E-Pauti Khata: ಆಸ್ತಿದಾರರು, ರೈತರಿಗೆ ಭರ್ಜರಿ ಗುಡ್‌ನ್ಯೂಸ್‌: ಮನೆ ಬಾಗಿಲಿಗೆ ಬರಲಿದೆ ಇ - ಪೌತಿ ಖಾತಾ!

E-Pauti Khata: ಕರ್ನಾಟಕ ಸರ್ಕಾರವು ಆಸ್ತಿದಾರರಿಗೆ ಹಾಗೂ ಅದರಲ್ಲೂ ಗ್ರಾಮೀಣ ಭಾಗದ ಆಸ್ತಿದಾರರಿಗೆ ಭರ್ಜರಿ ಗುಡ್‌ನ್ಯೂಸ್‌ವೊಂದನ್ನು ನೀಡಿದೆ. ಇಲ್ಲಿಯ ವರೆಗೆ ಎ ಖಾತಾ, ಬಿ ಖಾತಾ ಹಾಗೂ ಇ ಖಾತಾ ವಿಚಾರದಲ್ಲಿ ಗುಡ್‌ನ್ಯೂಸ್‌ ನೀಡಿದ್ದ ರಾಜ್ಯ ಸರ್ಕಾರವು ಇದೀಗ ಇ ಪೌತಿ ಖಾತಾ ವಿಚಾರದಲ್ಲೂ ಭರ್ಜರಿ ಗುಡ್‌ನ್ಯೂಸ್‌ ನೀಡುವುದಕ್ಕೆ ಮುಂದಾಗಿದೆ. ಇದರಿಂದ ಕರ್ನಾಟಕದ ಸಾವಿರಾರು ಜನ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ. ಹಾಗಾದರೆ ಸರ್ಕಾರವು ರೈತರು ಹಾಗೂ ಆಸ್ತಿದಾರರಿಗೆ ನೀಡಿರುವ ಗುಡ್‌ನ್ಯೂಸ್‌ ಏನು, ಇ ಪೌತಿ ಖಾತಾ ಎಂದರೇನು. ಇ ಪೌತಿ ಖಾತೆ ಹೇಗೆಲ್ಲಾ ಅನುಕೂಲವಾಗಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಕರ್ನಾಟಕದ ರೈತರಿಗೆ ರಾಜ್ಯ ಕಾಂಗ್ರೆಸ್‌ ಸರ್ಕಾರವು ಭರ್ಜರಿ ಗುಡ್‌ನ್ಯೂಸ್‌ ನೀಡಿದೆ. ರೈತರು ಸಾವನ್ನಪ್ಪಿದ ನಂತರವೂ ಸರ್ಕಾರಿ ದಾಖಲೆಗಳಲ್ಲಿ ಜೀವಂತವಾಗಿರುವುದನ್ನು ತೋರಿಸುವ ಭೂ ಪಹಣಿ ವಿವರಗಳ ಗೊಂದಲ ಸರಿಪಡಿಸುವುದಕ್ಕೆ ಸರ್ಕಾರವು ಮುಂದಾಗಿದೆ. ಕಂದಾಯ ಇಲಾಖೆಯು ಇ-ಪೌತಿ ಆಂದೋಲನವನ್ನು ರಾಜ್ಯದಾದ್ಯಂತ ಹಮ್ಮಿಕೊಳ್ಳಲಿದೆ ಎಂದು ಹೇಳಿದೆ.

Great New Good News for Property Owners E-Pauti Khata Will be Delivered to your doorstep

ಪೌತಿ ಖಾತೆ ಎಂದರೇನು ?

ರಾಜ್ಯದಲ್ಲಿ ಈಗಾಗಲೇ ವಿವಿಧ ಖಾತೆಗಳು ಇರುವುದರಿಂದ ಹೊಸದಾಗಿ ಪೌತಿ ಖಾತಾ ಎಂದರೆ, ಜನ ಸಾಮಾನ್ಯರಿಗೆ ಗೊಂದಲ ಎದುರಾಗುವ ಸಾಧ್ಯತೆ ಹೆಚ್ಚು. ಆದರೆ, ಪೌತಿ ಖಾತೆ ಎನ್ನುವುದು ಸರಳವಾಗಿದೆ. ಯಾರಾದರೂ ಸಾವನ್ನಪ್ಪಿದ ವ್ಯಕ್ತಿಯ ಹೆಸರಿನಲ್ಲಿ ಉಳಿದಿರುವ ಜಮೀನಿನ ಮಾಲೀಕತ್ವವನ್ನು ಅವರ ವಾರಸುದಾರರಿಗೆ ಕಾನೂನುಬದ್ಧವಾಗಿ ವರ್ಗಾಯಿಸುವ ಪ್ರಕ್ರಿಯೆಯನ್ನು ಪೌತಿ ಖಾತೆ ಎಂದು ಹೇಳಲಾಗುತ್ತದೆ. ಈ ಪ್ರಕ್ರಿಯೆಯು ಕೇವಲ ದಾಖಲೆ ತಿದ್ದುಪಡಿಯಾಗಿ ಮಾತ್ರ ಇರುವುದಿಲ್ಲ. ಬದಲಾಗಿ ರೈತರ ಭದ್ರತೆ ಹಾಗೂ ಸರ್ಕಾರದ ಸಹಾಯಧನಗಳು ತಲುಪುದಕ್ಕೂ ಸಹಕಾರಿಯಾಗಲಿದೆ.

ಯಾವ ಕಾರಣಕ್ಕಾಗಿ ಇದೀಗ ಪೌತಿ ಖಾತೆ: ಕರ್ನಾಟಕದಲ್ಲಿ ಈಚೆಗೆ ನಡೆದ ಆಧಾರ್ ಸೀಡಿಂಗ್ ಕಾರ್ಯಚಟುವಟಿಕೆ ನಡೆಸಿದ ಸಂದರ್ಭದಲ್ಲಿ ಬಹುಸಂಖ್ಯೆಯ ಜಮೀನಿನ ಪಹಣಿಗಳಲ್ಲಿ ಮೃತರ ಹೆಸರಿನಲ್ಲಿಯೇ ಇರುವ ಅಂಶ ಬೆಳಕಿಗೆ ಬಂದಿತ್ತು. ಇದರಿಂದ ರೈತರಿಗೆ ಸಾಕಷ್ಟು ನಷ್ಟವಾಗುತ್ತಿದೆ ಎನ್ನುವ ಅಂಶವನ್ನು ರಾಜ್ಯ ಸರ್ಕಾರವು ಗಮನಿಸಿದೆ. ಹೀಗಾಗಿ, ಈ ಗೊಂದಲಗಳನ್ನು ಪರಿಹರಿಸುವುದಕ್ಕೆ ಕಂದಾಯ ಇಲಾಖೆಯು ಮುಂದಾಗಿದೆ. ರೈತರ ಹಕ್ಕುಗಳನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಇ-ಪೌತಿ ಖಾತೆ ನೀಡುವ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಇನ್ನು ಇ-ಪೌತಿಯಿಂದ ಪಹಣಿಗಳಿಗೆ ಆಧಾರ್ ಜೋಡಣೆ ಮೂಲಕ ನಿಖರವಾಗಿ ಎಷ್ಟು ಕೃಷಿ ಭೂಮಿ ಇದೆ ಎನ್ನುವ ಮಾಹಿತಿ ಲಭ್ಯವಾಗಲಿದೆ. ಅಲ್ಲದೇ ಸಣ್ಣ ಹಾಗೂ ಅತಿಸಣ್ಣ ರೈತರ ಸಂಖ್ಯೆ ನಿಖರವಾಗಿ ಸಿಗುತ್ತದೆ. ಸರ್ಕಾರಿ ಕಚೇರಿಗಳ ಅಲೆದಾಟ ತಪ್ಪಲಿದ್ದು ಪಾರದರ್ಶಕ ಪ್ರಕ್ರಿಯೆ ಬರಲಿದೆ ಎಂದು ಹೇಳಲಾಗಿದೆ.

ಮನೆ ಮನೆಗೆ ತೆರಳಿ ಖಾತೆ: ಇನ್ನು ಕಂದಾಯ ಇಲಾಖೆಯು ಈ ಬಾರಿ ಪೌತಿ ಆಂದೋಲನವನ್ನು ನಿಖರವಾಗಿ ಜಾರಿ ಮಾಡುವ ಉದ್ದೇಶ ಇದಾಗಿದೆ. ಗ್ರಾಮ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರಿಗೆ ಸಂಪೂರ್ಣ ಜವಾಬ್ದಾರಿ ನೀಡಲಾಗಿದೆ ಎಂದು ಹೇಳಲಾಗಿದೆ. ಮನೆ.. ಮನೆಗೆ ತೆರಳಿ

* ವಾರಸುದಾರರ ಮಾಹಿತಿ ಸಂಗ್ರಹಿಸಲಾಗುತ್ತದೆ. * ವಂಶವೃಕ್ಷದ ಆಧಾರದ ಮೇಲೆ ವಾರಸುದಾರರನ್ನು ಪತ್ತೆ ಮಾಡಲಾಗುತ್ತದೆ. * ಆಧಾರ್ ಸಂಖ್ಯೆ ಮೂಲಕ OTP ಪಡೆದು ಖಾತೆ ದಾಖಲಿಸಲಾಗುತ್ತದೆ. * ಅಲ್ಲದೇ ವಿವಾದಿತ ಆಸ್ತಿಗಳಲ್ಲಿ ಜಂಟಿ ಖಾತೆ ಅಥವಾ ನ್ಯಾಯಾಲಯದ ಮಾರ್ಗ ಅನುಸರಿಸುವ ವ್ಯವಸ್ಥೆ ಸಹ ಮಾಡಲಾಗುತ್ತದೆ.

ಕಾಂಗ್ರೆಸ್‌ ಟ್ವೀಟ್: ಇನ್ನು ಈ ಸಂಬಂಧ ಕಾಂಗ್ರೆಸ್‌ ಸಹ ಟ್ವೀಟ್ ಮಾಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದಿಂದ‌ ಇ-ಪೌತಿ ಆಂದೋಲನ. ರಾಜ್ಯಾದ್ಯಂತ ಮೃತರ ಹೆಸರಲ್ಲಿರುವ ಜಮೀನುಗಳನ್ನು ವಾರಸುದಾರರಿಗೆ ನೋಂದಣಿ ಮಾಡಿಕೊಡಲು ಕ್ರಮ. ಕಂದಾಯ ಇಲಾಖೆಯಿಂದ ರೈತರ ಮನೆ ಬಾಗಿಲಿಗೇ ಪೌತಿ ಖಾತೆ ತಲುಪಿಸುವ ರೈತಸ್ನೇಹಿ ನಿರ್ಧಾರ ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+