SWR: ಹಾಸನಾಂಬ ಉತ್ಸವ ಪ್ರಯುಕ್ತ ವಿಶೇಷ, ಮೆಮು ರೈಲುಗಳ ಕಾರ್ಯಾಚರಣೆ, ವೇಳಾಪಟ್ಟಿ
ಬೆಂಗಳೂರು: ರಾಜ್ಯದ ಪ್ರಮುಖ ಧಾರ್ಮಿಕ ಆಚರಣೆಯಲ್ಲಿ ಒಂದಾದ ಹಾಸನದ ಶ್ರೀ ಹಾಸನಾಂಬ ಮಹೋತ್ಸವ-2026 ಇದೇ ಅಕ್ಟೋಬರ್ 29ರಿಂದ ಜರುಗಲಿದೆ. ಇಲ್ಲಿಗೆ ತೆರಳವ ಭಕ್ತರು, ಪ್ರಯಾಣಿಕರಿಗೆ ಅನುಕೂಲ ಒದಗಿಸಲು, ಹಬ್ಬದ ಹೆಚ್ಚುವರಿ ದಟ್ಟಣೆ ನಿರ್ವಹಣೆಗಾಗಿ ನೈರುತ್ಯ ರೈಲ್ವೆ ವಲಯವು ವಿಶೇಷ ರೈಲುಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ಇದರ ವೇಳಾಪಟ್ಟಿ, ಸಮಯ, ವಿವರ ಇಲ್ಲಿದೆ.
ರೈಲ್ವೆ ವಲಯವು ಕೆಎಸ್‌ಆರ್ ಬೆಂಗಳೂರು-ಹಾಸನ-ಬೆಂಗಳುರು ಕೆಎಸ್ ಆರ್ ಹಾಗೂ ಅರಸೀಕೆರೆ-ಹಾಸನ ನಡುವೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಈ ವಿಶೇಷ ಸೇವೆಯನ್ನು ಅಕ್ಟೋಬರ್ 29 ರಿಂದ ನವೆಂಬರ್ 11ರವರೆಗೆ ಪಡೆಯಬಹುದಾಗಿದೆ.

ವಿಶೇಷ ರೈಲುಗಳ ವೇಳಾಪಟ್ಟಿ
ಕೆಎಸ್‌ಆರ್ ಬೆಂಗಳೂರು-ಹಾಸನ-ಕೆಎಸ್‌ಆರ್ ಬೆಂಗಳೂರು ಪ್ರತಿದಿನ ಎಕ್ಸ್‌ಪ್ರೆಸ್ ವಿಶೇಷ ರೈಲುಗಳು (06573/06574) ಪ್ರತಿ ದಿಕ್ಕಿನಲ್ಲಿ 14 ದಿನ ಟ್ರಿಪ್‌ಗಳ ಸೇವೆ ನೀಡಲಿವೆ. ಮೊದಲ ಟ್ರಿಪ್ ಅಕ್ಟೋಬರ್ 29 ರಂದು ಆರಂಭವಾಗಲಿದೆ.
* ಕೆಎಸ್‌ಆರ್ ಬೆಂಗಳೂರು-ಹಾಸನ ವಿಶೇಷ ಎಕ್ಸ್‌ಪ್ರೆಸ್ ರೈಲು (06573) ಬೆಂಗಳೂರು ನಿಲ್ದಾಣದಿಂದ ಬೆಳಗ್ಗೆ 07:30ಕ್ಕೆ ಹೊರಡುತ್ತದೆ. ಬೆಳಗ್ಗೆ 11:30ಕ್ಕೆ ಹಾಸನ ತಲುಪಲಿದೆ.
* ಮರಳಿ ಅದೇ ದಿಕ್ಕಿನಲ್ಲಿ ಹಾಸನ- ಕೆಎಸ್‌ಆರ್ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು (06574) ಹಾಸನದಿಂದ ನಿಲ್ದಾಣದಿಂದ ಸಂಜೆ 19 ಗಂಟೆಗೆ ಬಿಡುತ್ತದೆ. ರಾತ್ರಿ 22:30ರ ಹೊತ್ತಿಗೆ ಸುಮಾರಿಗೆ ಕೆಎಸ್‌ಆರ್ ಬೆಂಗಳೂರು ತಲುಪಲಿದೆ.
ಮಾರ್ಗ, ನಿಲುಗಡೆ ನಿಲ್ದಾಣಗಳು
ಎರಡು ಬದಿ ಸಂಚಾರ ವೇಳೆ ಈ ವಿಶೇಷ ರೈಲುಗಳು ಮಾರ್ಗ ಮಧ್ಯ ಯಶವಂತಪುರ, ನೆಲಮಂಗಲ, ಕುಣಿಗಲ್, ಯಡಿಯೂರು, ಬಿ.ಜಿ.ನಗರ, ಶ್ರವಣಬೆಳಗೊಳ, ಚನ್ನರಾಯಪಟ್ಟಣದಲ್ಲಿ ನಿಲುಗಡೆ ನೀಡಲಿವೆ.
21 ಬೋಗಿಗಳ ರೈಲುಗಳು
1 ಎಸಿ ಪ್ರಥಮ ದರ್ಜೆ, 1 ಎಸಿ 2-ಟೈಯರ್, 4 ಎಸಿ 3-ಟೈಯರ್, 9 ಸ್ಲೀಪರ್ ಕ್ಲಾಸ್, 4 ಸಾಮಾನ್ಯ 2ನೇ ದರ್ಜೆ, 1 ಲಗೇಜ್-ಕಮ್-ಬ್ರೇಕ್ ವ್ಯಾನ್, ಜನೆರೇಟರ್ ಕಾರ್ ಹಾಗೂ ದಿವ್ಯಾಂಗ ಸ್ನೇಹಿ ಕಂಪಾರ್ಟ್‌ಮೆಂಟ್ ಒಳಗೊಂಡು ಒಟ್ಟು 21ರೈಲು ಬೋಗಿಗಳು ಇದರಲ್ಲಿರಲಿವೆ.
ಅರಸೀಕೆರೆ-ಹಾಸನ ಮೆಮು ವಿಶೇಷ ರೈಲುಗಳ ಸಂಚಾರ
ಅರಸೀಕೆರೆ-ಹಾಸನ-ಅರಸೀಕೆರೆ ಮೆಮು ವಿಶೇಷ ರೈಲುಗಳು ಇದೇ ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ (ಭಾನುವಾರ ಹೊರತುಪಡಿಸಿ) ಪ್ರತಿ ದಿಕ್ಕಿನಲ್ಲಿ ಒಟ್ಟು 12 ಟ್ರಿಪ್ ಸೇವೆ ನೀಡಲಿವೆ ಎಂದು ರೈಲು ಅಧಿಕಾರಿಗಳು ತಿಳಿಸಿದ್ದಾರೆ.
* ಈ ರೈಲುಗಳ ಸಮಯ, ವೇಳಾಪಟ್ಟಿ ನೋಡುವುದಾದರೆ ಅರಸೀಕೆರೆ-ಹಾಸನ ಮೆಮು ರೈಲು (06291) ಹಾಸನ ನಿಲ್ದಾಣದಿಂದ ಬೆಳಗ್ಗೆ 11:30ಕ್ಕೆ ಹೊರಟು ಮಧ್ಯಾಹ್ನ 12:30ಕ್ಕೆ ಹಾಸನ ತಲುಪಲಿದೆ.
* ಮರಳಿ ಅದೇ ದಿಕ್ಕಿನಲ್ಲಿ ಹಿಂತಿರುಗುವಾಗ ಹಾಸನ-ಅರಸೀಕರೆ ಮೆಮು ರೈಲು (06292) ಹಾಸನದಿಂದ ಮಧ್ಯಾಹ್ನ 14:00ಕ್ಕೆ ಸಂಚಾರ ಆರಂಭಿಸಿ, 15:00 ಗಂಟೆಗೆ ಅರಸೀಕೆರೆ ತಲುಪಲಿದೆ.
ಇನ್ನೂ ಈ ರೈಲುಗಳು ಎರಡು ದಿಕ್ಕಿನಲ್ಲಿ ಹಬ್ಬನಘಟ್ಟ ಮತ್ತು ಬಾಗೇಶಪುರ ದಲ್ಲಿ ಕೆಲವು ನಿಮಿಷಗಳ ಕಾಲ ನಿಲ್ಲಲಿವೆ. ಈ ಮೆಮು ರೈಲುಗಳು ಒಟ್ಟು 08 ಬೋಗಿಗಳನ್ನು ಹೊಂದಿವೆ. ಕೈಗೆಟುಕುವ ದರದಲ್ಲಿ ಹಾಸನ ಉತ್ಸವಕ್ಕೆ ಹೋಗಿ ಬರಬಹುದು.


Click it and Unblock the Notifications
