ಇನ್ನು ಮುಂದೆ ಪೊಲೀಸ್ ಪೇದೆ ಎನ್ನುವಂತಿಲ್ಲ, ಬರೆಯುವಂತಿಲ್ಲ

ಬೆಂಗಳೂರು, ಮೇ 24 : ಕರ್ನಾಟಕ ಪೊಲೀಸ್ ಇಲಾಖೆ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಇಲಾಖೆಯ ಶ್ರೇಣಿವಾರು ಹುದ್ದೆಯ ಹೆಸರಿನಲ್ಲಿ ಬದಲಾವಣೆ ಮಾಡಲಾಗಿದೆ. ಇನ್ನು ಮುಂದೆ 'ಪೊಲೀಸ್ ಪೇದೆ' ಅನ್ನುವಂತಿಲ್ಲ.

Recommended Video

      ಮೋದಿ ಹಾಗು ಯಡಿಯೂರಪ್ಪನವರಿಗೆ ಧನ್ಯವಾದ ತಿಳಿಸಿದ ಕನ್ನಡದ ಕಾರ್ಮಿಕರು | Daily wage Workers | Karnataka

      ಹೌದು, ಕರ್ನಾಟಕ ಪೊಲೀಸ್ ಇಲಾಖೆಯ ಹೊಸ ಆದೇಶದ ಪ್ರಕಾರ ಇನ್ನು ಮುಂದೆ ಪೇದೆ, ಮುಖ್ಯ ಪೇದೆ ಎಂದು ಕರೆಯುವಂತಿಲ್ಲ, ಬರೆಯುವಂತೆಯೂ ಇಲ್ಲ. ಜನರ ಜೊತೆ ನೇರವಾಗಿ ಸಂಪರ್ಕದಲ್ಲಿರುವ ಏನಾದರೂ ಆದಾಗ ತಕ್ಷಣ ಓಡೋಡಿ ಬರುವವರಿಗೆ ಈ ಮೂಲಕ ಇಲಾಖೆ ಗೌರವ ನೀಡಿದೆ.

      ಇನ್ನು ಮುಂದೆ ಪೇದೆಗಳನ್ನು ಕಾನ್ಸ್‌ಟೇಬಲ್, ಮುಖ್ಯ ಪೇದೆಯನ್ನು ಹೆಡ್ ಕಾನ್ಸ್‌ಟೇಬಲ್ ಎಂದು ಕರೆಯಬೇಕು. ಬರವಣಿಗೆಯಲ್ಲಿಯೂ ಸಹ ಇದೇ ಪದಗಳನ್ನು ಬಳಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

       From Now Call And Write Police Constable Not Pede

      ಆದೇಶವೇನು? : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಕಾನ್ಸ್‌ಟೇಬಲ್, ಹೆಡ್ ಕಾನ್ಸ್‌ಟೇಬಲ್‌ಗಳನ್ನು ಸಾಮಾನ್ಯವಾಗಿ ಪೊಲೀಸ್ ಪೇದೆ, ಮುಖ್ಯ ಪೇದೆ ಎಂದು ಕರೆಯಲಾಗುತ್ತದೆ. ಆದರೆ, ಪೇದೆ ಎಂಬ ಪದದ ಉಪಯೋಗ ಅಷ್ಟು ಸಮಂಜಸವಾಗಿರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

      ಆದ್ದರಿಂದ, ಇನ್ನು ಮುಂದೆ ಬರವಣಿಗೆಯಲ್ಲಿ, ಮಾತಿನಲ್ಲಿ ಪೊಲೀಸ್ ಪೇದೆ, ಮುಖ್ಯ ಪೇದೆ ಎಂಬ ಪದಗಳನ್ನು ಬಳಸದೇ 'ಪೊಲೀಸ್ ಕಾನ್ಸ್‌ಟೇಬಲ್', 'ಹೆಡ್ ಕಾನ್ಸ್‌ಟೇಬಲ್' ಎಂಬ ಪದಗಳನ್ನು ಬಳಸುವಂತೆ ಆದೇಶಿಸಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+