Govt Employees Strike : ರಾಜ್ಯ ಸರ್ಕಾರದ ವಿರುದ್ಧ ನೌಕರರ ಸಮರ; ಏನಿರುತ್ತೆ? ಏನಿರಲ್ಲ? ಇಲ್ಲಿದೆ ಸಂಪೂರ್ಣ ಮಾಹಿತಿ

ಸರ್ಕಾರಿ ನೌಕರರ ಮುಷ್ಕರ ಹಿನ್ನೆಲೆ ಹಲವು ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದು, ಈ ಕುರಿತು ಸಿಎಂ ಜೊತೆಗೆ ಇನ್ನೊಂದು ಸಭೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಬೆಂಗಳೂರು,ಮಾರ್ಚ್ 1: 7ನೇ ವೇತನ ಆಯೋಗದ ವರದಿ ಜಾರಿಗಾಗಿ ಪಟ್ಟು ಬಿಡದ ಸರ್ಕಾರಿ ನೌಕರರು ತಮ್ಮ ಹಲವು ಬೇಡಿಕೆಯನ್ನ ಸರರ್ಕಾರದ ಮುಂದಿಟ್ಟು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಇಂದಿನಿಂದ ಕರೆ ನೀಡಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ಸಂಘದ ಪಧಾದಿಕರಿಗಳ ಜೊತೆಗೆ ನಿನ್ನೆ ತಡರಾತ್ರಿ (ಫೆಬ್ರವರಿ28) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಭೆ ನಡೆಸಿದ್ದು, ಆ ಸಭೆ ವಿಫಲವಾಗಿದೆ. ಇನ್ನೂ ಈ ಸಭೆಯ ಬಳಿಕವು ಯಾವುದೇ ರೀತಿಯ ಮುಷ್ಕರಕ್ಕೆ ಕೊಟ್ಟಿರುವ ಕರೆಯನ್ನ ಯಾವುದೇ ಕಾರಣಕ್ಕೂ ವಾಪಸ್ ಪಡೆಯದಿರುವುದಾಗಿ ಸರ್ಕಾರಿ ನೌಕರರು ನಿರ್ಧರಿಸಿದ್ದದಾರೆ. ಹೀಗಾಗಿ ಇಂದಿನಿಂದ ರಾಜ್ಯದಲ್ಲಿ ಬಹುತೇಕ ಸರ್ಕಾರಿ ಸೇವೆಗಳು ಬಂದ್ ಆಗಲಿವೆ.

Government Offices To Remain Closed From Today As Employees Go On Indefinite Strike

ಸರ್ಕಾರಿ ನೌಕರರ ಮುಷ್ಕರದಿಂದ ಹಲವು ಸರ್ಕಾರಿ ಸೇವೆಗಳು ಬಂದ್ ಆಗಲಿದ್ದು, ಸಾರ್ವಜನಿಕ ಸರ್ಕಾರಿ ಕೆಲಸಗಳಲ್ಲಿ ವ್ಯತ್ಯಯವಾಗಲಿದೆ. ಈ ಮುಷ್ಕರದಲ್ಲಿ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ಶಿಕ್ಷಣ ಇಲಾಖೆ, ಸಾರಿಗೆ, ಪೌರ ಕಾರ್ಮಿಕರು ಸೇರಿದಂತೆ ವಿವಿಧ ಇಲಾಖೆಗಳ ನೌಕಕರು ಸೇರಿದಂತೆ 35 ಕ್ಕೂ ಹೆಚ್ಚು ಸಂಘಗಳು ಈ ಮುಷ್ಕರಕ್ಕೆ ಬೆಂಬಲವನ್ನ ಸೂಚಿಸಿವೆ.

ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ, ಪೌರ ಕಾರ್ಮಿಕರು ಸೇರಿ ವಿವಿಧ ಇಲಾಖೆಗಳ ನೌಕರರು ಸೇರಿದಂತೆ ಸುಮಾರು 40 ಸಂಘಗಳು ಬೆಂಬಲ ಸೂಚಿಸಿವೆ. ಈ ಹಿನ್ನೆಲೆಯಲ್ಲಿ ಇಂದು ಸಾರ್ವಜನಿಕರ ಸರ್ಕಾರಿ ಕೆಲಸಗಳಲ್ಲಿ ವ್ಯತ್ಯಯವಾಗಲಿದೆ.

ಸರ್ಕಾರಿ ನೌಕರರು ಮುಷ್ಕರದಿಂದಾಗಿ ಇಂದು ಓಪಿಡಿ ಸೇರಿದಂತೆ ಉಳಿದ ಸೇವೆಗಳು ಇರುವುದಿಲ್ಲ. ಆಸ್ಪತ್ರೆಯಲ್ಲಿ ತುರ್ತು ಸೇವೆ ಮಾತ್ರಗಳು ಮಾತ್ರ ಲಭ್ಯವಿದೆ. ತುರ್ತು ಸೇವೆ ಹಿನ್ನೆಲೆ ಕಪ್ಪುಪಟ್ಟಿ ಧರಿಸಿ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗುತ್ತಾರೆ. ಆದರೆ, ಬೆಂಗಳೂರಿನಲ್ಲಿ 3 ಪ್ರಮುಖ ಆಸ್ಪತ್ರೆ, 105 ಪ್ರಾಥಮಿಕ ಆರೋಗ್ಯ ಕೇಂದ್ರ. 19 ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳ ಓಪಿಡಿ ಇರುವುದಿಲ್ಲ ಎಂದು ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ವಿವೇಕ್ ದೊರೆ ಸ್ಪಷ್ಟಪಡಿಸಿದ್ದಾರೆ.

Government Offices To Remain Closed From Today As Employees Go On Indefinite Strike

ಯಾವ ಸೇವೆಗಳು ಇರಲ್ಲ?

ಸರ್ಕಾರಿ ನೌಕಕರ ಮುಷ್ಕರದಿಂದಾಗಿ ಹಲವು ಸೇವೆಗಳನ್ನ ವ್ಯತ್ಯಯ ಉಂಟಾಗಲಿದ್ದು, ವಿಧಾನಸೌಧದ ಕಚೇರಿಗಳು, ಬಿಬಿಎಂಪಿ ಕೇಂದ್ರ ಕಚೇರಿ, ಕಂದಾಯ ಇಲಾಖೆ, ತಹಶೀಲ್ದಾರ್ ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಗ್ರಾಮ ಪಂಚಾಯ್ತಿ, ಪುರಸಭೆ ಕಚೇರಿ, ಸರ್ಕಾರಿ ಶಾಲೆಗಳು, ಸರ್ಕಾರಿ ಕಾಲೇಜು, ಸರ್ಕಾರಿ ಆಸ್ಪತ್ರೆ (ಒಪಿಡಿ), ಉಪ ನೋಂದಣಾಧಿಕಾರಿ ಕಚೇರಿ, ಪ್ರಾದೇಶಿಕ ಸಾರಿಗೆ ಇಲಾಖೆ, ಕಸ ಸಂಗ್ರಹಣೆ, ಸೇರಿದಂತೆ ನೀರು ಪೂರೈಕೆ ಸೇವೆಗಳು ಇರುವುದಿಲ್ಲ.

ಯಾವ ಸೇವೆ ಇರುತ್ತೆ?

ಸರ್ಕಾರಿ ನೌಕರರ ಮುಷ್ಕರದಿಂದ ಹಲವು ಸೇವೆಗಳು ಸ್ಥಗಿತಗೊಳಲಿದ್ದು, ಸರ್ಕಾರಿ ಬಸ್ ಸೇವೆ, ತುರ್ತು ಆರೋಗ್ಯ ಸೇವೆ, ಆಸ್ಪತ್ರೆಯಲ್ಲಿ ಒಳರೋಗಿಗಳ ಸೇವೆ ಮತ್ತು ಐಸಿಯು ಸೇವೆ ಇರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+