Get Updates
Get notified of breaking news, exclusive insights, and must-see stories!

ರನ್ಯಾ ರಾವ್‌ ಸಂಪರ್ಕದಲ್ಲಿರೋ ಸಚಿವರ ಹೆಸರನ್ನ ಸದನದಲ್ಲೇ ಹೇಳುವೆ: ಯತ್ನಾಳ್‌ ಹೊಸ ಬಾಂಬ್‌

ಸ್ಯಾಂಡಲ್‌ವುಡ್‌ ನಟಿ ರನ್ಯಾ ರಾವ್‌ ಅವರ ಅಕ್ರಮ ಚಿನ್ನ ಸಾಗಾಟ ಕೇಸ್‌ ರಾಜಕೀಯ ತಿರುವು ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ಸಚಿವರ ಹೆಸರು ಕೂಡ ತಳುಕು ಹಾಕಿಕೊಂಡಿದ್ದು, ಅವರ ಹೆಸರು ಬಹಿರಂಗವಾಗಿರಲಿಲ್ಲ. ಈ ವಿಚಾರವಾಗಿ ಕಾಂಗ್ರೆಸ್‌ ಈ ಬಗ್ಗೆ ಹೊಸ ಬಾಂಬ್‌ ಸಿಡಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ರನ್ಯಾ ರಾವ್‌ ಜೊತೆ ನಂಟು ಹೊಂದಿರುವ ಸಚಿವರು ಯಾರೆಂದು ಗೊತ್ತಿದೆ ಎಂದು ಹೊಸ ಬಾಂಬ್‌ ಸಿಡಿಸಿದ್ದಾರೆ.

ರನ್ಯಾ ರಾವ್‌ ಕೇಸ್‌ನಲ್ಲಿ ಯಾರು ತಪ್ಪು ಮಾಡಿದ್ದರೂ ತಪ್ಪೇ. ಇಲ್ಲಿ ಕಸ್ಟಮ್ಸ್ ಆಧಿಕಾರಿಗಳು ತಪ್ಪು ಮಾಡಿದ್ದರೆ ನಾವು ಬಿಜೆಪಿಯವರು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಕೇಂದ್ರದ ಅಧಿಕಾರಿಗಳ ತಪ್ಪಿದ್ದರೆ ಅದು ಕೂಡ ತಪ್ಪು ಎಂದು ಯತ್ನಾಳ್‌ ಹೇಳಿದ್ದಾರೆ. ಈ ಕೇಸ್‌ ಬಗ್ಗೆ ಸೋಮವಾರ ನಡೆಯುವ ಸದನದಲ್ಲಿ ಸುಧೀರ್ಘವಾಗಿ ಮಾರನಾಡುತ್ತೇನೆ. ರನ್ಯಾ ರಾವ್‌ ಜೊತೆ ಯಾವ ಸಚಿವರು ಸಂಪರ್ಕದಲ್ಲಿದ್ದರು ಎಂಬುದು ಗೊತ್ತಿದೆ. ಈ ಬಗ್ಗೆ ಮಾಧ್ಯಮಗಳ ಮುಂದೆ ನಾನು ಮಾತನಾಡುವುದಿಲ್ಲ. ಆದರೆ, ಸದನದಲ್ಲೇ ಈ ಬಗ್ಗೆ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದು ಯತ್ನಾಳ್‌ ಹೇಳಿರುವುದು ಸಂಚಲನ ಸೃಷ್ಟಿಸಿದೆ.

Gold Smuggling Case BJP Basanagouda Patil Threatens To Reveal Names Of Ministers Linked To Ranya Rao

ರನ್ಯಾ ರಾವ್‌ ಜೊತೆಗೆ ಸಂಪರ್ಕವಿರುವ ಇಬ್ಬರು ಸಚಿವರ ಹೆಸರು ನಮಗೆ ಗೊತ್ತಿದೆ. ಆ ಹೆಸರುಗಳನ್ನು ಸದನದಲ್ಲೇ ಹೇಳುವೆ. ಈಗ ಅದರ ಬಗ್ಗೆ ಮಾಧ್ಯಮಗಳ ಮುಂದೆ ಹೇಳಲ್ಲ. ಏಕೆಂದರೆ, ಇದು ಸದನದ ರಹಸ್ಯ ಎಂದೂ ಯತ್ನಾಳ್‌ ಹೇಳಿದ್ದಾರೆ. ರನ್ಯಾ ರಾವ್‌ಗೆ ಪ್ರೋಟೋಕಾಲ್‌ ಕೊಟ್ಟಿದ್ದು ಯಾರು ಎಂಬ ಮಾಹಿತಿಯನ್ನು ನಾವು ಈಗಾಗಲೇ ಸಂಗ್ರಹಿಸಿದ್ದೇವೆ. ಆ ಚಿನ್ನವನ್ನು ಎಲ್ಲಿಂದ ತಂದರು? ಎಲ್ಲಿಟ್ಟಿದ್ದರು ಎಂಬುದೂ ನಮಗೆ ಗೊತ್ತಿದೆ. ಈ ಎಲ್ಲ ಮಾಹಿತಿ ಕಲೆಕ್ಟ್‌ ಮಾಡಿದ್ದೇವೆ ಎಂದು ಯತ್ನಾಳ್‌ ಬಾಂಬ್‌ ಸಿಡಿಸಿದ್ದಾರೆ.

ಆಕೆಗೆ ಕೆಐಎಡಿಬಿಯಿಂದ 12 ಎಕರೆ ಜಮೀನು ಕೊಟ್ಟಿದ್ದನ್ನು ಸ್ವತಃ ಮುರುಗೇಶ್ ನಿರಾಣಿ ಅವರೇ ಒಪ್ಪಿಕೊಂಡಿದ್ದಾರೆ. 12 ಏಕರೆ ಜಮೀನು ಕೊಟ್ಟಿದ್ದು ಆದರೆ ಹಣ ಪಾವತಿಯಾಗದಿದ್ದಕ್ಕೆ ರದ್ದಾಗಿದೆ. 12 ಏಕರೆ ಜಮೀನಿಗೆ ಯಾರೋ ಹಣ ಕೊಡುತ್ತೇನೆ ಎಂದಿದ್ದರು. ಅವರು ಕೊಟ್ಟಿಲ್ಲ. ಈ ಕಾರಣದಿಂದಲೇ ಜಮೀನು ಹಂಚಿಕೆ ರದ್ದಾಗಿದೆ ಎಂದೂ ಯತ್ನಾಳ್‌ ಹೇಳಿದ್ದಾರೆ. ಈ ಹಿಂದೆಯೂ ಈ ಕೇಸ್‌ನಲ್ಲಿ ಇಬ್ಬರು ರಾಜಕಾರಣಿಗಳ ಪಾತ್ರವಿದೆ ಎಂದು ಹೇಳಲಾಗಿತ್ತು. ಇಬ್ಬರು ಸಚಿವರೊಂದಿಗೆ ರನ್ಯಾ ರಾವ್‌ ನಂಟು ಹೊಂದಿದ್ದಾರೆ ಎಂದು ವಿಚಾರಣೆ ವೇಳೆ ಗೊತ್ತಾಗಿತ್ತು. ಈಗ ಯತ್ನಾಳ್‌ ಅವರೇ ಈ ಹೆಸರನ್ನು ಬಹಿರಂಗಪಡಿಸುವುದಾಗಿ ಹೇಳಿದ್ದಾರೆ. ಹಾಗಾಗಿ ಸೋಮವಾದ ಸದನದಲ್ಲಿ ಮಹತ್ವದ ಬೆಳವಣಿಗೆ ನಡೆಯಲಿದೆ.

Gold Smuggling Case BJP Basanagouda Patil Threatens To Reveal Names Of Ministers Linked To Ranya Rao

ಕೇಂದ್ರ ಸಚಿವರು ಭಾಗಿಯಾಗಿದ್ದಾರೆ:

ರಾಜಕೀಯ ತಿರುವು ಪಡೆದುಕೊಂಡಿರುವ ರನ್ಯಾ ರಾವ್‌ ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ ಬಿಜೆಪಿ-ಕಾಂಗ್ರೆಸ್‌ ನಡುವೆ ವಾಗ್ವಾದಕ್ಕೂ ಕಾರಣವಾಗಿದೆ. ಯತ್ನಾಳ್‌ ಅವರು ಈ ಕೇಸ್‌ ಜೊತೆ ನಂಟು ಹೊಂದಿರುವ ಇಬ್ಬರು ಸಚಿವರ ಹೆಸರನ್ನು ಬಹಿರಂಗಪಡಿಸುವುದಾಗಿ ಹೇಳಿದ್ದರೆ, ಇತ್ತ ಕಾಂಗ್ರೆಸ್‌ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಕೂಡ ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ. ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ರಾಜ್ಯದ ಇಬ್ಬರು ಸಚಿವರು ಭಾಗಿಯಾಗಿದ್ದಾರೆ ಎಂಬುದು ಸುಳ್ಳು. ನನ್ನ ಪ್ರಕಾರ ಈ ಕೇಸ್‌ನಲ್ಲಿ ಕೇಂದ್ರ ಸಚಿವರು ಭಾಗಿಯಾಗಿರಬಹುದು ಎಂದು ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಕೂಡ ಹೊಸ ಟ್ವಿಸ್ಟ್‌ ನೀಡಿದ್ದಾರೆ.

ಈ ಕೇಸ್‌ನಲ್ಲಿ ರಾಜ್ಯದ ಸಚಿವರ ಪಾತ್ರ ಇರಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. ಏಕೆಂದರೆ ವಿಮಾನ ನಿಲ್ದಾಣಗಳು ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತವೆ. ವಿಮಾನ ನಿಲ್ದಾಣಗಳಲ್ಲಿ ಶಿಷ್ಟಾಚಾರದ ಜವಾಬ್ದಾರಿ ಕೇಂದ್ರ ಸರ್ಕಾರದ್ದು. ಹೀಗಾಗಿ ನಮ್ಮ ಕಾಂಗ್ರೆಸ್‌ ಸರ್ಕಾರದ ಯಾವುದೇ ಸಚಿವರು ಭಾಗಿಯಾಗಿರುವ ಸಾಧ್ಯತೆ ಇಲ್ಲವೇ ಇಲ್ಲ. ಇದರಲ್ಲಿ ಕೇಂದ್ರ ಸಚಿವರ ಪಾತ್ರವೂ ಇರಬಹುದು. ತಪ್ಪು ಅಂದಾಜಿನಲ್ಲಿ ರಾಜ್ಯದ ಸಚಿವರು ಎಂದು ಹೇಳಿರಬಹುದು ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.

Gold Smuggling Case BJP Basanagouda Patil Threatens To Reveal Names Of Ministers Linked To Ranya Rao

ಅಧಿಕಾರಿಗಳು ಹಿಂಸೆ ಕೊಟ್ಟರು: ರನ್ಯಾ ರಾವ್‌

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ ಆರೋಪಿ ನಟಿ ರನ್ಯಾ ರಾವ್‌ ಅವರು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಹೆಚ್ಚುವರಿ ಮಹಾನಿರ್ದೇಶಕರಿಗೆ ಜೈಲಿನಿಂದಲೇ ಪತ್ರ ಬರೆದಿದ್ದಾರೆ. ತನಿಖಾಧಿಕಾರಿಗಳು ನನ್ನ ಮೇಲೆ ದುರ್ವರ್ತನೆ ತೋರಿದ್ದು, ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ರನ್ಯಾ ಆರೋಪಿಸಿದ್ದಾರೆ. ನಾನು ನಿರಪರಾಧಿ, ಆದರೆ ಈ ಕೇಸ್‌ನಲ್ಲಿ ತನಿಖಾಧಿಕಾರಿಗಳಿಂದ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ.

ಈ ಕೇಸ್‌ನಲ್ಲಿ ನನ್ನ ಬಂಧಿಸಿದ ನಂತರ ಅಧಿಕಾರಿಗಳು ಹಲವು ಬಾರಿ ನನ್ನ ಕಪಾಳಕ್ಕೆ ಹೊಡೆದಿದ್ದಾರೆ. ಚಿನ್ನ ಕಳ್ಳಸಾಗಣೆ ಸಂಬಂಧ 40 ಪುಟಗಳಿಗೂ ಮೀರಿದ ಒಪ್ಪಿಗೆ ಪತ್ರಕ್ಕೆ ಸಹಿ ಹಾಕುವಂತೆ ಒತ್ತಡ ಹಾಕುತ್ತಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಿಂದಲೇ ರನ್ಯಾ ರಾವ್ ಈ ಪತ್ರ ಬರೆದಿದ್ದಾರೆ. ನ್ಯಾಯಾಂಗ ಬಂಧನದಲ್ಲಿರುವ ರನ್ಯಾ ಜೈಲಾಧಿಕಾರಿಗಳ ಮೂಲಕ ಈ ಪತ್ರ ಸಲ್ಲಿಸಿದ್ದಾರೆ. ನಾನು ದುಬೈನಿಂದ ಬಂದಾಗ ಅಧಿಕಾರಿಗಳು ಯಾವುದೇ ಸಾಕ್ಷಿಗಳಿಲ್ಲದೆ ನನ್ನನ್ನು ಈ ಕೇಸ್‌ನಲ್ಲಿ ಸಿಲುಕಿಸಿದ್ದಾರೆ. ನನ್ನ ಬಂಧನ ಅಕ್ರಮವಾಗಿ ಮಾಡಿದ್ದಾರೆ. ಅಧಿಕಾರಿಗಳು ನನ್ನನ್ನು ಬಂಧಿಸುವ ಮುನ್ನ ಯಾವುದೇ ಸತ್ಯಾಸತ್ಯತೆ ಪರಿಶೀಲಿಸಿಲ್ಲ. ಬಂಧಿಸಿದ ನಂತರ ನನ್ನೊಂದಿಗೆ ಕ್ರೂರವಾಗಿ ನಡೆದುಕೊಂಡಿದ್ದಾರೆ ಎಂದು ಪತ್ರದಲ್ಲಿ ದೂರು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಸರ್ಕಾರಿ ವಾಹನದಲ್ಲೇ ಚಿನ್ನ ಸಾಗಾಟ: ದುಬೈನಿಂದ ಅಕ್ರಮವಾಗಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚಿನ್ನ ತರುತ್ತಿದ್ದ ರನ್ಯಾ, ಸರ್ಕಾರಿ ವಾಹನದಲ್ಲೇ ಅದನ್ನು ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ. ಏರ್‌ಪೋರ್ಟ್‌ ಪ್ರೋಟೋಕಾಲ್‌ ಸಿಬ್ಬಂದಿ ನೆರವು ಪಡೆದು ಸುಲಭವಾಗಿ ಚಿನ್ನ ತಂದು ಅದನ್ನು ಸರ್ಕಾರದ ವಾಹನದಲ್ಲೇ ಸಾಗಾಟ ಮಾಡುತ್ತಿದ್ದರು. ಪೊಲೀಸರಿಗೆ ಹೆಚ್ಚುವರಿ ಕಾರುಗಳನ್ನು ಸರ್ಕಾರದಿಂದಲೇ ನೀಡಿದಂತೆ ರನ್ಯಾ ಅವರ ತಂದೆ ಡಿಜಿಪಿ ರಾಮಚಂದ್ರ ರಾವ್‌ ಅವರಿಗೂ ಹೆಚ್ಚುವರಿ ಸರ್ಕಾರಿ ವಾಹನ ವಿತರಿಸಲಾಗಿತ್ತು. ಇದೇ ಸರ್ಕಾರಿ ವಾಹನದಲ್ಲೇ ರನ್ಯಾ ಚಿನ್ನ ಸಾಗಿಸುತ್ತಿದ್ದರು. ಏರ್‌ಪೋರ್ಟ್‌ಗೆ ಇದೇ ವಾಹನದಲ್ಲಿ ಸಂಚರಿಸುತ್ತಿದ್ದರು ಎಂದೂ ಹೇಳಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+