Government Employees: ರಾಜ್ಯ ಸರ್ಕಾರಿ ನೌಕರರು ಗಮನಿಸಲೇಬೇಕಾದ ಮಹತ್ವದ ಮಾಹಿತಿ

Government Employees: ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಸರ್ಕಾರವು ಮಹತ್ವದ ಆದೇಶವನ್ನು ಹೊರಡಿಸುತ್ತಲೇ ಇರುತ್ತದೆ. ಹಾಗೆಯೇ ಇದೀಗ ಹೆಚ್‌ಆರ್‌ಎಂಎಸ್‌ 2.0 ತಂತ್ರಾಂಶ ಬಗ್ಗೆ ಮಹತ್ವದ ಸುತ್ತೋಲೆವೊಂದನ್ನು ಹೊರಡಿಸಿದೆ. ಹಾಗಾದ್ರೆ ಇದರಲ್ಲಿ ಏನಿದೆ ಎನ್ನಿವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಹೆಚ್ಆರ್‌ಎಂಎಸ್-2.0 ತಂತ್ರಾಂಶವು ಅಭಿವೃದ್ಧಿಯ ಹಂತದಲ್ಲಿದ್ದು, ಸರ್ಕಾರಿ ನೌಕರರಿಗೆ ಸಂಬಂಧಿಸಿದ ಮಾಹಿತಿಯನ್ನು ನವೀಕರಿಸಿ ಈ ಪ್ರಕ್ರಿಯೆಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸುವ ಬಗ್ಗೆ ಕೆಲವು ಮಾಹಿತಿಗಳನ್ನು ಕೋರಿ ಸರ್ಕಾರ ಸುತ್ತೋಲೆ ಹೊರಡಿಸಿದೆ.

Government Employees Important information on HRMS-2 0 software in state

ಆದೇಶದಲ್ಲಿದೆ ಏನಿದೆ?: ಹೆಚ್ಆರ್‌ಎಂಎಸ್- 2.0 ಯೋಜನೆಯು ಅಭಿವೃದ್ಧಿ ಹಂತದಲ್ಲಿದ್ದು, ಈಗಾಗಲೇ ವೇತನ ಮಾದರಿಯನ್ನು 21 ಇಲಾಖೆಗಳಿಗೆ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಹೆಚ್ಆರ್‌ಎಂಎಸ್ -2.0 ವೇತನ ಮಾಡ್ಯುಲ್ ಮೂಲಕವೇ ಪ್ರಾಯೋಗಿಕವಾಗಿ ಆಯ್ಕೆ ಮಾಡಲಾದ ಈ 21 ಇಲಾಖೆಗಳ ಸರ್ಕಾರಿ ನೌಕರರಿಗೆ ವೇತನವನ್ನು ವಿಸ್ತರಣೆ ಮಾಡಲಾಗುತ್ತಿದೆ.

ಅಲ್ಲದೆ, ಹೆಚ್ಆರ್‌ಎಂಎಸ್-2.0ನ ಯೋಜನೆಯ ತಂತ್ರಾಂಶದಲ್ಲಿ 36 ಮಾಡ್ಯುಲ್‌ಗಳು ಅಭಿವೃದ್ಧಿ ಹಂತದಲ್ಲಿವೆ ಹಾಗೂ ಈ ಯೋಜನೆಯನ್ನು ಯಶಸ್ವಿಗೊಳಿಸಲು ಈ 36 ಮಾಡ್ಯುಲ್‌ಗಳು ಒಂದಕ್ಕೊಂದು ಸಮಕ್ಷಮ ಹೊಂದಾಣಿಕೆಯಿಂದ ನಡೆಸಲೇಬೇಕಾಗಿದೆ. ಆದ್ದರಿಂದ ಮಹತ್ವದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಆಧಾರ್ ಜೋಡಣೆ: ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (ಸರ್ಕಾರಿ ನೌಕರರ ಕುಟುಂಬ ಅವಲಂಬಿತ ಸದಸ್ಯರನ್ನು ಒಳಗೊಂಡಂತೆ), ಕರ್ನಾಟಕ ಹಾಜರಾತಿ ನಿರ್ವಹಣೆ ವ್ಯವಸ್ಥೆಯ ತಂತ್ರಾಂಶಗಳು ಅಭಿವೃದ್ಧಿಯ ಹಂತದಲ್ಲಿವೆ. ಸರ್ಕಾರಿ ನೌಕರರಿಗಾಗಿ ಪ್ರಸ್ತುತ ಚಾಲ್ತಿಯಲ್ಲಿ ಇರುವ ಹಾಗೂ ಮುಂಬರುವ ವಿವಿಧ ಯೋಜನೆಗಳನ್ನು ಪೂರ್ಣ ಪ್ರಮಾಣದಲ್ಲಿ ದಾರಿಗೊಳಿಸಿ ಉಪಯೋಗಿಸಿಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ.

ರಾಜ್ಯದ ಎಲ್ಲಾ ಸರ್ಕಾರಿ ನೌಕರರ ರೆ.ಜಿ.ಐ.ಡಿ ಮತ್ತು ಆಧಾರ್ ಜೋಡಣೆ https://hrms.kamataka.gov.in 3 d DDO 3 LOGIN A SERVICE REGISTER >>> FAMILY DEPENDENT ENTRY FORM-KASS OPTION CLICK ಮಾಡಿ ಸರ್ಕಾರಿ ನೌಕರರ ಕೆ.ಜಿ.ಐ.ಡಿಯೊಂದಿಗೆ ಆಧಾರ್ ಜೋಡಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ಇದುವರೆಗೆ ಜೋಡಣೆ ಆಗದೆ ಇರುವ ಸಿಬ್ಬಂದಿಗಳ ಅಧಾರ್ ಜೋಡಣೆ ತುಂಬಾ ಅವಶ್ಯಕ ಆಗಿರುವುದರಿಂದ ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕಯ. ಈ ಬಗ್ಗೆ ಈವರೆಗೂ ಇಲಾಖಾವಾರು ಕೆ.ಜಿ.ಐ.ಡಿಯೊಂದಿಗೆ ಆಧಾರ್ ಜೋಡಣೆಯ ದತ್ತಾಂಶದ ಪ್ರಗತಿಯ ವರದಿಯನ್ನು ಲಗತ್ತಿಸಲಾಗಿದೆ.

ಅಪ್ಡೇಟ್‌ ಮಾಡಬೇಕಾದ ಮಾಹಿತಿ

* ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ/ಆರ್ಥಿಕ ಇಲಾಖೆಯಿಂದ ಸಮ್ಮತಿ ಪಡೆದಿರುವ ನವೀಕೃತ ಮಾಹಿತಿಯನ್ನು ಅಪ್ಡೇಟ್ ಮಾಡುವುದು.

* ಇಲಾಖೆಯ ರಾಜ್ಯಾದ್ಯಂತ/ ದೇಶಾದ್ಯಂತ ಇರುವ ಕಛೇರಿಗಳಲ್ಲಿ ರಾಜ್ಯ ಮಟ್ಟದ, ತಾಲ್ಲೂಕು, ವಲಯ, ವೃತ್ತ, ವಿಭಾಗ ಹಾಗೂ ಇತರೆ ಹಂತಗಳಿರುವ ಇಲಾಖಾ ಕಛೇರಿಗಳ ನಿಖರವಾದ ವಿಳಾಸವನ್ನು ಕ್ರಮಾನುಗತವಾಗಿ ಹೆಚ್ಆರ್‌ಎಂಎಸ್-2.0 ತಂತ್ರಾಂಶದ ORGANOGRAMನಲ್ಲಿ ನವೀಕರಿಸುವುದು.

ಭತ್ಯೆಗಳ ವಿವರ: ಹೆಚ್ಆರ್‌ಎಂಎಸ್‌ 2.0 ತಂತ್ರಾಂಶದಲ್ಲಿ ವಿವಿಧ ಭತ್ಯೆಗಳನ್ನು ಸರ್ಕಾರಿ ನೌಕರರಿಗೆ ಸ್ವಯಂಚಾಲಿತವಾಗಿ ನೀಡುವ ಸಲುವಾಗಿ ಪ್ರತ್ಯೇಕ ಮಾಡ್ಯುಲ್ ರಚಿಸಲಾಗಿದೆ. ಇಲಾಖೆಯ ಹಂತದಲ್ಲಿ ವಿವಿಧ ವೃಂದ/ ಪದನಾಮ/ ಸರ್ಕಾರಿ ನೌಕರರಿಗೆ ಪ್ರತ್ಯೇಕವಾಗಿ ಆರ್ಥಿಕ ಇಲಾಖೆಯು ಹೊರಡಿಸಿರುವ ಆದೇಶಗಳನ್ವಯ ರಾಜ್ಯ ವೇತನ ಆಯೋಗದ ಅನುಷ್ಠಾನದ ಇತ್ತೀಚಿನ ಆದೇಶಗಳು.

ನೀಡಲಾಗುತ್ತಿರುವ /ನೀಡಬಹುದಾದ ವಿವಿಧ ಭತ್ಯೆಗಳನ್ನು ಈ ಆದೇಶಗಳಲ್ಲಿರುವ ಎಲ್ಲಾ ಷರತ್ತುಗಳ ಮತ್ತು ನಿಬಂಧನೆಗಳಿಗೆ ಅನುಗುಣವಾಗಿ ಪರಿಷ್ಕರಿಸದಿದ್ದಲ್ಲಿ ಪ್ರಸ್ತುತ ನೀಡುತ್ತಿರುವ ವಿವಿಧ ಭತ್ಯೆಗಳು ಕಡಿತಗೊಳ್ಳಬಹುದು. ಅದ್ದರಿಂದ, ನಿಖರವಾದ ಭತ್ಯೆಗಳ ಮಾಹಿತಿಯನ್ನು ಆಯಾ ಭತ್ಯೆಗಳಿಗೆ ಸಂಬಂಧಿತ ದರಗಳನ್ನು ಮಾತ್ರ ಹೆಚ್ಆರ್‌ಎಂಎಸ್ -1ರಲ್ಲಿ ನವೀಕರಿಸುವುದು/ನಮೂದಿಸುವುದು. ಹಾಗೂ ಯಾವುದೇ ಭತ್ಯೆ ಇದರ ನಾಮ ಹಾಗೂ ಮೊತ್ತದಲ್ಲಿ ಬದಲಾವಣೆಯನ್ನು ಸೇರಿಸುವ ಅವಶ್ಯವಿದ್ದಲ್ಲಿ ಕೊಡಲೇ, P.M HRMS 2.0ಗೆ ಸೂಕ್ತ ಆದೇಶದೊಡನೆ, ತಮ್ಮ ಕೋರಿಕೆಯನ್ನು ಎಚ್‌ಆರ್‌ಎಂಎಸ್‌ನಲ್ಲಿಸೇರಿಸಲು ಇ-ಮೇಲ್ ಮೂಲಕ ತಿಳಿಸಬೇಕಾಗುತ್ತದೆ.

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರ ವಿವರಗಳಾದ ವರ್ಗಾವಣೆಗೊಂಡ/ ವರ್ಗಾವಣೆಯಾಗಬಹುದಾದ/ ನಿಯೋಜಿಸಲಾದ/ ಬಡ್ತಿ ನೀಡಲಾದ/ಬಡ್ತಿ ನೀಡಲಾಗುವ /ನಿವೃತ್ತಿಹೊಂದಿರುವ / ಸ್ವಯಂ ನಿವೃತ್ತಿ ಹೊಂದಿರುವ/ ನಿವೃತ್ತಿ ಹೊಂದುತ್ತಿರುವ / ಅಮಾನತ್ತುಗೊಳಿಸಲಾದ/ವಜಾಗೊಳಿಸಲಾದ ನೌಕರರ ಜಿ.ಪಿ.ಎಫ್ / ಕೆ.ಜಿ.ಐ.ಡಿ ಪಾಲಿಸಿ ಸಂಖ್ಯೆ ಹಾಗೂ ಆ ಪಾಲಿಸಿಯ ಮಾಸಿಕ ಪ್ರೀಮಿಯಮ್, ಜಿ.ಪಿ.ಎಫ್‌ನ ಮುಂಗಡ ಪಾವತಿಸುವ ಕಂತುಗಳು / ಕೆ.ಜಿ.ಐ.ಡಿ ಪಾಲಿಸಿ ಸಂಖ್ಯೆ ಹಾಗೂ ಆ ಪಾಲಿಸಿಯ ಸಾಲದ ಕಂತುಗಳನ್ನು ಹಾಗೂ ಜಿ.ಪಿ.ಎಫ್ನ ಮುಂಗಡ / ಕೆ.ಜಿ.ಐ.ಡಿ ಸಾಲದ ಪ್ರಾರಂಭ/ ಮುಕ್ತಾಯದ ದಿನಾಂಕಗಳನ್ನು ಕಡ್ಡಾಯವಾಗಿ ಹೆಚ್.ಆರ್.ಎಂ.ಎಸ್ -1ರಲ್ಲಿ ಸರಿಯಾಗಿ ನಮೂದಿಸಿರಬೇಕು.

ಇಲ್ಲದಿದ್ದರೆ ಹೆಚ್.ಆರ್.ಎಂ.ಎಸ್ - 2.0 ತಂತ್ರಾಂಶದಲ್ಲಿ ವೇತನ ಮಾಡ್ಯುಲ್‌ನಿಂದ ನಿಮ್ಮ ಇಲಾಖೆಯ ಡಿ.ಡಿ.ಓಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ವೇತನವನ್ನು ಸೆಳೆಯಲು ಸಾಧ್ಯ ಆಗುವುದಿಲ್ಲ ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+