MLA Munirathna: ಶಾಸಕ ಮುನಿರತ್ನಗೆ ಶಾಕ್ ಮೇಲೆ ಶಾಕ್! ಹಳೇ ಪ್ರಕರಣಗಳ ರೀ ಓಪನ್? ಇಲ್ಲಿವೆ ಹಳೇ ಕೇಸ್ ಗಳ ಪಟ್ಟಿ.
ಬೆಂಗಳೂರು, ಸೆಪ್ಟೆಂಬರ್ 21: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಜೈಲುಪಾಲಾಗಿರುವ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅಕ್ರಮಗಳಿಗೆ ಸಂಬಂಧಿಸಿದ ಒಂದೊಂದೇ ಅಚ್ಚರಿ ಪ್ರಕರಣಗಳು ಇದೀಗ ಬಯಲಾಗುತ್ತಿವೆ.
ರಾಜಕೀಯ ಎದುರಾಳಿಗಳನ್ನ ಎದುರಿಸಲು ಸಿನಿಮಾ ನಿರ್ಮಾಪಕ, ಬಿಜೆಪಿ ಶಾಸಕ ಮುನಿರತ್ನ ಅವರು ಏಡ್ಸ್ ಹನಿಟ್ರ್ಯಾಪ್ ನಡೆಸುತ್ತಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಈ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಒಂದು ಕಡೆ ರೇಪ್ ಕೇಸ್ ಆರೋಪ ಹೊತ್ತ ಮುನಿರತ್ನ ಅವರಿಗೆ ಹೆಚ್‌ಐವಿ ಸಂಕಟ ಶುರುವಾಗಿದೆ. ಇಷ್ಟೇ ಅಲ್ಲದೇ ಒಕ್ಕಲಿಗ ಸಮುದಾಯದ ನಾಯಕರು ಮುನಿರತ್ನ ಹಳೇ ಕೇಸ್‌ಗಳನ್ನೆಲ್ಲಾ ರೀಓಪನ್ ಮಾಡಲು ಸಿಎಂಗೆ ಮನವಿ ಸಲ್ಲಿಸಿದ್ದಾರೆ.

ಬಿಜೆಪಿ ಶಾಸಕ ಮುನಿರತ್ನ ಅವರ ಮೇಲೆ ಈಗಾಗಲೇ ಜಾತಿನಿಂದನೆ, ಜೀವ ಬೆದರಿಕೆ ಕೇಸ್‌ನಲ್ಲಿ ಕೋರ್ಟ್ ಜಾಮೀನು ಕೊಟ್ಟಿದೆ. ಇದೀಗ ಅತ್ಯಾಚಾರ, ಹನಿಟ್ರ್ಯಾಪ್ ಕೇಸ್‌ನಲ್ಲಿ ಮುನಿರತ್ನರನ್ನ ಕಗ್ಗಲೀಪುರ ಪೊಲೀಸರು ಬಂಧಿಸಿ ವಿಚಾರಣೆ ಮಾಡ್ತಿದ್ದಾರೆ. ಇನ್ನೊಂದ್ಕಡೆ ಮುನಿರತ್ನ ವಿಷ್ಯದಲ್ಲಿ ರಾಜ್ಯ ರಾಜಕೀಯದಲ್ಲಿ ಸೇಡಿನ ಸಮರ ಶುರುವಾಗಿದೆ. ರಾಜಕೀಯ ಎದುರಾಳಿಗಳು ಸೇರಿದಂತೆ ಸ್ವಪಕ್ಷದವರಿಗೆ ಏಡ್ಸ್ ರೋಗಿಯ ರಕ್ತ ಇಂಜೆಕ್ಟ್ ಮಾಡಲು ಪ್ಲಾನ್ ನಡೆಸಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿದೆ.
ಕಾಂಗ್ರೆಸ್ ಸಚಿವರು ಶಾಸಕರು ಅದರಲ್ಲೂ ಒಕ್ಕಲಿಗ ಸಮುದಾಯವ್ರೆಲ್ಲಾ ಒಂದಾಗಿದ್ದಾರೆ. ಮುನಿರತನನ್ನ ಮಟ್ಟ ಹಾಕ್ತೀವಿ ಅಂತ ಏಕವಚನದಲ್ಲೇ ವಾಗ್ದಾಳಿ ಮಾಡ್ತಿದ್ದಾರೆ. ಹೀಗಾಗಿ ಮುನಿರತ್ನ ಅವರ ವಿರುದ್ಧ ಹಲವು ಅಸ್ತ್ರವನ್ನ ಕೈ ನಾಯಕರು ಪ್ರಯೋಗಿಸಿದ್ದಾರೆ. ಒಕ್ಕಲಿಗ ಕಾಂಗ್ರೆಸ್ ನಾಯಕರೆಲ್ಲಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿದ್ದರು. ಮುನಿರತ್ನ ವಿರುದ್ಧ ಹಲವಾರು ದೂರುಗಳಿವೆ. ಎಲ್ಲದರ ತನಿಖೆಗೆ ವಿಶೇಷ ತಂಡ ರಚನೆಗೆ ಸಿಎಂ ಹತ್ತಿರ ಹಲವು ನಾಯಕರು ಮನವಿನೂ ಮಾಡಿದ್ದರು.
ಮುನಿರತ್ನ ಹಳೇ ಕೇಸ್‌ಗಳು!
* 2009: ಸಿವಿಲ್ ಗುತ್ತಿಗೆದಾರನಾಗಿದ್ದಾಗ ಕಳಪೆ ಕಾಮಗಾರಿ, ಅಧಿಕಾರಿಗಳ ಜೊತೆ ಶಾಮೀಲಾಗಿ ಭ್ರಷ್ಟಾಚಾರ ನಡೆಸಿದ್ದ ಕೇಸ್.
* 2014: ರಾಜರಾಜೇಶ್ವರಿ ನಗರ ಕ್ಷೇತ್ರದ ಟೆಂಡರ್‌ಗಳಲ್ಲಿ ಬಹುಕೋಟಿ ಹಗರಣ
* ವೈಯಾಲಿಕಾವಲ್ ಮನೆಯಲ್ಲಿ ಸಿಕ್ಕಿದ್ದ 1016 ಬಿಬಿಎಂಪಿ ಫೈಲ್ ಪ್ರಕರಣ.
* 2018: ₹1500 ಕೋಟಿ ಬಿಬಿಎಂಪಿ ನಕಲಿ ಬಿಲ್ ಮಾಡಿಸಿದ ಆರೋಪ, ಅಪರಾಧ ತನಿಖಾ ಇಲಾಖೆ ಚಾರ್ಜ್‌ಶೀಟ್‌ನಲ್ಲಿ ಮುನಿರತ್ನ ಹೆಸರು.
* 2018: ಜಾಲಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ನಕಲಿ ವೋಟರ್ ಐಡಿ ಪತ್ತೆ, ಕ್ರಿಮಿನಲ್ ಕೇಸ್ ದಾಖಲಿಸಿದ್ದ ಚುನಾವಣಾ ಆಯೋಗದ ಕೇಸ್.
* 2019: ಮಹಿಳಾ ಕಾರ್ಪೊರೇಟರ್ ಸೀರೆ ಎಳೆದಿದ್ದ ಕೇಸ್ ರೀ ಓಪನ್.
* 2023: ವಾರ್ಡ್ ನಂ 160ರಲ್ಲಿ ಮಹಿಳೆಯರಿಗೆ ಸೀರೆ ವಿತರಣೆ.
* 2024: ಜಾತಿನಿಂದನೆ, ಜೀವ ಬೆದರಿಕೆ ಪ್ರಕರಣದ ಸಮಗ್ರ ತನಿಖೆ, ಅತ್ಯಾಚಾರ, ಹನಿಟ್ರ್ಯಾಪ್, ಮಹಿಳೆಯರ ಮೇಲೆ ದೌರ್ಜನ್ಯ ಹಾಗೂ HIV ಇಂಜೆಕ್ಟ್ ಮಾಡಿ ವಿರೋಧಿಗಳ ಮೇಲೆ ಬಯೋವಾರ್.












Click it and Unblock the Notifications