Mantralaya: ಮಂತ್ರಾಲಯಕ್ಕೆ ಹೋಗುವ ಭಕ್ತಾದಿಗಳಿಗೆ ಶಾಕಿಂಗ್ ನ್ಯೂಸ್
ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗುರುರಾಯರ ಸನ್ನಿಧಿ ಮಂತ್ರಾಲಯದಲ್ಲಿ ಭಕ್ತರನ್ನು ಯಾಮಾರಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಮಂತ್ರಾಲಯದಲ್ಲಿ ವಂಚಕರ ಜಾಲವೊಂದು ಸಕ್ರಿಯವಾಗಿದ್ದು, ರಾಯರ ಸನ್ನಿಧಿ ಹೆಸರಿನಲ್ಲಿ ಭಕ್ತರಿಗೆ ಮೋಸ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ದೇವಸ್ಥಾನದ ಹೆಸರಿನಲ್ಲಿ ಭಕ್ತರ ದಿಕ್ಕು ತಪ್ಪಿಸಿ ವಂಚನೆ ಮಾಡುತ್ತಿರುವ ಬಗ್ಗೆ ಖುದ್ದು ಮಂತ್ರಾಲಯ ರಾಯರ ಮಠದ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ.
ಹೌದು ಮಂತ್ರಾಲಯದ ಸನ್ನಿಧಿಗೆ ಬರುವ ಭಕ್ತಾದಿಗಳಿಗೆ ಮುಂಗಡವಾಗಿ ರೂಂಗಳನ್ನು ಬುಕಿಂಗ್ ಮಾಡುವಾಗ ಬಹಳ ಎಚ್ಚರ ವಹಿಸಿ ಎಂದು ತಿಳಿಸಿದೆ. ಮಂತ್ರಾಲಯದಲ್ಲಿ ರೂಂ ಬುಕ್ಕಿಂಗ್, ಪ್ರಸಾದ ಸೇರಿದಂತೆ ವಿವಿಧ ಸೇವೆಗಳ ಹೆಸರಿನಲ್ಲಿ ವಂಚಕರು ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವುದು ತಿಳಿದುಬಂದಿದೆ. ಭಕ್ತರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದೆ.

ರಾಘವೇಂದ್ರ ಸ್ವಾಮಿ ಮಠದ ಹೆಸರಿನಲ್ಲಿ ವಂಚಕರ ಜಾಲವೊಂದು ಭಕ್ತರಿಗೆ ವಂಚನೆ ಮಾಡುತ್ತಿದೆ. ನಕಲಿ ಯುಪಿಐ ಐಡಿಗಳ ಮೂಲಕ ಭಕ್ತರಿಂದ ಹಣ ಹಾಕಿಸಿಕೊಂಡು ವಂಚನೆ ಮಾಡುತ್ತಿದ್ದಾರೆ. ಈ ಜಾಲಕ್ಕೆ ಸಿಲುಕಿ ಹಲವರು ಹಣ ಕಳೆದುಕೊಳ್ಳುತ್ತಿದ್ದಾರೆ ಎಂಬ ದೂರು ಕೇಳಿಬಂದಿದೆ. ಈ ಹಿನ್ನೆಲೆ ಮಂತ್ರಾಲಯದ ಆಡಳಿತ ಮಂಡಳಿಯೇ ಈ ಬಗ್ಗೆ ಜನಜಾಗೃತಿ ಸಂದೇಶ ರವಾನಿಸಿದೆ.
ರಾಯರ ಮಠದ ಹೆಸರಿನಲ್ಲಿ ಭಕ್ತರಿಗೆ ಕರೆ ಮಾಡುವ ವಂಚಕರು ಇಲ್ಲಿನ ಸೇವೆಗಳನ್ನು ಒದಗಿಸಲು ಮುಂಗಡ ಪಾವತಿ ಮಾಡಿಸಿಕೊಳ್ಳುತ್ತೇವೆ ಎಂದು ವಂಚಿಸುತ್ತಿದ್ದಾರೆ. ರಾಯರ ಮೇಲಿನ ಭಕ್ತಿಯಿಂದ ಜನರು ಮೋಸ ಹೋಗುತ್ತಿದ್ದಾರೆ. ವಂಚಕರ ಜಾಲಕ್ಕೆ ಸಿಲುಕಿ ಭಕ್ತರು ಮೋಸ ಹೋಗುತ್ತಿದ್ದಾರೆ. ಮಠದ ಹೆಸರಿನಲ್ಲಿ ನಕಲಿ ಯುಪಿಐ ಐಡಿಗಳಿಗೆ ಹಣ ಹಾಕಿಸಿಕೊಂಡು ವಂಚಿಸುತ್ತಿದ್ದಾರೆ ಎಂದು ಆಡಳಿತ ಮಂಡಳಿ ಹೇಳಿದೆ.
ನಿಮಗೂ ವಂಚಕರಿಂದ ಫೋನ್ ಕಾಲ್, ಪೋಸ್ಟ್ ಅಥವಾ ಯಾವುದೇ ಮೆಸೇಜ್‌ಗಳು ಬಂದರೆ, ದಯವಿಟ್ಟು ಯಾಮಾರಬೇಡಿ. ವಂಚಕರನ್ನು ನಂಬಿ ಹಣ ಹಾಕಬೇಡಿ ಎಂದು ರಾಯರ ಮಠ ತಿಳಿಸಿದೆ. ಒಂದು ವೇಳೆ ನಿಮಗೆ ಈ ರೀತಿಯ ವಂಚನೆ ಕರೆ ಅಥವಾ ಮೆಸೇಜ್ ಬಂದರೆ ನೇರವಾಗಿ ಪೊಲೀಸರಿಗೆ ದೂರು ನೀಡಿ. ಅಲ್ಲದೆ ಮಂತ್ರಾಲಯಕ್ಕೆ ಬರುವವರು ಮಠದ ಅಧಿಕೃತ ವೆಬ್‌ಸೈಟ್‌ನಿಂದಲೇ ರೂಂಗಳನ್ನು ಬುಕ್ ಮಾಡಿರಿ. ವಂಚಕರ ಮಾತಿಗೆ ಮರುಳಾಗಿ ಮೊದಲೇ ರೂಂ ಬುಕಿಂಗ್ ಹೆಸರಲ್ಲಿ ಹಣ ಕಳೆದುಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದೆ.

ಮಂತ್ರಾಲಯಕ್ಕೆ ಪ್ರತಿದಿನವೂ ಸಾವಿರಾರು ಭಕ್ತರು ಭೇಟಿ ನೀಡುವುದರಿಂದ ಹಲವರು ಅಲ್ಲಿಯೇ ತಂಗಲು ಯೋಜನೆ ರೂಪಿಸಿರುತ್ತಾರೆ. ಇನ್ನು ಭಕ್ತರು ಹೆಚ್ಚಾಗಿರುವುದರಿಂದ ಬಹುತೇಕರು ಮುಂಗಡವಾಗಿ ರೂಂ ಬುಕಿಂಗ್ ಮಾಡಿ ಬಳಿಕ ಅಲ್ಲಿಗೆ ಹೋಗುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರು ಭಕ್ತರಿಂದ ಸೇವೆಗಳ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ. ಕೆಲವರು ಮಠದ ಸಿಬ್ಬಂದಿಯೇ ಸೇವೆ ನೀಡುತ್ತಿದ್ದಾರೆ ಎಂದು ನಂಬಿ ಮೋಸ ಕೂಡ ಹೋಗುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮಂತ್ರಾಲಯಕ್ಕೆ ಸಾಮಾನ್ಯವಾಗಿ ಗುರುವಾರದಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹೋಗುತ್ತಾರೆ. ಈ ಹಿನ್ನೆಲೆ ಕೆಲವರು ಬುಧವಾರಕ್ಕೆ ಕೆಲವರು ಅಲ್ಲಿ ರೂಂಗಳನ್ನು ಬುಕಿಂಗ್ ಮಾಡುತ್ತಾರೆ. ಅಂದು ಹೆಚ್ಚು ಜನ ದರ್ಶನಕ್ಕೆ ತೆರಳುವ ಹಿನ್ನೆಲೆ ವಾಸ್ತವ್ಯಕ್ಕೆ ತೊಂದರೆ ಆಗಬಹುದು ಎಂಬ ಕಾರಣಕ್ಕೆ ಮೊದಲೇ ರೂಂಗಳನ್ನು ಬುಕಿಂಗ್ ಮಾಡುವ ಭಕ್ತರನ್ನು ಗುರಿಯಾಗಿಸಿಕೊಂಡು ಈ ವಂಚನೆ ಜಾಲವು ಮಠದ ಹೆಸರಿನಲ್ಲಿ ಮೋಸ ಮಾಡುತ್ತಿದೆ ಎಂದು ತಿಳಿದುಬಂದಿದೆ. ಹಾಗಾಗಿ ಅಧಿಕೃತವಾಗಿ ಮಠದ ವೆಬ್‌ಸೈಟ್‌ನಿಂದಲೇ ರೂಂಗಳನ್ನು ಬುಕ್ ಮಾಡಿ, ಫೋನ್ ಕರೆ, ಮೆಸೇಜ್‌ಗಳಿಗೆ ಪ್ರತಿಕ್ರಿಯಿಸಿ ಮೋಸ ಹೋಗದಂತೆ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications