Property Tax: ಆಸ್ತಿದಾರರಿಗೆ ಭರ್ಜರಿ ಗುಡ್‌ನ್ಯೂಸ್‌: ಆಸ್ತಿ ತೆರಿಗೆ ಮೇಲೆ ಶೇ 5% ರಿಯಾಯಿತಿ!

Property Tax: ಆಸ್ತಿದಾರರು ಆಸ್ತಿ ತೆರಿಗೆ ಪಾವತಿ ಮಾಡುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಮಹತ್ವದ ಆದೇಶವೊಂದನ್ನು ಮಾಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೇರಿದಂತೆ ವಿವಿಧ ಮಹಾನಗರ ಪಾಲಿಕೆಗಳು ಮಾರ್ಚ್‌ 31ರ ಅಂತ್ಯಕ್ಕೆ ಆಸ್ತಿ ತೆರಿಗೆ ಪಾವತಿ ಮಾಡುವುದು ಮುಗಿಯಲಿದೆ ಎಂದೇ ಹೇಳಲಾಗಿತ್ತು. ಇದೀಗ ಆಸ್ತಿ ತೆರಿಗೆ ಪಾವತಿಯ ಅವಧಿಯನ್ನು ವಿಸ್ತರಣೆ ಮಾಡುವುದರೊಂದಿಗೆ ಆಸ್ತಿ ತೆರಿಗೆ ಪಾವತಿಯ ಮೇಲೆ ಶೇ 5% ರಿಯಾಯಿತಿಯನ್ನೂ ಸಹ ನೀಡಲಾಗುತ್ತಿದೆ. ಇದು ಯಾವ ಆಸ್ತಿದಾರರಿಗೆ ಅನ್ವಯಿಸಲಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟಕ ಸರ್ಕಾರವು ಆಸ್ತಿದಾರರಿಗೆ ಬಿಗ್‌ ಗುಡ್‌ನ್ಯೂಸ್‌ ಕೊಟ್ಟಿದೆ. ಪ್ರಸಕ್ತ ಆರ್ಥಿಕ ವರ್ಷದ ಆಸ್ತಿ ತೆರಿಗೆ ಅವಧಿಯು ಮಾರ್ಚ್‌ 31ಕ್ಕೆ ಬಹುತೇಕ ಪ್ರದೇಶಗಳಲ್ಲಿ ಮುಕ್ತಾಯವಾಗಿದೆ. ಅದರಲ್ಲಿ ಮುಖ್ಯವಾಗಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸಹ ಸೇರಿದೆ. ಬೆಂಗಳೂರಿನಲ್ಲಿ 5,200 ಕೋಟಿ ರೂಪಾಯಿ ಆದಾಯ ತೆರಿಗೆ ಸಂಗ್ರಹ ಮಾಡಿಕೊಳ್ಳಬೇಕು ಎಂದು ಬಿಬಿಎಂಪಿಯು ಪ್ಲ್ಯಾನ್ ಮಾಡಿಕೊಂಡಿತ್ತು. ಆದರೆ, ಈ ಗುರಿಯನ್ನು ಮುಟ್ಟುವುದಕ್ಕೆ ಬಿಬಿಎಂಪಿಗೆ ಸಾಧ್ಯವಾಗಿಲ್ಲ. ಇದರ ನಡುವೆಯೇ ಕರ್ನಾಟಕ ಸರ್ಕಾರದಿಂದ ಭರ್ಜರಿ ಗುಡ್‌ನ್ಯೂಸ್‌ ಕೊಡಲಾಗಿದೆ.

Great Good News for Property Owners 5 Percent Discount on Property Tax

ಕರ್ನಾಟಕ ಸರ್ಕಾರವು ಆಸ್ತಿದಾರರಿಂದ ಆಸ್ತಿ ತೆರಿಗೆ ಸಂಗ್ರಹ ಮಾಡುವುದಕ್ಕೆ ಹಲವು ಸರ್ಕಸ್‌ಗಳನ್ನು ಮಾಡುತ್ತಿದೆ. ಬೆಂಗಳೂರಿನಲ್ಲಿ ಬಿಬಿಎಂಪಿಯು ಆಸ್ತಿಗಳ ಹರಾಜು ಪ್ರಕ್ರಿಯೆ ಸೇರಿದಂತೆ ಹಲವು ಗಂಭೀರ ಕಾನೂನು ಕ್ರಮಗಳನ್ನು ತೆಗೆದುಕೊಂಡಿತ್ತು. ಇದರ ಹೊರತಾಗಿಯೂ ನಿರೀಕ್ಷಿತ ಮಟ್ಟದ ಆಸ್ತಿ ತೆರಿಗೆ ಸಂಗ್ರಹ ಆಗಿಲ್ಲ. ಇದೀಗ ಆಸ್ತಿದಾರರಿಗೆ ಕರ್ನಾಟಕ ಸರ್ಕಾರವು ಬಿಗ್‌ ಗುಡ್‌ನ್ಯೂಸ್‌ವೊಂದನ್ನು ಕೊಟ್ಟಿದೆ.

ರಾಜ್ಯದ ನಿರ್ದಿಷ್ಟ ಆಸ್ತಿದಾರರಿಗೆ ಆಸ್ತಿ ತೆರಿಗೆ ಪಾವತಿಯಲ್ಲಿ ಶೇ 5ರಷ್ಟು ರಿಯಾಯಿತಿಯನ್ನು ಘೋಷಿಸಲಾಗಿದೆ. ಈ ಮೂಲಕ ಆಸ್ತಿ ತೆರಿಗೆ ಪಾವತಿ ಮಾಡುವವರಿಗೆ ಸಿಹಿ ಸುದ್ದಿಯನ್ನು ಕೊಡಲಾಗಿದೆ. ಕಳೆದ ಎರಡು ವಾರದಿಂದಲೂ ರಾಜ್ಯದ ಜನರಿಗೆ ಒಂದಿಲ್ಲೊಂದು ತೆರಿಗೆ ಹಾಗೂ ಬೆಲೆ ಏರಿಕೆಯ ಶಾಕ್‌ ಎದುರಾಗುತ್ತಿತ್ತು. ಅದರ ನಡುವೆ ಇದೀಗ ಕೊನೆಗೂ ಸರ್ಕಾರ ಸಿಹಿ ಸುದ್ದಿಯೊಂದನ್ನು ಕೊಟ್ಟಿದೆ.

Great Good News for Property Owners 5 Percent Discount on Property Tax

ಈ ಆಸ್ತಿದಾರರಿಗೆ ಆಸ್ತಿ ತೆರಿಗೆ ಪಾವತಿಯಲ್ಲಿ ರಿಯಾಯಿತಿ!

ಕರ್ನಾಟಕ ಸರ್ಕಾರದ ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆಯಿಂದ ಆಸ್ತಿದಾರರಿಗೆ ಗುಡ್‌ನ್ಯೂಸ್‌ ಕೊಡಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದ ಗ್ರಾಮ ಪಂಚಾಯತಿ ಆಸ್ತಿದಾರರಿಗೆ ಬಿಗ್‌ಗುಡ್‌ನ್ಯೂಸ್‌ ಕೊಡಲಾಗಿದೆ.

ಕರ್ನಾಟಕದ ಗ್ರಾಮ ಪಂಚಾಯಿತಿ ಆಸ್ತಿ ತೆರಿಗೆಯನ್ನು ಏಕಕಾಲಕ್ಕೆ ಪಾವತಿ ಮಾಡುವ ಮೂಲಕ ಶೇ.5ರಷ್ಟು ರಿಯಾಯಿತಿ ಪಡೆದುಕೊಳ್ಳಿ ಎಂದು ಹೇಳಲಾಗಿದೆ. ಆರ್ಥಿಕ ವರ್ಷ ಪ್ರಾರಂಭವಾಗಿ ಮೂರು ತಿಂಗಳ ಒಳಗಾಗಿ (ಏಪ್ರಿಲ್‌ನಿಂದ ಜೂನ್‌ ಅಂತ್ಯ)ದ ಒಳಗಾಗಿ ಅಂದರೆ 30/06/2025ರ ಒಳಗಾಗಿ ನೀವು ತೆರಿಗೆ ಪಾವತಿ ಮಾಡಿದರೆ ನಿಮಗೆ ಆಸ್ತಿ ತೆರಿಗೆ ಪಾವತಿಯ ಮೇಲೆ ಶೇ 5% ರಷ್ಟು ರಿಯಾಯಿತಿ ಸಿಗಲಿದೆ ಎಂದು ರಾಜ್ಯ ಸರ್ಕಾರವು ಹೇಳಿದೆ.

ಕಾಲಮಿತಿಯೊಳಗೆ ಗ್ರಾಮ ಪಂಚಾಯತಿ ಆಸ್ತಿ ತೆರಿಗೆ ಪಾವತಿಸಿ, ಶೇ. 5ರಷ್ಟು ರಿಯಾಯಿತಿ ಪಡೆಯಿರಿ. ಹೆಚ್ಚಿನ ಮಾಹಿತಿಗಾಗಿ ಪಂಚಮಿತ್ರ ಸಹಾಯವಾಣಿ ಸಂಖ್ಯೆ 8277506000ಗೆ ಸಾರ್ವಜನಿಕರು ಕರೆ ಮಾಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಪ್ಪಿಸಲೇ ಬೇಡಿ: ಇನ್ನು ಆಸ್ತಿದಾರರಿಗೆ ಇದೊಂದು ಸುವರ್ಣ ಅವಕಾಶ ಅಂತಲೇ ಹೇಳಬಹುದಾಗಿದೆ. ವಿವಿಧ ವಸ್ತುಗಳು ಹಾಗೂ ಸೇವೆಗಳ ಬೆಲೆ ಏರಿಕೆ ಮಾಡುತ್ತಿರುವ ಸರ್ಕಾರವು ಆಸ್ತಿ ತೆರಿಗೆಯಲ್ಲಿ ಶೇ 5ರಷ್ಟು ರಿಯಾಯಿತಿಯನ್ನು ಕೊಟ್ಟಿದೆ. ಹೀಗಾಗಿ ಈ ಅವಧಿ ಮುಕ್ತಾಯವಾಗುವುದರ ಒಳಗಾಗಿ ಇದರ ಲಾಭ ಮಾಡಿಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+