Government Employees: ಸರ್ಕಾರಿ ನೌಕರರು NPS ಖಾತೆಯಲ್ಲಿನ ಮೊತ್ತ ಹಿಂಪಡೆಯಲು ಮಾರ್ಗಸೂಚಿ ಪ್ರಕಟ: ಇಲ್ಲಿದೆ ಸಂಪೂರ್ಣ ವಿವರ

ಬೆಂಗಳೂರು, ಫೆಬ್ರವರಿ 21: ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ ಡಿಫೈನ್ಡ್ ಪಿಂಚಣಿ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರುವಂತ ಸರ್ಕಾರಿ ನೌಕರರ ಎನ್ ಪಿ ಎಸ್ ಪ್ರಾನ್ ಖಾತೆಯಲ್ಲಿನ ಮೊತ್ತವನ್ನು ಹಿಂಪಡೆಯುವ ಕೂರಿತಂತೆ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಈ ಸಂಬಂಧ ರಾಜ್ಯ ಸರ್ಕಾರದಿಂದ ನಡವಳಿಯನ್ನು ಹೊರಡಿಸಲಾಗಿದ್ದು, ದಿನಾಂಕ: 01.04.2006 ರಂದು ಹಾಗೂ ತದನಂತರ ಸರ್ಕಾರಿ ಸೇವೆಗೆ ಸೇರಿದ ಎಲ್ಲಾ ಸರ್ಕಾರಿ ನೌಕರರಿಗೆ ನೂತನ ಅಂಶದಾಯಿ ಕೊಡುಗೆ ಯೋಜನೆಯನ್ನು (ರಾಷ್ಟ್ರೀಯ ಪಿಂಚಣಿ ಯೋಜನೆ) ಕಡ್ಡಾಯವಾಗಿ ಜಾರಿಗೊಳಿಸಲಾಗಿದೆ.

ಓದಲಾದ ಕ್ರಮ ಸಂಖ್ಯೆ (2)ರ ಸರ್ಕಾರಿ ಆದೇಶದಲ್ಲಿನ ಸೂಚನೆಗಳನ್ವಯ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಮಾರ್ಗಸೂಚಿಯನ್ನು ರೂಪಿಸುವುದರೊಂದಿಗೆ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ ಎಂದಿದೆ. ಓದಲಾದ ಕ್ರಮ ಸಂಖ್ಯೆ (3)ರ ಸರ್ಕಾರಿ ಆದೇಶದನ್ವಯ ದಿನಾಂಕ: 01.04.2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ತದನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಒಂದು ಬಾರಿಯ ಕ್ರಮವಾಗಿ ಡಿಫೈನ್ಸ್ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಲು ಸರ್ಕಾರವು ಒಪ್ಪಿಗೆಯನ್ನು ನೀಡಿರುತ್ತದೆ.

Govt Employees Should Note Guidelines Issued For Withdrawal Of Funds In NPS Account

ಪ್ರಸ್ತುತ ಮೇಲಿನ ದಿನಾಂಕ: 24.01.2024ರ ಸರ್ಕಾರಿ ಆದೇಶದನ್ವಯ ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ ಡಿಫೈನ್ ಪಿಂಚಿಣಿ ಯೋಜನೆಯ ವ್ಯಾಪ್ತಿಗೊಳಪಡುವ ಸರ್ಕಾರಿ ಅಧಿಕಾರಿ/ನೌಕರರ ಎನ್.ಪಿ.ಎಸ್. ಪ್ರಾನ್ ಖಾತೆಯಲ್ಲಿನ ನೌಕರರ ಮತ್ತು ಸರ್ಕಾರದ ವಂತಿಗೆಯನ್ನು ಹಿಂಪಡೆಯುವ ಕುರಿತು ಹಾಗೂ ಸಂಬಂಧಿತ ಸರ್ಕಾರಿ ನೌಕರರಿಗೆ ಜಿ.ಪಿ.ಎಫ್.ಖಾತೆಯನ್ನು ತೆರೆಯುವುದು ಮುಂತಾದ ವಿಷಯಗಳ ಬಗ್ಗೆ ಮಾರ್ಗಸೂಚಿಯನ್ನು ಹೊರಡಿಸಲು ಸರ್ಕಾರ ತೀರ್ಮಾನಿಸಿದೆ. ಅದರಂತೆ ಈ ಆದೇಶ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ದಿನಾಂಕ: 24.01.2024ರ ಸರ್ಕಾರಿ ಆದೇಶ ಸಂಖ್ಯೆ: ಆಇ-ಪಿಇಎನ್/99/2023ರನ್ವಯ ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ ಡಿಫೈನ್ ಪಿಂಚಣಿ ಯೋಜನೆಯ ವ್ಯಾಪ್ತಿಗೊಳಪಡುವ ಸೇವೆಯಲ್ಲಿರುವ/ನಿವೃತ್ತಿ ಹೊಂದಿದ/ಮರಣ ಹೊಂದಿದ ಅರ್ಹ ಸರ್ಕಾರಿ ಅಧಿಕಾರಿ/ನೌಕರರ ಪ್ರಾನ್ ಖಾತೆಯಲ್ಲಿರುವ ಮೊತ್ತವನ್ನು ಹಿಂಪಡೆಯಬೇಕಾಗಿರುವುದರಿಂದ ಈ ಕುರಿತು ವಿವಿಧ ಹಂತಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಸಂಬಂಧಪಟ್ಟವರ ಜವಾಬ್ದಾರಿಗಳನ್ನು ಈ ಕೆಳಕಂಡಂತೆ ನಿಗಧಿಪಡಿಸಿದೆ.

ಇಲಾಖಾ ಮುಖ್ಯಸ್ಥರುಗಳ ಜವಾಬ್ದಾರಿಗಳು

a. ಸರ್ಕಾರಿ ಅಧಿಕಾರಿ/ನೌಕರರು ಎನ್.ಪಿ.ಎಸ್. ಯೋಜನೆಗೆ ಒಳಪಡುವುದಿಲ್ಲ ಎಂದು ಅನುಬಂಧದಲ್ಲಿನ ನಮೂನೆ-1ರಲ್ಲಿ ದೃಢೀಕರಣವನ್ನು ನೀಡುವುದು ಮತ್ತು ಅದರ ಪ್ರತಿಯನ್ನು ಸಂಬಂಧಪಟ್ಟ ಡಿಡಿಒಗೆ ಕಳುಹಿಸುವುದು.

b. ಸೇವೆಯಲ್ಲಿರುವ ಸರ್ಕಾರಿ ಅಧಿಕಾರಿ/ನೌಕರರ ವೇತನದಿಂದ ಕಟಾವಣೆಯಾಗುವ ಎನ್.ಪಿ.ಎಸ್. ವಂತಿಗೆಯನ್ನು ಹೆಚ್.ಆರ್.ಎಂ.ಎಸ್. ನಲ್ಲಿ ಸ್ಥಗಿತಗೂಳಿಸುವುದು ಮತ್ತು ಅದರ ಮಾಹಿತಿಯನ್ನು ಖಜಾನ ಆಯುಕ್ತಾಲಯದ ರಾಷ್ಟ್ರೀಯ ಪಿಂಚಣಿ ಯೋಜನೆ ಘಟಕಕ್ಕೆ ನೀಡುವುದು.

C. ಸೇವೆಯಲ್ಲಿರುವ ಸರ್ಕಾರಿ ಅಧಿಕಾರಿ/ನೌಕರರ ಭವಿಷ್ಯ ನಿಧಿ ಖಾತೆಯನ್ನು ತೆರೆಯಲು ಸಾಮಾನ್ಯ ಭವಿಷ್ಯ ನಿಧಿ ಯೋಜನೆಯಡಿಯಲ್ಲಿನ ನಮೂನೆ-1 ಹಾಗೂ ನಾಮನಿರ್ದೇಶನವನ್ನು ನಮೂನೆ-2 ರಲ್ಲಿ ಪಡೆದು ಮಹಾಲೇಖಪಾಲರಿಗೆ ಕಳುಹಿಸಿಕೊಡುವುದು.

ಹಣ ಸೆಳೆಯುವ ಮತ್ತು ಬಟವಾಡೆ ಅಧಿಕಾರಿಗಳ (ಡಿಡಿಒ) ಜವಾಬ್ದಾರಿಗಳು

ಸೇವೆಯಲ್ಲಿರುವ ಸರ್ಕಾರಿ ಅಧಿಕಾರಿ/ನೌಕರರ ಪ್ರಕರಣಗಳು

i. ಇಲಾಖಾ ಮುಖ್ಯಸ್ಥರು ದೃಢೀಕರಿಸಿರುವ ನಮೂನೆ-1.
i. ಪ್ರಾನ್ ಖಾತೆಗೆ ಸಂಬಂಧಿಸಿದಂತೆ ವೇತನದಿಂದ ಕಡಿತಗೊಳಿಸಿದ ಎನ್.ಪಿ.ಎಸ್ .ಮೊತ್ತದ ವಿವರಗಳ ತಃಖ (Statementof Trensactions) ಹಾಗೂ ತಃಖೆಯಲ್ಲಿ ನಮೂದಿಸಿರುವುದಲ್ಲದೇ ಇನ್ಯಾವುದೇ ಮತ್ತು ಎನ್.ಪಿ.ಎಸ್. ಸಂಬಂಧ ಕಟಾವಣೆಯಾಗಿರುವುದಿಲ್ಲ ಮತ್ತು ಕಟಾವಣೆ ಮಾಡುವುದು ಬಾಕಿ ಇರುವುದಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿ/ನೌಕರರು ಮತ್ತು ಡಿಡಿಓರವರಿಂದ ದೃಢೀಕರಣ.
iii. ಮೂಲ ಪಾನ್ ಕಾರ್ಡ್ ಪ್ರತಿ ಅಥವಾ ಡಿಡಿಓ ರವರಿಂದ ದೃಢೀಕೃತ ಇ-ಪ್ರಾನ್ ಪ್ರತಿ
iv. ಸರ್ಕಾರಿ ಅಧಿಕಾರಿ/ನೌಕರರ ಜಿ.ಪಿ.ಎಫ್. ಖಾತೆ ವಿವರ.

ನಿವೃತ್ತಿ ಹೊಂದಿರುವ ಸರ್ಕಾರಿ ಅಧಿಕಾರಿ/ನೌಕರರ ಪ್ರಕರಣಗಳು

i. ಮೇಲಿನ ಕ್ರಮ ಸಂ. 2 (a) - (i), (ii), (iii) ರಲ್ಲಿನ ದಾಖಲೆಗಳು.
ii. ನಿವೃತ್ತಿ ಹೊಂದಿದ ನೌಕರರು ಪಿಂಚಣಿಗಾಗಿ (ನಿವೃತ್ತಿ ಉಪದಾನ ಒಳಗೊಂಡಂತೆ) ಅನುಬಂಧದಲ್ಲಿನ ನಮೂನೆ-2ರಲ್ಲಿ ಮನವಿ.
iii, ಅನುಬಂಧದಲ್ಲಿನ ನಮೂನ-3ರಲ್ಲಿ ಈಗಾಗಲೇ CRA ಯಿಂದ ಇತ್ಯರ್ಥಪಡಿಸಿರುವ ಪ್ರಾನ್ ಖಾತೆಯಲ್ಲಿನ ಮೊತ್ತದ ವಿವರ.
iv. ಈಗಾಗಲೇ ASP ಯಲ್ಲಿ ಹೂಡಿಕೆ ಮಾಡಿರುವ ಮೊತ್ತವನ್ನು ASP ಯಿಂದ ಹಿಂಪಡೆದು ಸರ್ಕಾರಕ್ಕೆ ಹಿಂತಿರುಗಿಸಲು ನಮೂನೆ-4 ರಲ್ಲಿ ಒಪ್ಪಿಗೆ ಪತ್ರ
v. ಡಿಡಿಓ ರವರಿಂದ Annuity Policy Cancellation ಮಾಡಲು ಸಂಬಂಪಟ್ಟ ASP ರವರಿಗೆ ಬರೆದಿರುವ ಪತ್ರ (ನಮೂನೆ-5).
vi. ASP ರವರಿಂದ ನೀಡಿರುವ ಬಾಂಡ್ (ಹೂಡಿಕೆ/ಬಾಂಡ್) ಜೆರಾಕ್ಸ್ ಪ್ರತಿಯನ್ನು ಮತ್ತು ಮಾಸಿಕ ಪಿಂಚಿಣಿ ವಿವರವನ್ನು ನಿವೃತ್ತ ನೌಕರರು ಹಾಗೂ ಡಿಡಿಓ ರವರು ದೃಢೀಕರಿಸಿದ ಪ್ರತಿ‍
vii, ಡಿಡಿಓ ರವರಿಂದ ದೃಢೀಕರಿಸಿರುವ ನಿವೃತ್ತ ಅಧಿಕಾರಿ/ನೌಕರರ_ ಖಜಾನ-2 recipient ID ವಿವರ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+