ಸರ್ಕಾರಿ ಇಲಾಖೆಗಳ ಬಾಡಿಗೆ ಕಟ್ಟಡಗಳಿಂದ ಜಿಎಸ್‌ಟಿ ಸಂಗ್ರಹ, ಸ್ಪಷ್ಟನೆ

ಬೆಂಗಳೂರು, ಡಿಸೆಂಬರ್ 28; ಕರ್ನಾಟಕ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹದ ಕುರಿತು ಸುತ್ತೋಲೆಯೊಂದನ್ನು ಹೊರಡಿಸಿದೆ. ಸಂಗ್ರಹ ಮಾಡಿದ ಜಿಎಸ್‌ಟಿಯನ್ನು ನಮೂನೆ ಜಿಎಸ್‌ಟಿಆರ್-3ಬಿಯಲ್ಲಿ ನಿಯಮಿತವಾಗಿ ಪಾವತಿಸಬೇಕು ಎಂದು ಹೇಳಿದೆ.

ನಿತೀಶ್ ಕೆ. ಉಪ ಕಾರ್ಯದರ್ಶಿ (ಆ ಮತ್ತು ಸಂ) ಆರ್ಥಿಕ ಇಲಾಖೆ ಈ ಕುರಿತು ಸುತ್ತೋಲೆಯನ್ನು ಹೊರಡಿಸಿದ್ದಾರೆ. ಈ ಸುತ್ತೋಲೆ ಸರ್ಕಾರಿ ಇಲಾಖೆಗಳ ಬಾಡಿಗೆ ಆದಾಯ ಮತ್ತು ಬಾಡಿಗೆ ಪಾವತಿಗಳ ಮೇಲೆ ಜಿಎಸ್‌ಟಿ ತೆರಿಗೆ ವಿಧಿಸುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.

GST Collection From Government Departments Rental Building

ಸರ್ಕಾರಿ ಇಲಾಖೆಗಳು ಸರ್ಕಾರದ ಒಡೆತನ ಹೊಂದಿದ ಆಸ್ತಿಯನ್ನು ವಾಣಿಜ್ಯ ಚಟುವಟಿಕೆಗಳಿಗೆ ಬಾಡಿಗೆಗೆ ನೀಡುತ್ತವೆ ಮತ್ತು ಸರ್ಕಾರೇತರ ಮೂಲಗಳಿಂದ ಬಾಡಿಗೆಗೆ ಸೇವೆಗಳನ್ನು ಸಹ ಪಡೆಯುತ್ತವೆ. ಹಲವಾರು ಇಲಾಖೆಗಳು ವಾಣಿಜ್ಯ ಜಾಗಗಳನ್ನು ಬಾಡಿಗೆಗೆ ಕೊಡುವುದು ಮತ್ತು ಬಾಡಿಗೆಗೆ ಪಡೆದುಕೊಳ್ಳುವುದರ ಮೇಲೆ ಜಿಎಸ್‌ಟಿ ಸಂದಾಯ ಮಾಡುವ ಕುರಿತು ಸರ್ಕಾರದ ಹೊಣೆಗಾರಿಕೆ ಬಗ್ಗೆ ಸ್ಪಷ್ಟೀಕರಣವನ್ನು ಕೋರಿವೆ.

ಬಾಡಿಗೆ ಸೇವೆಗಳನ್ನು ಒದಗಿಸಲು ಮತ್ತು ಸರ್ಕಾರೇತರ ಮೂಲಗಳಿಂದ ಪಡೆದ ಬಾಡಿಗೆ ಸೇವೆಗಳಿಗೆ ಸಂಬಂಧಿಸಿದಂತೆ ಜಿಎಸ್‌ಟಿ ವಿಧಿಸುವ ಬಗ್ಗೆ ಸರ್ಕಾರಿ ಇಲಾಖೆಗಳ ನಿಲುವನ್ನು ಸೃಷ್ಟಿಕರಿಸಲು ಈ ಸುತ್ತೋಲೆಯನ್ನು ಹೊರಡಿಸಲಾಗಿದೆ ಎಂದು ಹೇಳಿದೆ.

ಸರ್ಕಾರವು ಸಾರ್ವಜನಿಕ ಪ್ರಾಧಿಕಾರಗಳಂತೆ ಕಾರ್ಯ ನಿರ್ವಹಿಸುತ್ತಿದ್ದರು ಸಹ ವ್ಯವಹಾರದ ಪರಿಭಾಷೆಯು ಸರ್ಕಾರದ ಎಲ್ಲಾ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ವಾಣಿಜ್ಯ ಸ್ಥಳಗಳನ್ನು ಬಾಡಿಗೆಗೆ ಒದಗಿಸುವ ಚಟುವಟಿಕೆಯು ಜಿಎಸ್‌ಟಿ ಕಾನೂನಿನ ಪ್ರಕಾರ ತೆರಿಗೆದಾಯಕ ಸೇವೆಗಳ ಪೂರೈಕೆಯಾಗಿದೆ.

ಇದನ್ನು ಸೇವೆಗಳ ಪೂರೈಕೆಯ ಅಡಿಯಲ್ಲಿ ವರ್ಗೀಕರಿಸಲಾಗಿದೆ ಮತ್ತು ಅಧಿಸೂಚನೆ ಸಂಖ್ಯೆ-11/2017ರಲ್ಲಿ ಶಿರೋನಾಮ 9973 ಅಡಿಯಲ್ಲಿ ನಮೂದನ್ನು ಒದಗಿಸಿದೆ ನಿರ್ವಾಹಕನ ಸಹಿತ ಅಥವಾ ನಿರ್ವಾಹಕನ ರಹಿತವಾದ ಭೋಗ್ಯದ ಮತ್ತು ಬಾಡಿಗೆ ಸೇವೆಗಳು. ಅಂತಹ ಬಾಡಿಗೆ ಸೇವೆಗಳ ಪೂರೈಕೆಯ ಮೇಲೆ ತೆರಿಗೆ ದರವು ದಿನಾಂಕ 1/7/2017 ರಿಂದ ಶೇ.18ರಷ್ಟಿದೆ.
ಈ ಅಂಶಗಳ ಹಿನ್ನೆಲೆಯಲ್ಲಿ, ಎಲ್ಲಾ ಸರ್ಕಾರಿ ಇಲಾಖೆಗಳಿಗೆ ಈ ಕೆಳಗಿನಂತೆ ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿಸಿದೆ.

ಸೂಚನೆಗಳು

* ಬಾಡಿಗೆ ಸೇವೆಗಳನ್ನು ಒಳಗೊಂಡಂತೆ, ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಮಾಡಿದ ಪೂರೈಕೆಗಳ ಒಟ್ಟು ವಹಿವಾಟು ವಾರ್ಷಿಕವಾಗಿ ರೂ. 20 ಲಕ್ಷಗಳನ್ನು ಮೀರಿದರೆ, ಜಿಎಸ್‌ಟಿ ಅಧಿನಿಯಮ ಅಡಿಯಲ್ಲಿ ನೋಂದಣಿಯನ್ನು ಪಡೆದುಕೊಳ್ಳಬೇಕು.

* ಒಂದು ವೇಳೆ, ಸರ್ಕಾರಿ ಇಲಾಖೆಗಳು ಜಿಎಸ್‌ಟಿ ಅಧಿನಿಯಮದಡಿ ನೋಂದಾಯಿಸಿದ ವ್ಯಕ್ತಿಗಳಿಗೆ ಬಾಡಿಗೆ ಸೇವೆಗಳನ್ನು ಒದಗಿಸಿದರೆ, ನೋಂದಾಯಿತ ವ್ಯಕ್ತಿಯು ಹಿಮ್ಮುಖ ತೆರಿಗೆ ವಿಧಿಸುವಿಕೆ ಕಾರ್ಯವಿಧಾನದಲ್ಲಿ ತೆರಿಗೆಯನ್ನು ಸಂದಾಯ ಮಾಡಬೇಕಾಗುತ್ತದೆ.

* ಇತರೆ ಸಂದರ್ಭಗಳಲ್ಲಿ, ಜಿಎಸ್‌ಟಿ ಅಧಿನಿಯಮದಡಿ ನೋಂದಾಯಿತನಲ್ಲದ ವ್ಯಕ್ತಿಗೆ ಬಾಡಿಗೆ ಸೇವೆಯನ್ನು ಒದಗಿಸಿದರೆ, ಸರ್ಕಾರಿ ಇಲಾಖೆಗಳು ನೋಂದಣಿಯನ್ನು ಪಡೆದುಕೊಳ್ಳಬೇಕು ಮತ್ತು ನಿಗದಿಪಡಿಸಿದ ಬಾಡಿಗೆ ಮೊತ್ತದ ಮೇಲೆ ಅಂಗಡಿ ನಿರ್ವಹಿಸುವ (Shopkeepers)/ ಬಾಡಿಗೆದಾರರಿಂದ ಶೇ.18ರಷ್ಟು (ಶೇ.9ರಷ್ಟು ಎಸ್‌ಜಿಎಸ್‌ಟಿ ಮತ್ತು ಶೇ.9ರಷ್ಟು ಸಿಜಿಎಸ್‌ಟಿ) ತೆರಿಗೆಯನ್ನು ಸಂಗ್ರಹಿಸಬೇಕು.

* ಸ್ಪಷ್ಟೀಕರಣವು ಸರ್ಕಾರೇತರ ಮೂಲಗಳಿಂದ ಸರ್ಕಾರಿ ಇಲಾಖೆಗಳು ಬಾಡಿಗೆ ಸೇವೆಗಳನ್ನು ಪಡೆಯಲು ಸಹ ಅನ್ವಯಿಸುತ್ತದೆ. ಸಂಗ್ರಹಿಸಿದ ಜಿ.ಎಸ್.ಟಿ. ಯನ್ನು ನಮೂನೆ ಜಿಎಸ್‌ಟಿಆರ್-3ಬಿಯಲ್ಲಿ ನಿಯಮಿತವಾಗಿ ಪಾವತಿಸಬೇಕು ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+