ಕರ್ನಾಟಕ; ಸರ್ಕಾರಿ ಬಸ್‌ ಸಂಚಾರಕ್ಕೆ ಹೆಚ್ಚಿದ ಬೇಡಿಕೆ

ಬೆಂಗಳೂರು, ಮೇ 27 : ಲಾಕ್ ಡೌನ್ ನಡುವೆಯೇ ಸರ್ಕಾರಿ ಬಸ್‌ಗಳ ಸಂಚಾರಕ್ಕೆ ಕರ್ನಾಟಕದಲ್ಲಿ ಅವಕಾಶ ನೀಡಲಾಗಿದೆ. ಮೇ 19ರಿಂದ ಬುಧವಾರದ ತನಕ 6,63,261 ಜನರು ಸಂಚಾರ ನಡೆಸಿದ್ದಾರೆ.

ಕೆಎಸ್ಆರ್‌ಟಿಸಿ ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಬುಧವಾರ 3415 ಬಸ್‌ಗಳು ಸಂಚಾರ ನಡೆಸಿದ್ದು, 108112 ಪ್ರಯಾಣಿಕರು ಸಂಚಾರ ನಡೆಸಿದರು. ಗುರುವಾರ 3500 ಬಸ್ ಓಡಿಸಲು ತೀರ್ಮಾನಿಸಲಾಗಿದೆ.

ಬೆಂಗಳೂರು ನಗರದಿಂದ ಬುಧವಾರ 824 ಬಸ್ ಸಂಚಾರ ನಡೆಸಿದ್ದು, 12546 ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ಗುರುವಾರ ನಗರದಿಂದ 900 ಬಸ್‌ಗಳನ್ನು ಓಡಿಸಲು ತೀರ್ಮಾನಿಸಲಾಗಿದೆ.

Good Response For Govt Bus Service In Karnataka

ಇದುವರೆಗೂ ಸರ್ಕಾರಿ ಬಸ್‌ನಲ್ಲಿ ಟಿಕೆಟ್ ಬುಕ್ ಮಾಡಿಕೊಂಡು 52,525 ಜನರು ಸಂಚಾರ ನಡೆಸಿದ್ದಾರೆ. ಮೇ 28ರ ಗುರುವಾರ ಸಂಚಾರ ನಡೆಸಲು 3520 ಜನರು ಟಿಕೆಟ್ ಕಾಯ್ದಿರಿಸಿದ್ದಾರೆ.

ಮೇ 19ರಿಂದ ಇದುವರೆಗೂ 21,824 ಬಸ್‌ಗಳು ಸಂಚಾರ ನಡೆಸಿವೆ. ಬೆಂಗಳೂರು ನಗರದಿಂದ 5856 ಬಸ್‌ಗಳು ಸಂಚಾರ ನಡೆಸಿವೆ ಎಂದು ಕೆಎಸ್ಆರ್‌ಟಿಸಿ ಹೇಳಿದೆ.

ಲಾಕ್ ಡೌನ್ ನಿಯಮದ ನಡುವೆಯೇ ಸರ್ಕಾರಿ ಬಸ್ ಸಂಚಾರ ನಡೆಸುತ್ತಿವೆ. ಸಂಜೆ 7 ಗಂಟೆಯ ತನಕ ಬಸ್ ಸಂಚಾರ ನಡೆಸಲಿದೆ. ಅಂದರೆ ಕೊನೆಯ ಬಸ್ ಬೆಂಗಳೂರು ನಗರವನ್ನು 7 ಗಂಟೆಗೆ ಬಿಡಲಿದೆ. ಮುಂದಿನ ಆದೇಶದ ತನಕ ಇದೇ ಸಮಯವನ್ನು ಪಾಲನೆ ಮಾಡಲಾಗುತ್ತದೆ.

ಮೇ 23ರಂದು 84,436, ಮೇ 25ರಂದು 82,127, ಮೇ 26ರಂದು 93,700 ಮತ್ತು ಮೇ 27ರಂದು 108112 ಜನರು ಸರ್ಕಾರಿ ಬಸ್‌ನಲ್ಲಿ ಸಂಚಾರ ನಡೆಸಿದ್ದಾರೆ. ಕರ್ನಾಟಕದಲ್ಲಿ ಲಾಕ್ ಡೌನ್ ನಿಯಮ ಸಡಿಲಿಕೆ ಆಗಿದ್ದರೂ ಭಾನುವಾರ ಕರ್ಫ್ಯೂ ಜಾರಿಯಲ್ಲಿರುತ್ತದೆ. ಅಂದು ಬಸ್ ಸಂಚಾರ ಇರುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+