ಡಿಕೆ ಶಿವಕುಮಾರ್ ಅವರೇ.. ಒಂದು ಬಾರಿ ನಾನು ಸಿಎಂ ಆಗ್ತೀನಿ ಎಂದು ಹೇಳಿ ನೋಡೋಣ: ದೇವೇಗೌಡ ಸವಾಲ್
ಬೆಂಗಳೂರು, ಅಕ್ಟೋಬರ್ 09: ಡಿ ಕೆ ಶಿವಕುಮಾರ್ ಅವರೇ ನಿಮ್ಮದು ಉತ್ತರ ಕುಮಾರನ ಪೌರುಷ. ಐದು ವರ್ಷ ನಾನೇ ಸಿಎಂ ಆಗಿರ್ತೇನೆ ಎಂದು ಸಿದ್ದರಾಮಯ್ಯ ಹೇಳ್ತಿದ್ದಾರೆ. ಒಂದು ಬಾರಿ ಎರಡುವರೆ ವರ್ಷ ನಾನು ಸಿಎಂ ಆಗ್ತೀನಿ ಎಂದು ಹೇಳಿ ನೋಡೋಣ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಸವಾಲ್ ಹಾಕಿದ್ದಾರೆ
ಈ ಕುರಿತು ಜೆಡಿಎಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರದ್ದು ಉತ್ತರನ ಪೌರುಷ. ಸೋನಿಯಾ ನಮ್ಮ ತಾಯಿ, ಪ್ರಿಯಾಂಕ ನನ್ನ ಸಹೋದರಿ ಅಂದ್ರಿ. ಒಂದೇ ಒಂದು ಬಾರಿ ಅಧಿಕಾರ ಕೊಡಿ ಅಂದ್ರಿ ನೀವು ಸಿಎಂ ಆದ್ರಾ..? ನಾನೂ ಎರಡೂವರೆ ವರ್ಷ ಮುಖ್ಯಮಂತ್ರಿ ಅಂತ ಹೇಳೋ ತಾಕತ್ತು ಇಲ್ವ ಡಿಕೆ ಶಿವಕುಮಾರ್ ಅವರೇ ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯಗೆ ಇರುವ ಎದೆಗಾರಿಕೆ ನಿಮಗೆ ಇಲ್ವಲ್ಲ. ಉತ್ತರನ ಪೌರುಷ ನಿಮ್ಮದು ಅಂತ ಜನ ಮಾತನಾಡುತ್ತಿದ್ದಾರೆ. ಮೈತ್ರಿ ಸರ್ಕಾರ ಯಾರು ತೆಗೆದ್ರು ಅಂತ ಕುಮಾರಸ್ವಾಮಿಗೆ ಇಂಚಿಂಚೂ ಗೊತ್ತಿದೆ. ಕುಮಾರಸ್ವಾಮಿ ಅವರಿಗೆ ಮಾತ್ರ ಗೊತ್ತು, ನಮ್ಮ ಯಾವ ಶಾಸಕರ ಜೊತೆ ಅದನ್ನ ಹಂಚಿಕೊಂಡಿಲ್ಲ. ಈಗ ಒಂದೊಂದೆ ಹೇಳುತ್ತಿದ್ದಾರೆ, ಜನರಿಗೆ ಸತ್ಯವನ್ನ ಹೇಳಬೇಕು ಎಂದು ಹೇಳಿದರು.
ಈ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ. ಇನ್ನೇನೂ ಎಚ್ಚೆತ್ತುಕೊಳ್ಳೊದು, ಹುರುಳಿ ಹಾಕಬೇಕಷ್ಟೆ. ಮಳೆ ಇಲ್ಲದೆ ರೈತನ ಬೆಳೆ ಹಾಳಾಗಿದೆ. ರೈತರಿಗೆ ನೆಯವಾಗುವುದನ್ನ ಬಿಟ್ಟು ಜೆಡಿಎಸ್‌ನವರು ಬರ್ರಿ, ನಮ್ಮ ಜೊತೆ ಬನ್ನಿ ಎಂದು ಕರಿತಾರೆ. ಕೆಂಪಣ್ಣ ಎಲ್ಲಿ ಹೋದ್ರೊ ಗೊತ್ತೆ ಇಲ್ಲ. ಗುತ್ತಿಗೆದಾರರ ಪರಿಸ್ಥಿತಿ ಏನಾಗಿದೆ.? ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ನವರು ಮುಂದಿನ ಚುನಾವಣೆಗೆ ನಿಲ್ಲಲ್ಲ ಅಂತಾರೆ ಆದರೆ ಮುಂದೆ ಅಧಿಕಾರದಲ್ಲಿ ಇರ್ತೇನೆ ಅಂತಾರೆ. ಕಾವೇರಿಯಿಂದ ಕನ್ಯಾಕುಮಾರಿವರೆಗೂ ಕುರುಬರಿದ್ದೀರಿ. ಎಸ್ಟಿಗೆ ಸೇರಿಸಲು ಕೇಂದ್ರಕ್ಕೆ ಕಳುಹಿಸಿದ್ದೇನೆ ಎಂದು ಹೇಳಿದ್ದಾರೆ ಎಂದು ಹೇಳಿದರು.

ರಾಜ್ಯ ಸರ್ಕಾರ 5 ತಿಂಗಳು ಆಯ್ತು, 30 ವರ್ಷಗಳಿಂದ ನಮ್ಮ ಪಕ್ಷಕ್ಕೆ ಇಷ್ಟು ಬೆಂಬಲ ಸಿಕ್ಕಿರಲಿಲ್ಲ ಎಂದು ಹೇಳಿ 5 ಗ್ಯಾರಂಟಿಗಳನ್ನ ಜಾರಿಗೊಳಿಸಿ 20 ಕ್ಷೇತ್ರ ಗೆಲ್ಲುವುದೇ ಗುರಿ ಎಂದು ಹೊರಟ್ಟಿದ್ದಾರೆ.
ಸಿಎಂ ಅವರು ಮೈಸೂರಿನಲ್ಲಿ ಬಸವಜಯಂತಿ ಕಾರ್ಯಕ್ರಮದಲ್ಲಿ ಆತ್ಮಾವಲೋಕನ ಮಾಡಿಕೊಂಡಿದ್ದಾರೆ. ಭಾರತದಲ್ಲಿ ಕೃಷಿ ಕ್ಷೇತ್ರ ಅಭಿವೃದ್ಧಿ ಆಗದೆ ದೇಶದ ಅಭಿವೃದ್ಧಿ ಆಗದು ಎಂದಿದ್ದಾರೆ. ರೈತರು ಅಭಿವೃದ್ಧಿ ಆಗಬೇಕೆಂದು ಹೇಳಿದ್ದಾರೆ. ನೀವು ಬಂದು 5 ತಿಂಗಳು ಆಯ್ತು ಬೀಕರ ಬರಗಾಲ ಸೃಷ್ಟಿಯಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದರು.
ಹಿಂದೆಂದೂ ಕಂಡರಿಯದ ಬರಗಾಲದಲ್ಲಿ ತಾವು ಇದುವರೆಗೂ ಒಂದೇ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಯಾವುದೇ ಸಚಿವ ರೈತರ ಬಳಿ ಹೋಗಿ ಧೈರ್ಯ ತುಂಬುವ ಕೆಲಸ ಮಾಡಲಿಲ್ಲ.
ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರಿಗೆ ರಾಜ್ಯ ಸರ್ಕಾರ ನೀಡುತ್ತಿದ್ದ 4000 ನಿಲ್ಲಿಸಿದ್ದಿರಲ್ಲ. ಎನ್ ಡಿ ಆರ್ ಎಫ್ ನಡಿ ಪರಿಹಾರ ಕೊಡಿ ಎಂದು ಕೇಂದ್ರಕ್ಕೆ ಮನವಿ ಮಾಡುವುದು ಸಾಮಾನ್ಯ. ಆದರೆ ನೀವು ಬರ ಪರಿಹಾರಕ್ಕೆ ಇನ್ನು ಒಂದು ರೂಪಾಯಿ ಖರ್ಚು ಮಾಡಿಲ್ಲ ಎಂದು ಹೇಳಿದರು.
ಸರ್ಕಾರದ ಆರನೇ ಗ್ಯಾರೆಂಟಿ ಅನ್ನದಾತರ ಆತ್ಮಹತ್ಯೆ. ಅಕ್ಟೋಬರ್ ಮುಗಿದು ಚಳಿಗಾಲ ಬರುತ್ತಿದೆ, ಒಂದೇ ಒಂದು ಸಬ್ಸಿಡಿ ಯೋಜನೆ ಇಲ್ಲ. ಒಂದೇ ಒಂದು ಟ್ರಾಕ್ಟರ್, ಪವರ್ ಟಿಲ್ಲರ್ ಕೊಟ್ಟಿಲ್ಲ. ರೈತರು ಉರುಳಿ ಬಿತ್ತಬೇಕು ಅಷ್ಟೇ, ಈ ಸರ್ಕಾರಕ್ಕೆ ಕಿವಿ ಕಣ್ಣು ಇಲ್ಲ. ರಾಜ್ಯದಲ್ಲಿ ಯಾವತ್ತೂ ಇಂತಹ ದುಸ್ಥಿತಿ ಬಂದಿರಲಿಲ್ಲ, ಕಂಟ್ರಾಕ್ಟರ್ ಕೆಂಪಣ್ಣ ಕಾಣುತ್ತಿಲ್ಲ, ಸತ್ಯ ಹೇಳಿ ಎಷ್ಟು ಪರ್ಸೆಂಟ್ ಇದೆ ಅಂತ ಎಂದು ಹೇಳಿದ ಅವರು, ಒಂದೇ ಒಂದು ಗುಂಡಿ ಮುಚ್ಚುತ್ತಿಲ್ಲ ಎಂದರು.
200 ಯೂನಿಟ್ ಸುಳ್ಳು, 200 ಯೂನಿಟ್ ಸುಳ್ಳು, ಸುಳ್ಳು ಸುಳ್ಳು ಎಂದು ಡೈಲಾಗ್ ಹೊಡೆದ ಜಿ.ಟಿ.ದೇವೆಗೌಡ. ತಬ್ಬಲಿ ಮಕ್ಕಳಿಗೆ 2000 ರೂ ಗೃಹ ಲಕ್ಷ್ಮಿ ಯೋಜನೆ ಇಲ್ಲ. ಶಕ್ತಿ ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ಬಸ್ ಸಿಕ್ತಿಲ್ಲ, ಜನರಿಗೆ ಆರ್ಥಿಕವಾಗಿ ಶಕ್ತಿ ತುಂಬಿಸುವ ಯೋಜನೆ ರೂಪಿಸಿ ಎಂದು ಬಸವಣ್ಣ ಹೇಳಿದ್ರು. ನೀವು ಕೂತು ಊಟ ಮಾಡಿ , ಬಿಟ್ಟಿಭಾಗ್ಯ ಕೊಡ್ತಿವಿ ಎಂದು ಹೇಳಿದ್ದಿರಾ...?
ಕೃಷಿ ಇಲಾಖೆ ಸತ್ತು ಹೋಗಿದೆ, ಕೃಷಿಗೆ ಏನು ಅನುದಾನ ಕೊಟ್ಟಿಲ್ಲ. ರೈತರಿಗೆ ನೀವು ಕೊಟ್ಟಿರುವುದು 6 ನೇ ಗ್ಯಾರಂಟಿ ಆತ್ಮಹತ್ಯೆ. ಆತ್ಮಹತ್ಯೆ ಗ್ಯಾರಂಟಿ ಕೊಟ್ಟಿದ್ದೀರಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.












Click it and Unblock the Notifications