ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗರಬತ್ತಿ ಉದ್ಯಮಕ್ಕೆ ಸಹಕಾರ, ಸಣ್ಣ ಸಮುದಾಯಕ್ಕೆ ಸಾಲ ಯೋಜನೆ: ಸಿಎಂ

|
Google Oneindia Kannada News

ಬೆಂಗಳೂರು, ನವೆಂಬರ್ 24 : ಗ್ರಾಮೀಣ ಭಾಗದಲ್ಲಿ ಉದ್ಯೋಗ ನೀಡುವ ಹಾಗೂ ಮಹಿಳೆಯರಿಗೆ ಉದ್ಯೋಗ ಕಲ್ಪಿಸಿರುವ ಅಗರಬತ್ತಿ ಉದ್ಯಮಕ್ಕೆ ಸರ್ಕಾರದ ಸಂಪೂರ್ಣ ಸಹಕಾರ ಇರಲಿದೆ. ಜೊತೆಗೆ ಸಣ್ಣ ಸಮುದಾಯಗಳಿಗೆ ಸಾಲ ನೀಡುವ ಯೋಜನೆಯನ್ನು ಜಾರಿ ತರಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಗುರುವಾರ ಅಖಿಲ ಭಾರತ ಅಗರಬತ್ತಿ ಉತ್ಪಾದಕರ ಸಂಘದ (ಎಐಎಎಂಎ) ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಿದ್ದ 'ಐಮಾ ಎಕ್ಸ್ ಪೋ- 2022' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಹೊಸ ಸಂಚಾರ ವ್ಯವಸ್ಥೆ ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಹೊಸ ಸಂಚಾರ ವ್ಯವಸ್ಥೆ

ಅಗರಬತ್ತಿ ಉದ್ಯಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಗೆ ಉದ್ಯೋಗ ದೊರೆಯುವುದರಿಂದ ಸ್ವಾವಲಂಬಿ ಜೀವನಕ್ಕೆ ಇದು ಅನುಕೂಲವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಈ ಉದ್ಯಮ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ಈ ನಿಟ್ಟಿನಲ್ಲಿ ಆರ್ಥಿಕತೆ ಕೆಳ ಸ್ಥರದ ಸಮುದಾಯಗಳನ್ನು ಇನ್ನಷ್ಟು ಬಲಗೊಳಿಸಲು ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿ ರಾಜ್ಯದಲ್ಲಿನ ಸಣ್ಣ ಪುಟ್ಟ ಸಮುದಾಯಗಳಾದ ಕುಂಬಾರ ಕಮ್ಮಾರ, ಚಮ್ಮಾರ ಸೇರಿದಂತೆ ಇತರ ಸಮುದಾಯಗಳಿಗೆ ಸಾಲ ನೀಡುವ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು.

Govt Given Cooperation For Agarbatti Industry, Will Implement Loan Scheme For Small Community

ಪರಿಮಳದ ಜೊತೆಗೆ ಸಂತೋಷ ಹರಡುವ ಕೆಲಸ

ಅಗರಬತ್ತಿ ಉದ್ಯಮ ಪರಿಮಳದ ಜೊತೆಗೆ ಸಂತೋಷ ಹರಡುವ ಕೆಲಸ ಮಾಡುತ್ತಿದೆ. 250 ವರ್ಷಗಳಿಂದ ಪರಿಮಳದ ಜೊತೆಗೆ ಸಂತೋಷ ಹರಡುತ್ತಿದ್ದೀರಿ. ಯಾವುದೇ ಉದ್ಯಮ ಈ ರೀತಿ ಇಲ್ಲ. ಸಣ್ಣ ಸಣ್ಣ ಸಂತೋಷಗಳು ದೊಡ್ಡ ಸಂಭ್ರಮ ನೀಡುತ್ತಿವೆ.

ಅಗರಬತ್ತಿ ಉದ್ಯಮಮಕ್ಕೆ ದೊಡ್ಡ ಇತಿಹಾಸವಿದೆ. ಇದೊಂದು ದೊಡ್ಡ ವಿಜ್ಞಾನ. ಪಾಶ್ಚಿಮಾತ್ಯ ದೇಶಗಳಲ್ಲಿ ಕೃತಕ ಪರಿಮಳ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ ಎಂದು ಶ್ಲಾಘಿಸಿದರು.

ಭಾರತ ಜೀವ ವೈವಿಧ್ಯವಿರುವ ದೇಶ. ನಮ್ಮಲ್ಲಿ ಪ್ರಾಕೃತಿಕವಾಗಿಯೇ ಪರಿಮಳ ಬೀರುವ ಉತ್ಪನ್ನಗಳು ದೊರೆಯುತ್ತಿವೆ. ನನ್ನ ಕ್ಷೇತ್ರದಲ್ಲಿಯೂ ಒಬ್ಬರು ಸುಮಾರು 2,000 ಎಕರೆ ಪ್ರದೇಶದಲ್ಲಿ ಪುಷ್ಪ ಕೃಷಿ ಮಾಡುತ್ತಿದ್ದಾರೆ ಎಂದರು.

Govt Given Cooperation For Agarbatti Industry, Will Implement Loan Scheme For Small Community

ಮಹಿಳೆಯರಿಗೆ ಉದ್ಯೋಗಾವಕಾಶ

ರಾಜ್ಯ ಬಿಜೆಪಿ ಸರ್ಕಾರ ಮಹಿಳೆಯರಿಗೆ ಸ್ತ್ರೀ ಸಾಮರ್ಥ್ಯ ಯೋಜನೆ ಜಾರಿಗೆ ತಂದಿದೆ. ಅದರಡಿ ಮಹಿಳೆಯರಿಗೆ 1.5 ಲಕ್ಷ ರೂ.ವರೆಗೆ ಸಹಾಯಧನ ಹಾಗೂ 5 ಲಕ್ಷದವರೆಗೆ ಅನುದಾನ ನೀಡಲಾಗುತ್ತದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೊಗ ಕಲ್ಪಿಸಲು ಅನುಕೂಲವಾಗುತ್ತದೆ. ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಉಳಿತಾಯ ಮಾಡುತ್ತಾರೆ. ಹೀಗಾಗಿ ಮಹಿಳೆಯರು ಕುಟುಂಬ ನಿರ್ವಹಣೆ ಜೊತೆಗೆ ಈ ರೀತಿಯ ಸಣ್ಣ ಉದ್ಯಮ, ಉತ್ಪಾದನೆಯಲ್ಲಿ ತೊಡಗಿದರೆ ಕುಟುಂಬದ ಆರ್ಥಿಕತೆ ಗಟ್ಟಿಯಾಗುತ್ತದೆ. ಮಹಿಳೆಯರು ಮನೆಯಲ್ಲಿಯೇ ಕುಳಿತು ಕೆಲಸ ಮಾಡಿ ಉಳಿತಾಯ ಮಾಡಬಹುದು ಎಂದು ಹೇಳಿದರು.

ಸಮಾರಂಭದಲ್ಲಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಐಮಾ ಅಧ್ಯಕ್ಷ ಅರ್ಜುನ್ ರಂಗಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

English summary
Karnataka Government given cooperation for Agarbatti industry, Will implement loan scheme for small Community, said CM Basavaraj Bommai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X