ಪುನಃ ಸಂಚಾರ ಆರಂಭಿಸಲಿದೆ ಐಷಾರಾಮಿ ಗೋಲ್ಡನ್ ಚಾರಿಯಟ್

ಬೆಂಗಳೂರು, ನವೆಂಬರ್ 18 : ಕರ್ನಾಟಕದ ಹೆಮ್ಮೆಯ ಐಷಾರಾಮಿ ರೈಲು ಗೋಲ್ಡನ್ ಚಾರಿಯಟ್ ಪುನಃ ಸಂಚಾರ ಆರಂಭಿಸಲಿದೆ. ನಷ್ಟದ ಕಾರಣದಿಂದಾಗಿ ಐಷಾರಾಮಿ ರೈಲು ಸಂಚಾರವನ್ನು ಪ್ರಸ್ತುತ ಸ್ಥಗಿತಗೊಳಿಸಲಾಗಿದೆ.

2018ರ ಸೆಪ್ಟೆಂಬರ್‌ನಲ್ಲಿ ಗೋಲ್ಡನ್ ಚಾರಿಯಟ್ ಸಂಚಾರವನ್ನು ಪುನಃ ಆರಂಭಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿತ್ತು. ಕೆಲವೇ ದಿನಗಳಲ್ಲಿ ಹೊಸ ವಿನ್ಯಾಸದಲ್ಲಿ ರೈಲು ಹಳಿಯ ಮೇಲೆ ಓಡಾಡಲಿದೆ. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಈ ಕುರಿತು ಟ್ವೀಟ್ ಮಾಡಿದ್ದಾರೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಗೋಲ್ಡನ್ ಚಾರಿಯಟ್ ರೈಲು ಸೇವೆಯ ಉಸ್ತುವಾರಿ ನೋಡಿಕೊಳ್ಳುತ್ತಿತ್ತು. ಆದರೆ, ನಷ್ಟದ ಕಾರಣದಿಂದಾಗಿ ಕೆಲವು ವರ್ಷಗಳ ಹಿಂದೆ ರೈಲು ಸಂಚಾರವನ್ನು ರದ್ದುಗೊಳಿಸಲಾಗಿತ್ತು.

10 ವರ್ಷಗಳ ಕಾಲ ಕೆಎಸ್‌ಟಿಡಿಸಿ ಗೋಲ್ಡನ್ ಚಾರಿಯಟ್ ರೈಲನ್ನು ಓಡಿಸಿದೆ. ಆದರೆ, ಲಾಭಕ್ಕಿಂತ ನಷ್ಟವೇ ಹೆಚ್ಚಾದಾಗ ರೈಲು ಸೇವೆ ಸ್ಥಗಿತಗೊಳಿಸಲಾಯಿತು. ರೈಲನ್ನು ಲಾಭದ ಹಳಿಗೆ ತರುವ ಎಲ್ಲಾ ಪ್ರಯತ್ನಗಳು ಸಹ ವಿಫಲವಾಗಿದ್ದವು.

ಸುರೇಶ್ ಅಂಗಡಿ ಟ್ವೀಟ್

ಸುರೇಶ್ ಅಂಗಡಿ ಟ್ವೀಟ್

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಗೋಲ್ಡನ್ ಚಾರಿಯಟ್ ರೈಲು ಪುನಃ ಸಂಚಾರ ನಡೆಸುವ ಕುರಿತು ಟ್ವೀಟ್ ಮಾಡಿದ್ದಾರೆ. ರೈಲು ಸೇವೆ ಆರಂಭಿಸಲು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಜೊತೆಗೆ ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಕೈ ಜೋಡಿಸಲಿದೆ. ಎರಡೂ ಸಂಸ್ಥೆಗಳು ಮಂಗಳವಾರ ಒಪ್ಪಂದಕ್ಕೆ ಸಹಿ ಹಾಕಲಿವೆ.

10 ವರ್ಷಗಳ ಕಾಲ ಸಂಚಾರ

10 ವರ್ಷಗಳ ಕಾಲ ಸಂಚಾರ

ಗೋಲ್ಡನ್ ಚಾರಿಯಟ್ 10 ವರ್ಷಗಳ ಕಾಲ ಸಂಚಾರ ನಡೆಸಿದೆ. ಮಲ್ಪೆ ಗ್ರೂಪ್ ಆಫ್ ಹೋಟೆಲ್‌ಗೆ ರೈಲಿನ ಮೂಲ ಸೌಕರ್ಯಗಳನ್ನು ನೋಡಿಕೊಳ್ಳುವ ಟೆಂಡರ್‌ ನೀಡಲಾಗಿತ್ತು. ಇದು 2018ರ ಸೆಪ್ಟೆಂಬರ್‌ನಲ್ಲಿ ಅಂತ್ಯಗೊಂಡಿತ್ತು. ಬಳಿಕ ರೈಲು ಸಂಚಾರ ಸ್ಥಗಿತಗೊಂಡಿತ್ತು.

ಹೊಸ ವಿನ್ಯಾಸದೊಂದಿಗೆ ಸಂಚಾರ

ಹೊಸ ವಿನ್ಯಾಸದೊಂದಿಗೆ ಸಂಚಾರ

ಗೋಲ್ಡನ್ ಚಾರಿಯಟ್ ವಿನ್ಯಾಸದಲ್ಲಿ ಬದಲಾವಣೆಗಳನ್ನು ಮಾಡಿ ಸಂಚಾರವನ್ನು ಆರಂಭಿಸಲಾಗುತ್ತದೆ. ಆದರೆ, ರೈಲಿನಲ್ಲಿರುವ ಯಾವುದೇ ಐಷಾರಾಮಿ ಸೇವೆಗಳನ್ನು ಸ್ಥಗಿತ ಮಾಡುವುದಿಲ್ಲ. ಬಾರ್, ಹೋಟೆಲ್, ಜಿಮ್, ಸ್ಪಾ ಸೇವೆ ಎಂದಿನಂತೆ ಇರುತ್ತದೆ.

18 ಬೋಗಿಗಳ ರೈಲು

18 ಬೋಗಿಗಳ ರೈಲು

18 ಬೋಗಿಗಳ ಐಷಾರಾಮಿ ರೈಲಿನಿಂದಾಗಿ ರಾಜ್ಯ ಸರ್ಕಾರಕ್ಕೆ 10 ವರ್ಷದಲ್ಲಿ 40 ಕೋಟಿ ನಷ್ಟ ಉಂಟಾಗಿತ್ತು. ಆದ್ದರಿಂದ, ರೈಲು ಸೇವೆ ಸ್ಥಗಿತಗೊಂಡಿತ್ತು. ಈಗ ಐಆರ್‌ಸಿಟಿಸಿ ನೆರವಿನಿಂದ ಪುನಃ ಸೇವೆಯನ್ನು ಆರಂಭಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+