ಹಾವೇರಿ ಜಿಲ್ಲಾ ಪೊಲೀಸ್ ರಿಂದ ನೂತನ ವೆಬ್ ಸೈಟ್

ಹಾವೇರಿ, ಜುಲೈ 10: ಜಿಲ್ಲಾ ಪೊಲೀಸ್ 'ಪಾರದರ್ಶಕತೆ' ಮತ್ತು 'ಜನಸ್ನೇಹಿ'ಯತ್ತ ಮಹತ್ವದ ಹೆಜ್ಜೆ ಇರಿಸಿದ್ದು, ಇಲಾಖೆಯ ಮಾಹಿತಿಗಳು ಇನ್ಮುಂದೆ ಬೆರಳ ತುದಿಯಲ್ಲಿ ಸಿಗಲಿವೆ. ಹೌದು ಇದಕ್ಕಾಗಿ ಎಸ್ಪಿ ಸಿ. ವಂಶಿಕೃಷ್ಣ ಅವರು ನೂತನ 'ಹಾವೇರಿ ಜಿಲ್ಲಾ ಪೊಲೀಸ್ ವೆಬ್ ಸೈಟ್' https://www.haveripolice.co ಗೆ ಇತ್ತೀಚೆಗೆ ಚಾಲನೆ ನೀಡಿದ್ದು, ಸಾರ್ವಜನಿಕರು ಸುಲಭವಾಗಿ ಮಾಹಿತಿ ಪಡೆಯಲು ಸಾಧ್ಯವಾಗಿದೆ.

ತಂತ್ರಜ್ಞಾನ ಬಳಕೆ ಮೂಲಕ ಇಲಾಖೆಗೆ 'ಪಾರದರ್ಶಕತೆ' ಹಾಗೂ 'ಜನಸ್ನೇಹಿ' ಸ್ವರೂಪ ನೀಡಲು ಮುಂದಾಗಿರುವ ಇಲಾಖೆ, ಪೊಲೀಸ್ ಧ್ಯೇಯೋದ್ದೇಶಗಳು, ಜಿಲ್ಲೆಯ ಸಂಕ್ಷಿಪ್ತ ಪರಿಚಯ, ಜಿಲ್ಲೆಯ ಪೊಲೀಸ್ ಅಧಿಕಾರಿಗಳ ವಿವರ, ಪ್ರಮುಖ ಕಾರ್ಯಕ್ರಮಗಳ ಫೊಟೋ, ಇಲಾಖೆಯ ಶ್ರೇಣೀಕೃತ ವ್ಯವಸ್ಥೆ, ಇಲಾಖೆಯ ವಿವಿಧ ವಿಭಾಗಗಳು, ಪೊಲೀಸ್ ಉಪವಿಭಾಗ, ವೃತ್ತಗಳು, ಠಾಣೆಗಳು ಸೇರಿದಂತೆ ಎಲ್ಲ ಮಾಹಿತಿಯನ್ನು ಇದರಲ್ಲಿ ನೀಡಲು ಮುಂದಾಗಿದೆ. ಜತೆಗೆ ಹಿರಿಯ ಅಧಿಕಾರಿಗಳ ಸಂಪರ್ಕದ ಮೊಬೈಲ್ ಹಾಗೂ ದೂರವಾಣಿ ಸಂಖ್ಯೆಗಳೂ ಇದರಲ್ಲಿವೆ.

Haveri police information gets on finger now

ಎಸ್ಪಿಗಳ ಮಾಹಿತಿ
ಜಿಲ್ಲೆ ಆರಂಭದಾಗಿನಿಂದ ಹಿಡಿದು ಈವರೆಗೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಪೊಲೀಸ್ ವರಿಷ್ಠಾಧಿಕಾರಿಗಳ ವಿವರಗಳನ್ನು ವೆಬ್‌ಸೈಟ್ ಒಳಗೊಂಡಿದೆ. ಪೊಲೀಸ್ ಇಲಾಖೆಯಲ್ಲಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಎಸ್ಪಿ ವಂಶಿಕೃಷ್ಣ ಅವರ ಪ್ರಯತ್ನಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ಇತರ ಮಾಹಿತಿಯೂ ಲಭ್ಯ
ಸಂಚಾರದ ನಿಯಮಾವಳಿಗಳು ಹಾಗೂ ದಂಡಗಳ ವಿವರ, ಸಂಚಾರ ನಿಯಮಾವಳಿಯ ಸಂಕೇತ ಹಾಗೂ ಸಂಜ್ಞೆಗಳು ವೆಬ್ಸೈಟ್ ನಲ್ಲಿವೆ. ಸಾರ್ವಜನಿಕರಿಗೆ ಅಷ್ಟಾಗಿ ಪರಿಚಿತವಲ್ಲದ ಇಲಾಖೆಯೊಳಗಿನ ವಿವಿಧ ವಿಭಾಗಗಳು ಹಾಗೂ ಅದರ ಕರ್ತವ್ಯದ ಬಗ್ಗೆ ಸ್ಪಷ್ಟ ಮಾಹಿತಿಯನ್ನೂ ಇದು ಒಳಗೊಂಡಿದೆ.

Haveri police information gets on finger now

ಇಲಾಖೆಯ ಸುತ್ತೋಲೆ, ಆದೇಶಗಳು, ಸಕಾಲ, ಪೊಲೀಸ್ ದೂರು ಪ್ರಾಧಿಕಾರ, ಇಲಾಖೆಯೊಳಗಿನ ಪ್ರತಿ ವಿಭಾಗಗಳ ಕರ್ತವ್ಯ ಹಾಗೂ ಕಾರ್ಯನಿರ್ವಹಣೆ, ಪ್ರತಿನಿತ್ಯ ದಾಖಲಾದ ಪ್ರಕರಣಗಳ ಮಾಹಿತಿ, ಪತ್ರಿಕಾ ಪ್ರಕಟಣೆ, ಕಾನೂನು ತಿದ್ದುಪಡಿಗಳು, ತುರ್ತು ಸಹಾಯವಾಣಿಯ ವಿವರಗಳು, ನಾಪತ್ತೆಯಾದವರ ವಿವರ, ಪ್ರತಿ ಠಾಣೆಗಳ ನಕಾಶೆ ಸೇರಿದಂತೆ ಇನ್ನೂ ಹಲವು ಮಾಹಿತಿಗಳನ್ನು ಒಳಗೊಂಡಿರುವ ಈ 'ವೆಬ್‌ಸೈಟ್' ಮಾಹಿತಿ ಕಣಜವಾಗಿದೆ.

'ನೊಂದವರಿಗೆ ನೇರ ನೆರವು'
ಈ ವೆಬ್‌ಸೈಟ್ ಮೂಲಕ ನೀವು ನಿಮ್ಮ ಪೊಲೀಸ್ ಠಾಣೆ ಹಾಗೂ ವಾರ್ಡ್ ವ್ಯಾಪ್ತಿಗೆ ನಿಯೋಜಿಸಲಾದ ಗಸ್ತು ಪೊಲೀಸ್ ಹಾಗೂ ಅವರ ಮೊಬೈಲ್ ಸಂಖ್ಯೆಯನ್ನು ಪಡೆಯಬಹುದು. ಅವರ ಮೇಲಿನ ಉಸ್ತುವಾರಿ ಅಧಿಕಾರಿಯ ಮಾಹಿತಿಯೂ ಲಭ್ಯ.

ಸ್ಥಳೀಯವಾಗಿ ನಿಮ್ಮ ದೂರುಗಳನ್ನು ನಿರಾಕರಿಸಿದರೂ, ನಿಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆ ನೋಂದಾಯಿಸುವ ಮೂಲಕ ನೇರವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಬಹುದಾದ ಅವಕಾಶವನ್ನೂ ಈ ವೆಬ್‌ಸೈಟ್ ಒಳಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+