Government Employee: ಹಳೇ - ಹೊಸ ಪಿಂಚಣಿ ಯೋಜನೆ ವ್ಯತ್ಯಾಸವೇನು, ಯಾವುದು ಲಾಭ ?
Government Employee: ಕರ್ನಾಟಕ ಸರ್ಕಾರವು ಹಳೆಯ ಪಿಂಚಣಿ ಯೋಜನೆಯ ಜಾರಿಯ ವಿಷಯದಲ್ಲಿ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್ ಕೊಟ್ಟಿದೆ. ಕರ್ನಾಟಕ ಸರ್ಕಾರವು ಹಳೆಯ ಪಿಂಚಣಿ ಯೋಜನೆ (OPS) ಜಾರಿ ಮಾಡುವುದಕ್ಕಿಂತ ಮುಂಚೆ ಈ ಸಂಬಂಧ ಅಧ್ಯಯನ ಮಾಡಲು ಒಂದು ಸಮಿತಿಯನ್ನು ರಚಿಸಿದೆ. ಅಲ್ಲದೆ ಸಮಿತಿಯ ವರದಿ ಆಧಾರದ ಮೇಲೆ ಅದನ್ನು ಮುಂದಿನ ದಿನಗಳಲ್ಲಿ ಜಾರಿ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ. ಅಲ್ಲದೆ ರಾಜ್ಯ ಸರ್ಕಾರವು ಏಕೀಕೃತ ಪಿಂಚಣಿ ಯೋಜನೆ (UPS)ಯನ್ನು ಸಹ ಪರಿಶೀಲಿಸುತ್ತಿದೆ ಎಂದು ಹೇಳಲಾಗಿದೆ. ಹಾಗಾದರೆ ಯಾವ ಪಿಂಚಣಿ ಯೋಜನೆ ಜಾರಿಯಾದರೆ ಕರ್ನಾಟಕದ ಸರ್ಕಾರಿ ನೌಕರರಿಗೆ ಲಾಭವಾಗಿದೆ. ಈ ಪಿಂಚಣಿ ಯೋಜನೆಗಳ ವ್ಯತ್ಯಾಸವೇನು ಎನ್ನುವ ವಿವರ ಇಲ್ಲಿದೆ.
ಹಳೆಯ ಪಿಂಚಣಿ ಯೋಜನೆ (OPS): ಕರ್ನಾಟಕ ಸರ್ಕಾರವು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಅಡಿಯಲ್ಲಿದ್ದ ಕೆಲವು ಸರ್ಕಾರಿ ಉದ್ಯೋಗಿಗಳನ್ನು OPS ಯೋಜನೆ ವರ್ಗಾಯಿಸಿತ್ತು. ಇನ್ನು OPS ಹಿರಿಯ ನಾಗರಿಕರ ಕಲ್ಯಾಣ ಕಾರ್ಯಕ್ರಮವಾಗಿದೆ. ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಇಲಾಖೆಯು ಈ ಯೋಜನೆಯನ್ನು ಜಾರಿ ಮಾಡುತ್ತದೆ.

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS): NPS ಎರಡು ಹಂತಗಳ ಪಿಂಚಣಿ ಯೋಜನೆಯಾಗಿದೆ. ಇಲ್ಲವೇ ಇದನ್ನು ಎರಡು ಶ್ರೇಣಿಗಳಲ್ಲಿ ವಿಭಜನೆ ಮಾಡಲಾಗಿದೆ. ಶ್ರೇಣಿ I ಮತ್ತು ಶ್ರೇಣಿ II ಎಂದು ವಿಭಜಿಸಲಾಗಿದೆ. ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಮತ್ತು ನೌಕರರು ತಮ್ಮ ಸಂಬಳ ಮತ್ತು DA ಯ ಶೇ 10% ರಷ್ಟು ಮೊತ್ತವು ಇದಕ್ಕೆ ಜಮೆಯಾಗುತ್ತದೆ ಮತ್ತು ಸರ್ಕಾರವು ಶೇ 14% ರಷ್ಟು ಕೊಡುಗೆ ನೀಡುತ್ತದೆ. ಇನ್ನು NPS ಮೊತ್ತವನ್ನು ಮೂಲಸೌಕರ್ಯ, ಸಾಲ ನಿಧಿಗಳು ಹಾಗೂ ಇಕ್ವಿಟಿಯಲ್ಲಿ ಹೂಡಿಕೆ ಮಾಡಲಾಗುತ್ತದೆ. NPS ಶ್ರೇಣಿ II ಹೂಡಿಕೆಗಳು ಸೆಕ್ಷನ್ 80 C ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಅರ್ಹವಾಗಿವೆ.
ಏಕೀಕೃತ ಪಿಂಚಣಿ ಯೋಜನೆ (UPS): ಇನ್ನು ಮತ್ತೊಂದು ಪಿಂಚಣಿ ಯೋಜನೆ UPS ಆಗಿದೆ. ಈ ಯೋಜನೆಯು NPSಗೆ ಪರ್ಯಾಯವಾಗಿದೆ. ಇನ್ನೂ ಕೆಲವರು UPS ಅನ್ನು ಹೊಸ ಬಾಟಲಿಯಲ್ಲಿ ಹಳೆಯ ವೈನ್ ಎನ್ನುತ್ತಾರೆ. ಈ ಹಿಂದೆ NPS ಅಡಿಯಲ್ಲಿ ಕೆಲಸ ಮಾಡಿದ್ದ ಕೆಲವು ಉದ್ಯೋಗಿಗಳು UPS ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸರ್ಕಾರವು OPS ಮರು ಜಾರಿ ಮಾಡಬೇಕು ಎನ್ನುವ ಆಗ್ರಹವೂ ಇದೆ.
ಹಳೆಯ ಪಿಂಚಣಿ ಯೋಜನೆ ಜಾರಿಗೆ ಆಗ್ರಹ: ಇನ್ನು ರಾಜ್ಯ ಸರ್ಕಾರಿ ನೌಕರರು ಹಳೆಯ ಪಿಂಚಣಿ ಯೋಜನೆಯನ್ನು ಜಾರಿ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇದರಿಂದ ಹೆಚ್ಚು ಲಾಭ ಹಾಗೂ ನ್ಯಾಯ ಸಮ್ಮತ ಎನ್ನುವುದು ಸರ್ಕಾರಿ ನೌಕರರ ವಾದವಾಗಿದೆ. ಇನ್ನು ಕರ್ನಾಟಕ ಸರ್ಕಾರಿ ನೌಕರರು ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದು ಮಾಡಿ, ಹಳೆ ಪಿಂಚಣಿ ಯೋಜನೆ (ಒಪಿಎಸ್)ಯನ್ನೇ ಮರು ಜಾರಿ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
ಈ ಸಂಬಂಧ ರಾಜ್ಯ ಸರ್ಕಾರವು ಶೀಘ್ರ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ಹಳೆಯ ಪಿಂಚಣಿ ಯೋಜನೆಯನ್ನು ಜಾರಿ ಮಾಡುವುದರಿಂದ ರಾಜ್ಯ ಸರ್ಕಾರಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿವೆ ಎಂದು ಈ ಹಿಂದೆ ಆರ್‌ಬಿಐ ಎಚ್ಚರಿಕೆ ನೀಡಿತ್ತು. ಹೀಗಾಗಿ, ಈ ವಿಚಾರದಲ್ಲಿ ಸರ್ಕಾರ ಯಾವ ರೀತಿ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನುವ ಕುತೂಹಲ ಇದೆ.












Click it and Unblock the Notifications