ ಅರ್ಜಿ ಸಲ್ಲಿಸಿದ್ದಾರೆ. ಆ ಎರಡೂ ಅರ್ಜಿಗಳು ಇತ್ಯರ್ಥವಾಗುವರೆಗೆ ಮಗಳು ತಾಯಿ ವಶದಲ್ಲಿರಬೇಕು ಎಂದು ಕೋರ್ಟ್ ಆದೇಶಿಸಿದೆ.
ತಂದೆಗೆ ಮಗಳ ಭೇಟಿ ಹಕ್ಕು ನೀಡಬೇಕು ತಂದೆಯೊಂದಿಗೆ ಸಾಮಾಜಿಕ, ಭೌತಿಕ ಮತ್ತು ಮಾನಸಿಕ ಸಂಪರ್ಕವನ್ನು ಮಗಳು ಕಳೆದುಕೊಳ್ಳಬಾರದು. ಮಗುವಿನ ಪ್ರತಿದಿನದ ಬೆಳವಣಿ ಬಗ್ಗೆ ಪತ್ನಿಯು ಪ್ರತಿ ಭಾನುವಾರ ಪತಿಗೆ ಮಾಹಿತಿ ನೀಡಬೇಕು ಎಂದು ಆದೇಶದಲ್ಲಿ ನ್ಯಾಯಪೀಠ ನಿರ್ದೇಶಿಸಿದೆ.

ನ್ಯಾಯಪೀಠ, ಪತಿಯ ಆಕ್ಷೇಪಣೆ ಗಮನಿಸಿದರೆ, ಕೇವಲ ಚಿಕಿತ್ಸೆ ಕೊಡಿಸಲು ಮಗಳನ್ನು ಕರೆದೊಯ್ಯಲು ತಾಯಿ ಅನುಮತಿ ನೀಡಿದ್ದರು. ಆದರೆ, ಮಗಳನ್ನು ಪಶ್ವಿಮ ಬಂಗಾಳಕ್ಕೆ ಕರೆದೊಯ್ದು, ಚಿಕಿತ್ಸೆ ಕೊಡಿಸಿ ಅಲ್ಲಿಯೇ ಶಾಲೆಗೂ ಸೇರಿಸಿದ್ದಾರೆ. ಆದ್ದರಿಂದ ಮಗಳನ್ನು ತಮ್ಮ ಸುಪರ್ದಿಯಿಂದ ಅಕ್ರಮವಾಗಿ ಕರೆದುಕೊಂಡು ಹೋಗಿದ್ದಾರೆ ಎಂದು ಅರ್ಜಿದಾರೆ ದೂರು ನೀಡಿದ್ದಾರೆ. ಈ ಪರಿಸ್ಥಿತಿ ಹೀಗಿರುವುದರಿಂದ ಮಗಳನ್ನು ಅರ್ಜಿದಾರೆಯ ಸುಪರ್ದಿಗೆ ನೀಡಬೇಕು ಎಂದು ಕೋರ್ಟ್ ನಿರ್ದೇಶಿಸಿತು.
ಪ್ರಕರಣದ ಹಿನ್ನೆಲೆ: 2022 ರ ಫೆ.22ಕ್ಕೆ ಅಂತರ್ ಧರ್ಮೀಯ ವಿವಾಹವಾಗಿದ್ದ ಪ್ರಕರಣದ ದಂಪತಿಗೆ 2016ರ ಜೂ.25ಕ್ಕೆ ಹೆಣ್ಣು ಮಗು ಜನಿಸಿತ್ತು. ದಂಪತಿಯು 2017ರ ಜನವರಿಯಿಂದ 2018ರ ಜೂನ್‌ವರೆಗೆ ಬೆಂಗಳೂರಿನಲ್ಲಿ ನೆಲೆಸಿದದರು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ದಂಪತಿ ಪ್ರತ್ಯೇಕವಾಗಿದ್ದರು. ಪತ್ನಿ ಮಗಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಕೆಲಸದ ನಿಮಿತ್ತ ಪತಿ ಪಶ್ವಿಮ ಬಂಗಾಳದಲ್ಲಿ ವಾಸವಾಗಿದ್ದರು.
2022ರ ಡಿ.16ರಂದು ಬೆಂಗಳೂರಿಗೆ ಬಂದಿದ್ದ ಪತಿ, ಮಗಳನ್ನು ವೈದ್ಯರ ಬಳಿಗೆ ಚಿಕಿತ್ಸೆಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿ ಪಶ್ಚಿಮ ಬಂಗಾಳಕ್ಕೆ ಕರೆದೊಯ್ದಿದ್ದರು. ಇದರಿಂದ ಪತ್ನಿ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದ ಪತಿ, ತನ್ನ ವಿರುದ್ಧ ಪತ್ನಿ ಸುಳ್ಳು, ಕಪೋಲ ಕಲ್ಪಿತ ಮತ್ತು ಆಧಾರರಹಿತ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿದ್ದ ಸ್ನೇಹಿತ ಕರೆ ಮಾಡಿ, "ನನ್ನ ಮಗಳು ಜ್ವರ ಮತ್ತು ಕಣ್ಣಿನ ಸೋಂಕಿನಿಂದ ನರಳುತ್ತಿರುವುದಾಗಿ ತಿಳಿಸಿದರು. ಇದರಿಂದ 2022ರ ಡಿ.16ರಂದು ನಾನು ಬೆಂಗಳೂರಿಗೆ ಬಂದಿದ್ದೆ. ನನ್ನ ನೋಡಿದ ಕೂಡಲೇ ಮಗಳು ಜೋರಾಗಿ ಅತ್ತಳಲ್ಲದೇ, ಐದಾರು ದಿನಗಳಿಂದ ಸೂಕ್ತವಾಗಿ ಆಹಾರ ಕೊಟ್ಟಿಲ್ಲ ಎಂದಳು" ಎಂಬುದಾಗಿ ತಿಳಿಸಿದ್ದರು.












Click it and Unblock the Notifications