Gruha Jyothi: ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಮತ್ತು ಅಮೃತ ಜ್ಯೋತಿ ಫಲಾನುಭವಿಗಳಿಗೆ ಮಹತ್ವದ ಸೂಚನೆ

ಬೆಂಗಳೂರು : ರಾಜ್ಯದ 50 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ರಾಜ್ಯ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ಈ ಹಿಂದೆ ಜಾರಿಯಲ್ಲಿದ್ದ ಮೂರು ಜ್ಯೋತಿ ಯೋಜನೆಗಳನ್ನು ಗೃಹ ಜ್ಯೋತಿ ಯೋಜನೆಯಲ್ಲಿ ವಿಲೀನ ಮಾಡಿದೆ ಇದರೊಂದಿಗೆ 50 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಗೃಹಜೋತಿಯ ಲಾಭ ದಕ್ಕಲಿದೆ.

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳಲ್ಲಿ ಒಂದಾದ ಗೃಹ ಜ್ಯೋತಿಗೆ ನೋಂದಣಿ ಪ್ರಕ್ರಿಯೆ ಯಶಸ್ವಿಯಾಗಿ ನಡೆಯುತ್ತಿದೆ. 1.1 ಕೋಟಿಗೂ ಹೆಚ್ಚು ಅರ್ಜಿದಾರರು ಈಗಾಗಲೇ ಉಚಿತ ವಿದ್ಯುತ್ ಪಡೆಯಲು ನೋಂದಣಿ ಮಾಡಿಕೊಂಡಿದ್ದಾರೆ.

Gruha Jyothi: Karnataka Government Clarified About Bhagya Jyothi, Kuteera Jyothi and Kutira Jyothi

ಈಗಾಗಲೇ ಜಾರಿಯಲ್ಲಿರುವ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಮತ್ತು ಅಮೃತ ಜ್ಯೋತಿ ಯೋಜನೆಗಳ ಫಲಾನುಭವಿಗಳು ಗೃಹಜ್ಯೋತಿ ಯೋಜನೆಯಡಿ ಬರುತ್ತಾರ? ಇವರೂ ಕೂಡ 200 ಯುನಿಟ್ ವರೆಗೆ ಉಚಿತ ವಿದ್ಯುತ್ ಪಡೆಯಬಹುದಾ ಎನ್ನುವ ಗೊಂದಲಗಳು ಇದ್ದವು, ಈಗ ಎಲ್ಲದಕ್ಕೂ ಸ್ಪಷ್ಟನೆ ಸಿಕ್ಕಿದ್ದು, ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ.

ಮಾರ್ಗ ಸೂಚಿಯಲ್ಲಿ ಹೇಳಿರುವುದೇನು

ಇಂಧನ ಸಚಿವ ಕೆಜೆ ಜಾರ್ಜ್ ಹೊಸ ಮಾರ್ಗಸೂಚಿಯನ್ನು ಹೊರಡಿಸುವ ಮೂಲಕ ಈ ಎಲ್ಲಾ ಫಲಾನುಭವಿಗಳಿಗೆ ಖುಷಿ ಸುದ್ದಿ ಕೊಟ್ಟಿದ್ದಾರೆ. ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಮತ್ತು ಅಮೃತ ಜ್ಯೋತಿ ಫಲಾನುಭವಿಗಳು ಕೂಡ ಗೃಹಜ್ಯೋತಿ ಯೋಜನೆಯ ಲಾಭ ಪಡೆಯಬಹುದು ಎಂದು ಹೇಳಿದ್ದಾರೆ.

ಭಾಗ್ಯ ಜ್ಯೋತಿ ಕುಟುಂಬ ಜ್ಯೋತಿಗೆ ಈವರೆಗೆ 40 ಯೂನಿಟ್ ಫ್ರೀ ಇತ್ತು. ಈಗ ಅದನ್ನು 53 ಯೂನಿಟ್ ಹಾಗೂ 10% ಹೆಚ್ಚುವರಿ ಫ್ರೀ ವಿದ್ಯುತ್ ನೀಡುವುದಾಗಿ ಘೋಷಿಸಿದೆ. ಅಮೃತ ಜ್ಯೋತಿಗೆ 75 ಯೂನಿಟ್ ಇತ್ತು ಈಗ ಅದನ್ನು 75 ಯೂನಿಟ್ ಪ್ಲಸ್ 10% ಮಾಡಲಾಗಿದೆ. ಈಗ ಎಲ್ಲರೂ ಗೃಹ ಜ್ಯೋತಿ ವ್ಯಾಪ್ತಿಗೆ ಬರುತ್ತಾರೆ ಅವರಿಗೆ ಹೆಚ್ಚುವರಿ ಯೂನಿಟ್ ಗಳನ್ನು ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಮೂರು ಜ್ಯೋತಿಗಳ ಫಲಾನುಭವಿಗಳಲ್ಲಿ ಇದ್ದಂತಹ ಗೊಂದಲವನ್ನು ನಿವಾರಿಸುವಲ್ಲಿ ಇಂಧನ ಸಚಿವ ಕೆಜೆ ಜಾರ್ಜ್ ಯಶಸ್ವಿಯಾಗಿದ್ದಾರೆ. ಸರ್ಕಾರದ ಈ ಹೊಸ ನಿರ್ಧಾರದಿಂದಾಗಿ ರಾಜ್ಯದ ಅರ್ಧ ಕೋಟಿ ಕುಟುಂಬಗಳಿಗೆ ಇದರಿಂದ ನೇರ ಲಾಭ ಸಿಗಲಿದೆ.

ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಹೊರಡಿಸಿರುವ ಎಲ್ಲಾ ಆದೇಶಗಳು ಯಥವಾತ್ತಾಗಿ ಮುಂದುವರೆಯುತ್ತವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಜೂನ್ 25ಕ್ಕೆ ಮೊದಲು ನೋಂದಣಿ ಮಾಡಿಕೊಂಡವರಿಗೆ ಜುಲೈ ತಿಂಗಳಲ್ಲಿ ವಿದ್ಯುತ್ ಉಚಿತವಾಗಿರಲಿದೆ. 200 ಯೂನಿಟ್‌ಗಿಂತ ಕಡಿಮೆ ಬಳಸಿದರೆ ಮಾತ್ರ ವಿದ್ಯುತ್ ಉಚಿತವಾಗಿರಲಿದೆ.

ಜುಲೈ 25ರ ಒಳಗೆ ನೋಂದಣಿ ಮಾಡಿಕೊಂಡಿರುವ ಗ್ರಾಹಕರು ಆಗಸ್ಟ್ ತಿಂಗಳ ವಿದ್ಯುತ್ ಅನ್ನು ಉಚಿತವಾಗಿ ಪಡೆಯಬಹುದಾಗಿದೆ. ಆರಂಭಿಕ ಹಂತದಲ್ಲಿ ಸರ್ವರ್ ಸಮಸ್ಯೆ ಇದ್ದರೂ ಈಗ ಎಲ್ಲಾ ಗೊಂದಲ ನಿವಾರಣೆಯಾಗಿದ್ದು, ಸುಲಭವಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+