Government employees: ನಿವೃತ್ತಿ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
Government employees: ಪ್ರತಿಯೊಂದು ದೇಶದಲ್ಲಿರುವಂತೆ ನಮ್ಮ ದೇಶದಲ್ಲೂ ಸಹ ಸರ್ಕಾರಿ ಸೇವೆಯಿಂದ ನಿವೃತ್ತರಾದವರಿಗೆ ಅವರಿಗೆ ಪರಿಹಾರವಾಗಿ ಮಾಸಿಕ ಮೊಬಲಗು ಅಥವಾ ಹಿಡಿಗಂಟಾಗಿ ಹಣವನ್ನು ಪಾವತಿ ಮಾಡಲಾಲಾಗುತ್ತಿದೆ. ಇದಕ್ಕಾಗಿಯೇ ಅಯವ್ಯಯದಲ್ಲಿ ಸರ್ಕಾರ ಹಣವನ್ನು ಕಾಯ್ದಿರಿಸುತ್ತದೆ. ಹಾಗಾದರೆ ಈ ವೇತನಕ್ಕೆ ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖೆಲೆಗಳು ಬೇಕಾಗುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ನಿವೃತ್ತಿ ವೇತನವನ್ನು ಮಂಜೂರು ಮಾಡುವ ಸಕ್ಷಮ ಪ್ರಾಧಿಕಾರಿ ಕಚೇರಿ ಮುಖ್ಯಸ್ಥರಾಗಿರುತ್ತಾರೆ. ನಿವೃತ್ತಿ ವೇತನ ಪಡೆಯಲು ಸರ್ಕಾರಿ ನೌಕರ ಉತ್ತಮ ನಡತೆಯನ್ನು ಹೊಂದಿರಬೇಕಾಗುತ್ತದೆ. ನಿವೃತ್ತಿ ವೇತನಕ್ಕೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಇರಬೇಕು. ನಿವೃತ್ತಿ ವೇತನ ಅರ್ಜಿ ಜೊತೆಯಲ್ಲಿ ಇರಬೇಕಾದ ದಾಖಲಾತಿಗಳ ವಿವರವನ್ನು ಇಲ್ಲಿ ನೀಡಲಾಗಿದೆ.

ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು
* ಯಥಾವಿಧಿ ಪೂರ್ತಿ ಆಗಿರುವ ಸೇವಾ ಪುಸ್ತಕ
* ನಮೂನೆ-1
* ಅಶಕ್ತತಾ ಪ್ರಮಾಣಪತ್ರ
* ಸೇವಾ ವಿವರಣೆಗಳ ತಃಖ್ಯೆ ನಮೂನೆ-7
* ಪಿಂಚಣಿ ಲೆಕ್ಕಾಚಾರ ತಃಖ್ಯೆ
* ಸರಾಸರಿ ಉಪಲಬ್ದಗಳ ವಿವರ
* ಕೊನೆಯ ವೇತನ ಪ್ರಮಾಣ ಪತ್ರ
* ಕುಟುಂಬದ ಸದಸ್ಯರ ವಿವರ ತಃಖ್ಯೆ
* ಖಾಯಂ ವಿಳಾಸ
* ಖಜಾನೆ ವಿಳಾಸ
* ಯಾವುದೇ ಉಪದಾನ ಸ್ವೀಕರಿಸಿಲ್ಲದಿರುವ ಬಗ್ಗೆ ಘೋಷಣೆ
* ವಸೂಲಾತಿಗಾಗಿ ಒಪ್ಪಿಗೆ ಪತ್ರ
* ಬೇಬಾಕಿ ಪ್ರಮಾಣ ಪತ್ರ
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ) 10ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ವೊಂದನ್ನು ನೀಡಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಒತ್ತಡ ಕಡಿಮೆ ಮಾಡಲು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಹಾಗಾದರೆ ಆ ನಿರ್ಧಾರ ಏನು ಎನ್ನುವ ಬಗ್ಗೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಒತ್ತಡ ಕಡಿಮೆ ಮಾಡುವ ಉದ್ದಶದಿಂದ ಎರಡು ಹಂತದ ಪಠ್ಯ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮುಂಬರುವ ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಪರೀಕ್ಷೆ ತೆಗೆದುಕೊಳ್ಳಲು ಹೊಸ ಆಯ್ಕೆಯನ್ನು ನೀಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಈ ಹೊಸ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯದ ಆಧಾರದ ಮೇಲೆ ಪರೀಕ್ಷೆಯ ಕಷ್ಟದ ಮಟ್ಟವನ್ನು ಆಯ್ಕೆ ಮಾಡಲು ಸಾಧ್ಯ ಆಗುತ್ತದೆ. ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯದಲ್ಲಿ 2026-27ನೇ ಸಾಲಿನಿಂದ 2 ಹಂತದ ಪಠ್ಯದ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications