ಸರ್ಕಾರಿ ನೌಕರರಿಗೆ ನಾಲ್ಕನೇ ಶನಿವಾರ ರಜಾ ರದ್ದು, ಆದರೆ ಎಲ್ಲರಿಗೂ ಅಲ್ಲ

ಬೆಂಗಳೂರು, ಡಿಸೆಂಬರ್ 12: ತಿಂಗಳಿಗೆ ಎರಡು ಶನಿವಾರ ಸೇರಿ ನಾಲ್ಕು ಭಾನುವಾರಗಳ ರಜೆ ಅನುಭವಿಸುತ್ತಿದ್ದ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ. ಆದರೆ ಇದು ಎಲ್ಲಾ ಸರ್ಕಾರಿ ನೌಕರರಿಗೂ ಅನ್ವಯಿಸುವುದಿಲ್ಲ.

ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಸರ್ಕಾರಿ ರಜೆ ನೀಡಲಾಗಿತ್ತು. ಆದರೆ ಈ ಆದೇಶವನ್ನು ಸ್ವಲ್ಪವಾಗಿ ಮಾರ್ಪಡಿಸಿ ಕೆಲವು ಅಧಿಕಾರಿಗಳು, ನೌಕರರಿಗೆ ನಾಲ್ಕನೇ ಶನಿವಾರ ಇದ್ದ ರಜೆಯನ್ನು ರದ್ದು ಮಾಡಲಾಗಿದೆ.

2019 ನೇ ಸಾಲಿಗೆ ಮಂಜೂರು ಮಾಡಲಾಗಿರುವ ರಜಾದಿನಗಳ ಅಧಿಸೂಚನೆ ಅನ್ವಯ ನಾಲ್ಕನೇ ಶನಿವಾರ ರಜೆ ಎಂದು ಹೇಳಲಾಗಿತ್ತು. ಆದರೆ ಹೊಸ ಸುತ್ತೋಲೆಯಂತೆ ಕರ್ನಾಟಕ ಉಚ್ಛನ್ಯಾಯಾಲಯ ಹಾಗೂ ರಾಜ್ಯದ ಎಲ್ಲ ಅಧೀನ ನ್ಯಾಯಾಲಯಗಳು ಮತ್ತು ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು, ಪ್ರಾಸಿಕ್ಯೂಟರ್, ಸರ್ಕಾರಿ ವಕೀಲರು ಮತ್ತು ಆಯಾ ನ್ಯಾಯಾಲಯದಲ್ಲಿನ ಪ್ರಕರಣಗಳ ಬಗ್ಗೆ ಸಮನ್ವಯಿಸಲು ನೇಮಿಸಲಾದ ಸರ್ಕಾರಿ ಅಧಿಕಾರಿಗಳು, ನೌಕರರು ಹಾಗೂ ನ್ಯಾಯ ಪ್ರಕ್ರಿಯಿಗೆ ಹಾಜರಾಗುವ ಸರ್ಕಾರಿ ಅಧಿಕಾರಿಗಳಿಗೆ ನಾಲ್ಕನೇ ಶನಿವಾರದ ರಜೆಯನ್ನು ಈಗಿನಿಂದಲೇ ಜಾರಿಯಾಗುವಂತೆ ರದ್ದು ಮಾಡಲಾಗಿದೆ.

Fourth Saturday Leave Canceled For State Government Officials

ಹೊಸ ಆದೇಶದಂತೆ ನ್ಯಾಯಾಲಯ ಮತ್ತು ಅದಕ್ಕೆ ಸಂಬಂಧಿಸಿದ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳಿಗೆ ನಾಲ್ಕನೇ ಶನಿವಾರ ರದ್ದಾಗಿದೆ. ಇತರೆ ಇನ್ನಾವ ಸರ್ಕಾರಿ ನೌಕರರು, ಅಧಿಕಾರಿಗಳಿಗೆ ನಾಲ್ಕನೇ ಶನಿವಾರ ರದ್ದಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+