7th Pay Commission: ತಾಲೂಕು ಕಛೇರಿ ಉಪ ತಹಶೀಲ್ದಾರ್ ವೇತನ ಎಷ್ಟು ಏರಿಕೆ?
ಬೆಂಗಳೂರು, ಸೆಪ್ಟೆಂಬರ್ 08: ಕರ್ನಾಟಕ ಸರ್ಕಾರ ಸರ್ಕಾರಿ ನೌಕರರ ಬೇಡಿಕೆಯಂತೆ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ನೀಡಿದ 558 ಪುಟಗಳ ಸಂಪುಟ-1ರ ವರದಿಯ ಶಿಫಾರಸು ಜಾರಿಗೊಳಿಸಲು ಒಪ್ಪಿಗೆ ನೀಡಿದೆ. 7ನೇ ವೇತನ ಆಯೋಗದ ಶಿಫಾರಸುಗಳ ಅನ್ವಯ ಆಗಸ್ಟ್ ತಿಂಗಳಿನಿಂದ ಜಾರಿಗೆ ಬರುವಂತೆ ಸರ್ಕಾರಿ ನೌಕರರ ವೇತನ, ಪಿಂಚಣಿ ಮತ್ತು ಭತ್ಯೆಗಳಲ್ಲಿ ಹೆಚ್ಚಳವಾಗಿದೆ. ಯಾವ ನೌಕರರಿಗೆ ಎಷ್ಟು ವೇತನ ಹೆಚ್ಚಾಗಲಿದೆ? ಎಂದು ಸಹ ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.
ಈ ಕುರಿತು ಡಾ. ರೇಜು ಎಂ. ಟಿ. ಸರ್ಕಾರದ ಕಾರ್ಯದರ್ಶಿ (ವೆಚ್ಚ) ಆರ್ಥಿಕ ಇಲಾಖೆ ವಿವಿಧ ನೌಕರರ ವೇತನ ಎಷ್ಟು ಹೆಚ್ಚಳ? ಎಂದು ವಿವರವಾದ ಆದೇಶದಲ್ಲಿ ತಿಳಿಸಿದ್ದಾರೆ. ಹಾಗಾದರೆ ತಾಲೂಕು ಕಛೇರಿಯಲ್ಲಿ ಕೆಲಸ ಮಾಡುವ ನೌಕರರ ವೇತನ ಎಷ್ಟು ಏರಿಕೆಯಾಗಲಿದೆ? ಎಂದು ಮಾಹಿತಿಯನ್ನು ನೀಡಿದ್ದಾರೆ, ಅವುಗಳ ವಿವರ ಇಲ್ಲಿದೆ.

ತಾಲ್ಲೂಕು ಕಛೇರಿಯಲ್ಲಿ ರಾಜಸ್ವ ನಿರೀಕ್ಷಕರ ಹುದ್ದೆಯಲ್ಲಿ ಕಾರ್ಯನಿವರ್ಹಿಸುತ್ತಿರುವ 'ಬಿ' ಎಂಬುವವರು ಹುದ್ದೆಗೆ ಅನ್ವಯಿಸುವ 2018ರ ಪರಿಷ್ಕೃತ ವೇತನ ಶ್ರೇಣಿಯ ಆಯ್ಕೆಕಾಲಿಕ ವೇತನ ಶ್ರೇಣಿ ರೂ. 30350- 50250 ರಲ್ಲಿ ವೇತನ ಪಡೆಯುತ್ತಿದ್ದು, ದಿನಾಂಕ 18.11.2022 ರಂದು 2018ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ರೂ. 37900-70850ರ ವೇತನ ಶ್ರೇಣಿಯ ಉಪ-ತಹಶೀಲ್ದಾರ್ ಹುದ್ದೆಗೆ ಪದೋನ್ನತಿ ಹೊಂದಿರುತ್ತಾರೆ. ನೌಕರನ ವೇತನ ವಿವರಗಳು ಈ ಕೆಳಕಂಡಂತಿದೆ.
1ನೇ ಜುಲೈ 2022 ರಂದು ಧಾರಣೆ ಮಾಡಿದ ಹುದ್ದೆಯ ಪದನಾಮ ಮತ್ತು ವಾರ್ಷಿಕ ವೇತನ ಬಡ್ತಿ ದಿನಾಂಕ. ರಾಜಸ್ವ ನಿರೀಕ್ಷಕರು, 1ನೇ ಜನವರಿ. ಹುದ್ದೆಗೆ ಅನ್ವಯಿಸುವ ಪ್ರಸಕ್ತ ಆಯ್ಕೆಕಾಲಿಕ ವೇತನ ಶ್ರೇಣಿ 30350-750-32600-850-36000-950-39800-1100-46400-1250-53900-1450-58250 ರೂ.ಗಳು.
1ನೇ ಜುಲೈ 2022ರಂದು ಇದ್ದಂತೆ ಪ್ರಸಕ್ತ ಆಯ್ಕೆಕಾಲಿಕ ವೇತನ ಶ್ರೇಣಿಯಲ್ಲಿ ಪಡೆಯುತ್ತಿರುವ ಮೂಲ ವೇತನ. ರೂ. 36,000. ಉಪತಹಶೀಲ್ದಾರ್ ಹುದ್ದೆಯ ಪ್ರಸಕ್ತ ವೇತನ ಶ್ರೇಣಿ ರೂ.37900-950-39800-1100-46400-1250-53900-1450-62600-1650-70850.
ದಿನಾಂಕ 18.11.2022ರಿಂದ ಅನ್ವಯವಾಗುವಂತೆ ಪದೋನ್ನತಿ ಹೊಂದಿದ ಉಪತಹಶೀಲ್ದಾರ್ ಹುದ್ದೆಯಲ್ಲಿ ನಿಗದಿಪಡಿಸಿದ ವೇತನ. ರೂ. 37,900. ಪ್ರಸಕ್ತ ವೇತನ ಶ್ರೇಣಿಯಲ್ಲಿ ಮುಂದಿನ ವೇತನ ಬಡ್ತಿಯ ದಿನಾಂಕ. 1ನೇ ಜುಲೈ, 2023.
2024ನೇ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಸರ್ಕಾರಿ ನೌಕರನ ವೇತನವನ್ನು ಈ ಕೆಳಕಂಡಂತೆ ಪುನರ್ ನಿಗದಿಪಡಿಸಿದೆ.
* ಹುದ್ದೆಗೆ ಅನ್ವಯವಾಗುವ ಪರಿಷ್ಕೃತ ಆಯ್ಕೆಕಾಲಿಕ ವೇತನ ಶ್ರೇಣಿ. ರೂ. 49050-1250-52800-1375-58300-1500-64300-1650-74200-1900-85600-2300-92500.
* 1ನೇ ಜುಲೈ 2022 ರಿಂದ ಜಾರಿಗೆ ಬರುವಂತೆ ಪರಿಷ್ಕೃತ ಆಯ್ಕೆಕಾಲಿಕ ವೇತನ ಶ್ರೇಣಿಯಲ್ಲಿ ಕಾಲ್ಪನಿಕವಾಗಿ ನಿಗದಿಪಡಿಸಬೇಕಾದ ಮೂಲ ವೇತನ. ರೂ. 58,300.
* ಉಪ-ತಹಶೀಲ್ದಾರ್ ಹುದ್ದೆಗೆ ಅನ್ವಯಿಸುವ ಪರಿಷ್ಕೃತ ವೇತನ ಶ್ರೇಣಿ. ರೂ. 61300-1500-64300-1650-74200-1900-85600-2300-99400-2700-112900.
* ದಿನಾಂಕ 18.11.2022 ರಿಂದ ಅನ್ವಯವಾಗುವಂತೆ ಪದೋನ್ನತಿ ಹೊಂದಿದ ಉಪ-ತಹಶೀಲ್ದಾರ್ ವೃಂದದ ಹುದ್ದೆಯಲ್ಲಿ ಕಾಲ್ಪನಿಕವಾಗಿ ವೇತನ ನಿಗದಿ. ರೂ. 61,300.
* 01.07.2023 ರಂದು ವಾರ್ಷಿಕ ವೇತನ ಬಡ್ತಿಯನ್ನು ಬಿಡುಗಡೆ ಮಾಡಿ ಕಾಲ್ಪನಿಕವಾಗಿ ವೇತನ ನಿಗದಿ. ರೂ. 62,800.
* 01.07.2024ರಂದು ಲಭ್ಯವಿರುವ ವಾರ್ಷಿಕ ವೇತನ ಬಡ್ತಿಯನ್ನು ಬಿಡುಗಡೆ ಮಾಡಿ ಕಾಲ್ಪನಿಕವಾಗಿ ವೇತನ ನಿಗದಿ. ರೂ. 64,300. ಆರ್ಥಿಕ ಸೌಲಭ್ಯವು 01.08.2024 ರಿಂದ ಪ್ರಾಪ್ತವಾಗುತ್ತದೆ. ಮುಂದಿನ ವಾರ್ಷಿಕ ವೇತನ ಬಡ್ತಿ. 1ನೇ ಜುಲೈ 2025.












Click it and Unblock the Notifications