ಶಾಕಿಂಗ್ ಸುದ್ದಿ: ಸರ್ಕಾರಿ ರಜೆಗಳಿಗೆ ಬ್ರೇಕ್ ಹಾಕಲಿದೆ ಸರ್ಕಾರ
Recommended Video

ಬೆಂಗಳೂರು, ನವೆಂಬರ್ 20: ಸರ್ಕಾರಿ ರಜೆಗಳ ಸಂಖ್ಯೆ ಕಡಿತ ಮಾಡಲು ಸರ್ಕಾರ ಚಿಂತಿಸಿದ್ದು, ಇದರ ಬಗ್ಗೆ ಪರಿಶೀಲಿಸಲು ಸಚಿವ ಸಂಪುಟ ಉಪಸಮಿತಿಯನ್ನು ರಚಿಸಲಾಗಿದೆ.
ಸರ್ಕಾರಿ ರಜೆಗಳು ಹೆಚ್ಚಾಗಿರುವ ಕಾರಣದಿಂದ ಸರ್ಕಾರಿ ಕೆಲಸಗಳು ವೇಗವಾಗಿ ಸಾಗುತ್ತಿಲ್ಲ ಎಂಬ ದೂರು ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರಿ ರಜೆಗಳಲ್ಲಿ ಕಡಿತ ಮಾಡಲು ಸರ್ಕಾರ ಚಿಂತಿಸಿ, ಕಾರ್ಯೋನ್ಮುಕವಾಗಿದೆ.
2019 ನೇ ವರ್ಷದಲ್ಲಿ 54 ವಾರದ ರಜೆಗಳು, 12 ಎರಡನೇ ಶನಿವಾರ, 21 ಸಾರ್ವತ್ರಿಕ ರಜೆಗಳು, 19 ಸಾಂದರ್ಭಿಕ ರಜೆಗಳು ಇವೆ. ರಜೆಗಳ ಸಂಖ್ಯೆ ಹೆಚ್ಚಾಗಿದೆ ಎಂಬ ಅಭಿಪ್ರಾಯ ಜನರಿಂದ ಕೇಳಿಬರುತ್ತಿದ್ದು, ರಜೆಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಸರ್ಕಾರ ಮುಂದಾಗಿದೆ.

ಸಚಿವ ಸಂಪುಟ ಉಪಸಮಿತಿಯು ಪರಿಶೀಲನೆ ನಡೆಸಿ ಯಾವ ರಜೆಗಳನ್ನು ತೆಗೆದುಹಾಕಬೇಕು, ಯಾವ ರಜೆಗಳನ್ನು ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡುತ್ತದೆ. ಅದರ ಆಧಾರದಲ್ಲಿ ಸರ್ಕಾರವು ರಜೆಗಳನ್ನು ಕಡಿತಗೊಳಿಸುವ ನಿರ್ಣಯ ತೆಗೆದುಕೊಳ್ಳಲಿದೆ.
ಸರ್ಕಾರದ ಕೆಲಸ ಸರಾಗವಾಗಿ ಸಾಗಲು ರಜೆಗಳಿಗೆ ಕಡಿವಾಣ ಮತ್ತು ಅಧಿಕಾರಿಗಳಿಗೆ ಅನುಕೂಲವಾಗುವಂತೆ ವಾರಾಂತ್ಯದಲ್ಲಿ ರಜೆ ನೀಡುವ ಬಗ್ಗೆಯೂ ಸಂಪುಟ ಉಪಸಮಿತಿ ಪರಿಶೀಲನೆ ನಡೆಸಲಿದೆ.












Click it and Unblock the Notifications