Guarantee Schemes: ಬಿಪಿಎಲ್‌ ಕಾರ್ಡುದಾರರಿಗೆ ಮಾತ್ರ ಗ್ಯಾರಂಟಿ ಯೋಜನೆ: ವಿಧಾನಸಭೆಯಲ್ಲಿ ಮಹತ್ವದ ಚರ್ಚೆ

ಬೆಂಗಳೂರು: ರಾಜ್ಯದ ಗ್ಯಾರಂಟಿ ಯೋಜನೆಗಳ ಲಾಭ ಯಾರಿಗೆ ಮುಂದುವರಿಯಬೇಕು ಎಂಬ ವಿಚಾರ ಇದೀಗ ವಿಧಾನಸಭೆಯಲ್ಲಿ ಚರ್ಚೆಗೆ ಬಂದಿದೆ. ಗ್ಯಾರಂಟಿ ಯೋಜನೆಗಳನ್ನು ಬಿಪಿಎಲ್ಕಾರ್ಡುದಾರರಿಗೆ ಮಾತ್ರ ಸೀಮಿತಗೊಳಿಸುವ ಪ್ರಸ್ತಾಪದ ಕುರಿತು ಸದನದಲ್ಲಿ ಮಹತ್ವದ ಚರ್ಚೆ ನಡೆದಿದ್ದು, ಸರ್ಕಾರದ ಮುಂದಿನ ನಿಲುವಿನತ್ತ ಇದೀಗ ಗಮನ ನೆಟ್ಟಿದೆ.

ಗ್ಯಾರಂಟಿ ಯೋಜನೆಗಳನ್ನು ಉಳ್ಳವರಿಗೆ ಕೊಡಬೇಡಿ ಎಂದು ಹೇಳುತ್ತಿದ್ದೀರ. ಹಾಗಾದರೆ ನಿಮ್ಮ ಪ್ರಕಾರ, ಬಡವರು, ಉಳ್ಳವರು ಅಂದರೆ ಯಾರು, ಹೇಗೆ ವಿಂಗಡಿಸುತ್ತೀರಿ ಎನ್ನುವುದನ್ನು ವಿವರಿಸಿ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ವಿಧಾನಸಭೆಯಲ್ಲಿ ವಿಪಕ್ಷಗಳಿಗೆ ತಿರುಗೇಟು ನೀಡಿದರು.

Guarantee Schemes Should Karnataka Schemes Be Limited to BPL Cardholders DK Shivakumar Questions in Assembly

Guarantee Schemes: ಗ್ಯಾರಂಟಿ ಯೋಜನೆಗಳು ಬಡವರಿಗೆ ಮಾತ್ರ

ವಿಧಾನಸಭೆಯಲ್ಲಿ ಬುಧವಾರ ಬರ ಪರಿಸ್ಥಿತಿಯ ಚರ್ಚೆಯ ಸಂದರ್ಭದಲ್ಲಿ ಶಾಸಕ ಸಿದ್ದು ಸವದಿ ಅವರು, ರೈತರಿಗೆ ಗ್ಯಾರಂಟಿಗಳನ್ನು ನಿಲ್ಲಿಸಿ. ಆ ಹಣವನ್ನು ಬರಪರಿಹಾರಕ್ಕೆ ಬಳಸಿ ಎಂದು ಸಲಹೆ ನೀಡಿದರು. ಇದಕ್ಕೆ ದನಿಗೂಡಿಸಿದ ಬಿಜೆಪಿ ಶಾಸಕ ಸುರೇಶ್ ಗೌಡ, ಬರಗಾಲದಲ್ಲಿ ಗ್ಯಾರಂಟಿಗಳನ್ನು ಬಡವರಿಗೆ ಮಾತ್ರ ತಲುಪುವಂತೆ ಮಾಡಿ ಎಂದು ಆಗ್ರಹಿಸಿದರು. ಆಗ ಮುಖ್ಯಮಂತ್ರಿ ಬಡವರು, ಉಳ್ಳವರು ಎಂದು ಹೇಗೆ ವಿಗಂಡಣೆ ಮಾಡುತ್ತೀರಿ ಎಂದು ಉತ್ತರಿಸಿದರು.

ನಮ್ಮ ಶಕ್ತಿ ಯೋಜನೆ ಬಳಸಿ ರೈತ ಮಹಿಳೆಯರು ಓಡಾಡುತ್ತಿದ್ದಾರೆ. ರೈತನ ಮನೆಯ ಯಜಮಾನಿಗೆ ಗೃಹಲಕ್ಷ್ಮೀ ಯೋಜನೆ ತಲುಪುತ್ತಿದೆ. ರೈತರ ಮನೆಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ರೈತ ಕುಟುಂಬಕ್ಕೂ 10 ಕೆಜಿ ಅಕ್ಕಿಯನ್ನೂ ಕೊಡುತ್ತಿದ್ದೇವೆ. ಇವರಲ್ಲಿ ಯಾರಿಗೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕು ಅಂತ ಹೇಳಿ. ನಿಮ್ಮ ಸಲಹೆಯನ್ನು ಪರಿಗಣಿಸೋಣ ಎಂದರು. ‌

Guarantee Schemes: BPL ಕಾರ್ಡುದಾರರು ಮಾತ್ರ ಬಡವರು: ಸುರೇಶ್‌ ಗೌಡ

ಸುರೇಶ್ ಅವರೇ, ನೀವು ಬಡವರು, ಉಳ್ಳವರು ಅಂತ ಹೇಗೆ ವಿಂಗಡಣೆ ಮಾಡ್ತೀರ? ಎನ್ನುವುದನ್ನು ವಿವರಿಸಿ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೇಳಿದಾಗ, ಸುರೇಶ್ ಗೌಡರು, ಬಿಪಿಎಲ್ ಕಾರ್ಡುದಾರರು ಮಾತ್ರ ಬಡವರು ಎಂದು ಹೇಳಿದರು.

ಹಾಗಾದರೆ, 'ಬಿಪಿಎಲ್ ಕಾರ್ಡ್ ದಾರರಿಗೆ ಮಾತ್ರ ಗ್ಯಾರಂಟಿಗಳನ್ನು ಕೊಟ್ಟು ಮಿಕ್ಕವರಿಗೆ ಗ್ಯಾರಂಟಿ ಯೋಜನೆಯನ್ನು ರದ್ದು ಮಾಡಬೇಕೆ, ಅದನ್ನು ಎದ್ದು ನಿಂತು ಸದನಕ್ಕೆ ಹೇಳಿ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೂಚಿಸಿದರು.

ಬಡವರಿಗೆ ಮಾತ್ರ ಗ್ಯಾರಂಟಿ ಯೋಜನೆ

ಸುರೇಶ್ ಗೌಡರು, ಹೌದು, ನಾನು ಧೈರ್ಯವಾಗಿ ಬಡವರಿಗೆ ಮಾತ್ರ ಗ್ಯಾರಂಟಿ ಯೋಜನೆಗಳನ್ನು ಕೊಡಿ ಎಂದು ಹೇಳುತ್ತಿದ್ದೇನೆ. ಬರಗಾಲದಲ್ಲಿ ಸರ್ಕಾರ ನಡೆಸುವುದು ಕಷ್ಟ ಆಗುತ್ತದೆ ಎಂದರು. ಹಾಗಾದರೆ, ನಿಮ್ಮ ಪ್ರಕಾರ ಬಿಪಿಎಲ್ ಕಾರ್ಡು ಹೊಂದಿರುವವರಿಗೆ ಮಾತ್ರ ಗ್ಯಾರಂಟಿ ಯೋಜನೆ ನೀಡಬೇಕಾ ಅಂತ ಮತ್ತೆ ಸಿಎಂ ಡಿ ಕೆ ಶಿವಕುಮಾರ್‌ ಅವರು ಮರುಪ್ರಶ್ನೆ ಮಾಡಿದರು.

ಮಧ್ಯೆ ಪ್ರವೇಶ ಮಾಡಿದ ಶಾಸಕ ವಿಜಯೇಂದ್ರ "ಸರ್ಕಾರದಲ್ಲಿ ಹಣ ಇಲ್ಲ ಅಂತ ಬಿಪಿಎಲ್ ಕಾರ್ಡ್ ಗಳನ್ನು ಸರ್ಕಾರವೇ ರದ್ದು ಮಾಡುತ್ತಿದೆ. ಈ ಬಗ್ಗೆ ನಾವ್ಯಾಕೆ ಮಾತನಾಡಬೇಕು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು, ವಿಜಯೇಂದ್ರ ಅವರೇ, ನೀವ್ಯಾಕೆ ಕಷ್ಟ ಪಡುತ್ತಿದ್ದೀರಿ. ನಿಮ್ಮ ಶಾಸಕರು ಅವರ ಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ಅವಕಾಶ ಕೊಡಿ ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ವಿಜಯೇಂದ್ರ, ನಿಮ್ಮ ಭಾವನೆಯನ್ನು ಅವರು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದರು. ವಿಜಯೇಂದ್ರ ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ ಸಿಎಂ, ನಿಮ್ಮ ಶಾಸಕರು ನನ್ನ ಭಾವನೆ ಅರ್ಥ ಮಾಡಿಕೊಂಡಿರುವುದಕ್ಕೆ ನನಗೂ ಅವರಿಗೂ ಮಾತಿನ ಸಂಪರ್ಕ ಏರ್ಪಟ್ಟಿರುವುದು ಎಂದು ಛೇಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+