ಮತ್ತಷ್ಟು ಕೊರೊನಾ ಸೋಂಕು ಪತ್ತೆ: ರಾಜ್ಯ ಬಂದ್ ವಿಸ್ತರಣೆ?
ಬೆಂಗಳೂರು, ಮಾರ್ಚ್ 18: ರಾಜ್ಯದಲ್ಲಿ ಮತ್ತಷ್ಟು ಕೊರೊನಾ ಸೋಂಕು ಪತ್ತೆಯಾಗಿದ್ದು ರಾಜ್ಯ ಬಂದ್ ವಿಸ್ತರಣೆ ಮಾಡುವ ಸಾಧ್ಯತೆ ಇದೆ.
Recommended Video
ರಾಜ್ಯದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಾಗದಂತೆ ನಿಯಂತ್ರಿಸಲು ಮಾರ್ಚ್ 14ರಿಂದ ಒಂದು ವಾರದ ಮಟ್ಟಿಗೆ ರಾಜ್ಯಾದ್ಯಂತ ಜನದಟ್ಟಣೆ ಉಂಟು ಮಾಡುವ ಭಾಗಶಃ ಸೇವೆಗಳನ್ನು ಬಂದ್ ಮಾಡಲಾಗಿತ್ತು.
ಇದೀಗ ಸರ್ಕಾರ' ಕೊರೊನಾ ಬಂದ್' ವಿಸ್ತರಿಸುವ ಸಾಧ್ಯತೆ ಕಂಡು ಬಂದಿದೆ.ಪ್ರಸ್ತುತ ಸೋಂಕು ನಿಯಂತ್ರಣಕ್ಕೆ ಬಾರದೆ ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಂದ್ ಗಡುವು ವಿಸ್ತರಿಸುವ ಸಾಧ್ಯತೆ ಹೆಚ್ಚಿದೆ.

ಈ ಕುರಿತು ಸಚಿವ ಶ್ರೀರಾಮುಲು ಕೂಡ ಮಾತನಾಡಿದ್ದು, ಸೋಂಕು ಹೆಚ್ಚು ಮಂದಿಗೆ ವ್ಯಾಪಿಸದಂತೆ ನಿಯಂತ್ರಣಕ್ಕಾಗಿ ಬಂದ್ ನಿರ್ಧಾರ ತೆಗೆದುಕೊಳ್ಳಲಾಗಿತ್ತು . ರಾಜ್ಯದ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಹೆಚ್ಚು ಜನರು ಸೇರುವ ಮಾಲ್, ಮಲ್ಟಿಪ್ಲೆಕ್ಸ್ ಗಳನ್ನು ಮುಚ್ಚಲಾಗಿತ್ತು. ಇದರ ಹೊರತಾಗಿಯೂ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ ಎಂದು ಹೇಳಿದ್ದಾರೆ.
ಬಂದ್ ಕ್ರಮಗಳಿಂದಾಗಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿರುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸದ್ಯದಲ್ಲೇ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಈ ವೇಳೆ ಬಂದ್ ಅವಧಿ ಮುಂದುವರೆಸಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುತ್ತಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications