ರಾಜ್ಯದ ಜನತೆಗೆ ಗುಡ್ ನ್ಯೂಸ್; 1 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ, ಇ-ಸ್ವತ್ತು ವಿತರಣೆ: ಸರ್ಕಾರ ಮಹತ್ವದ ಆದೇಶ
ಬೆಂಗಳೂರು: ಕರ್ನಾಟಕ ಭೂಕಂದಾಯ ಕಾಯ್ದೆ 1964 ಕಲಂ 94ಡಿ ಅಡಿಯಲ್ಲಿ ನೀಡುವ ಹಕ್ಕುಪತ್ರ ಹಾಗೂ ನೋಂದಣಿ ಪ್ರಗತಿ ಪರಿಶೀಲನೆ ಕುರಿತು ಕರ್ನಾಟಕ ಸರ್ಕಾರ ಮಹತ್ವದ ಆದೇಶವನ್ನ ಹೊರಡಿಸಿದೆ. ಹಕ್ಕು ಪತ್ರ ಹಾಗೂ ಇ-ಸ್ವತ್ತು ವಿತರಣೆ ಬಗ್ಗೆ ರಾಜ್ಯ ಸರ್ಕಾರ ರಾಜ್ಯದ ಜನತೆಗೆ ಗುಡ್ ನ್ಯೂಸ್ ನೀಡಿದೆ.
ರಾಜ್ಯದ ಜನತೆಗೆ ಸರ್ಕಾರ ಫೆಬ್ರವರಿ 13 ರಂದು ಹಾವೇರಿ ಜಿಲ್ಲೆಯಲ್ಲಿ ಕಂದಾಯಗ್ರಾಮ ರಚನೆಯ 1 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ, ನೋಂದಣಿ ದಾಖಲಾತಿ ಮತ್ತು ಇ-ಸ್ವತ್ತು ವಿತರಿಸಲು ಸರ್ಕಾರ ಮಹತ್ವದ ಆದೇಶ ಹೊರಡಿಸಿದ್ದು, ಇದರಿಂದ ರಾಜ್ಯದ ಜನತೆಗೆ ಶುಭ ಸುದ್ದಿ ಸಿಕ್ಕಂತಾಗಿದೆ.

ಸರ್ಕಾರದ ಆದೇಶದಲ್ಲಿ ಏನಿದೆ?
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ 13 ಫೆಬ್ರವರಿ 2026 ರಂದು ಹಾವೇರಿ ಜಿಲ್ಲೆಯಲ್ಲಿ ಕಂದಾಯಗ್ರಾಮ ರಚನೆಯ 1 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ, ನೋಂದಣಿ ದಾಖಲಾತಿ ಮತ್ತು ಇ-ಸ್ವತ್ತು ವಿತರಿಸಲು ಉದ್ದೇಶಿಸಲಾಗಿದೆ.
ಈ ಹಿನ್ನಲೆಯಲ್ಲಿ ತಹಶೀಲ್ದಾರರ ಹೆಸರಿಗೆ ಇ-ಸ್ವತ್ತು ತಯಾರಿಸುವಿಕೆ, ನೋಂದಣಿ ಹಾಗೂ ಫಲಾನುಭವಿಗಳ ಹೆಸರಿಗೆ ಇ-ಸ್ವತ್ತು ತಯಾರಿಸುವ ಬಗ್ಗೆ ಚರ್ಚಿಸಲು ಕಂದಾಯ ಸಚಿವರ ಅಧಕ್ಷತೆಯಲ್ಲಿ ದಿನಾಂಕ 29.01.2026 ರಂದು ಪೂರ್ವಾಹ್ನ 10.30 ಗಂಟೆಗೆ, 'ಕೊಠಡಿ ಸಂಖ್ಯೆ 122, ವಿಕಾಸ ಸೌಧದಲ್ಲಿ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಗೆ ಈ ಕೆಳಕಂಡ ಇಲಾಖೆಯ ಪ್ರತಿನಿಧಿಗಳು/ಅಧಿಕಾರಿಗಳು ತಾಂತ್ರಿಕ ತಂಡ ಅಗತ್ಯ ಮಾಹಿತಿಯೊಂದಿಗೆ ಖುದ್ದು ಅಥವಾ ವಿಡಿಯೋ ಸಂವಾದದ ಮೂಲಕ ಹಾಜರಾಗುವಂತೆ ಕೋರಿದೆ.
ಜಿಲ್ಲಾಧಿರಿಗಳ ಜೊತೆ ಮಹತ್ವದ ಸಭೆ
ಬೆಂಗಳೂರು ನಗರ ವ್ಯಾಪ್ತಿ ಸರ್ಕಾರಿ ಜಮೀನು ಒತ್ತುವರಿ ತೆರವು ಸಂಬಂಧಿಸಿ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಕಂದಾಯ ಆಯುಕ್ತರು ಜಿಲ್ಲಾಧಿಕಾರಿಗಳು ಹಾಗೂ ಎಲ್ಲಾ ತಹಶೀಲ್ದಾರ್ - ಎಸಿ ಗಳ ಜೊತೆಗೆ ಸಭೆ ನಡೆಸಿದರು. ಇನ್ನೂ ಸಭೆಯಲ್ಲಿ ಪ್ರತಿಯೊಂದು ಖಾಲಿ ಸರ್ಕಾರಿ ಜಮೀನಿಗೆ ಬೇಲಿ-ಕಾಂಪೌಂಡ್ ಹಾಕಲೇಬೇಕು. ಮತ್ತೆ ಒತ್ತುವರಿ ಆದರೆ ತಹಶೀಲ್ದಾರ್ ಅವರೇ ಜವಾಬ್ದಾರಿ. ನಕಾಶೆ ರಸ್ತೆ ಎಷ್ಟು ಒತ್ತುವರಿ ಆಗಿದೆ ಎಂಬ ಕುರಿತು ಮೊದಲು ಮಾಹಿತಿ ಸಂಗ್ರಹಿಸಲು ಸೂಚನೆ ನೀಡಲಾಗಿದೆ ಎಂದರು.
Land beat ಆ್ಯಪ್ ನಲ್ಲಿ ಶೇ.97 ರಷ್ಟು ಸರ್ಕಾರಿ ಭೂಮಿಯನ್ನು ಗುರುತಿಸಿ ಡೇಟಾ ಎಂಟ್ರಿ ಮಾಡಲಾಗಿದೆ. Land beat ಡಾಟಾ ಉಪಯೋಗಿಸಿಕೊಂಡು ground truthing ಮಾಡಿ ದಿಶಾಂಕ್ ಆ್ಯಪ್ ನಲ್ಲಿ ಅಪ್ಡೇಟ್ ಮಾಡಬೇಕು. ಇದರ ಆಧಾರದಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಒತ್ತುವರಿ ತೆರವುಗೊಳಿಸಬೇಕು. ಅನುಮತಿ ನೀಡಿದ ಪ್ರದೇಶಕ್ಕೂ ಮೀರಿ ಅನದೀಕೃತ ಲೇಔಟ್ ಮಾಡಿದವರ ವಿರುದ್ಧ FIR ಮಾಡಬೇಕು. ಅಕ್ರಮ ಲೇಔಟ್ ನಿರ್ಮಿಸಿದ ಎಲ್ಲರ ವಿರುದ್ಧವೂ FIR ದಾಖಲಿಸಿ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.
ಇನ್ನೂ ಗೋಮಾಳಗಳಲ್ಲಿ ಮಾಡಿರುವ illogical layout ಗಳ ವಿರುದ್ಧ ಏಕೆ ಕ್ರಮ ಜರುಗಿಸಿಲ್ಲ. ಎಷ್ಟು illegal Layouts ಗಳನ್ನ Demolish ಮಾಡಿದಿರ? ಎಷ್ಟು ಜನರ ಮೇಲೆ FIR ಮಾಡಿದೀರ, Grant ಜಮೀನು ಮೀರಿ layout ಮಾಡಿದ್ದರೆ ಅಂತವರ ವಿರುದ್ಧ FIR ದಾಖಲಿಸಿ. Fake documents ಮಾಡಿರುವವ ವಿರುದ್ಧ ಕ್ರಮ ಜರುಗಿಸಲು ಸೂಚನೆ ನೀಡಲಾಗಿದೆ. ಬೆಂಗಳೂರಲ್ಲಿ ದಿನನಿತ್ಯ ಅಕ್ರಮ ಕಟ್ಟಡಗಳು ತಲೆ ಎತ್ತುತ್ತಿವೆ. ಅಧಿಕಾರಿಗಳು ಏನ್ ಮಾಡ್ತಾ ಇದೀರ? ಕಾನೂನು ಉಲ್ಲಂಘಿಸಿ ಲೇಔಟ್ ಮಾಡುವವರಿಗೆ ಕರುಣೆ ತೋರಿಸುವ ಅಗತ್ಯ ಇಲ್ಲ ಎಂದು ಕೃಷ್ಣಬೈರೇಗೌಡ ಅವರು ಸೂಚನೆ ನೀಡಿದ್ದಾರೆ.












Click it and Unblock the Notifications