ಟ್ವಿಟ್ಟರ್ ಗೆ ದೇವೇಗೌಡರ ಪ್ರವೇಶ: ಫಸ್ಟ್ ಫಾಲೋ ಮಾಡಿದ್ದು ಯಾರನ್ನು?
Recommended Video

ಬೆಂಗಳೂರು, ಆಗಸ್ಟ್ 30: ದೇಶದ ಹಿರಿಯ ರಾಜಕಾರಣಿ ಗಳಲ್ಲಿ ಒಬ್ಬರಾದ 85 ವರ್ಷ ವಯಸ್ಸಿನ, ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಅವರು ಗುರುವಾರ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಮೊಟ್ಟ ಮೊದಲ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ದೇವೇಗೌಡರ ಪುತ್ರ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರ ನೂರು ದಿನಗಳನ್ನು ಪೂರೈಸಿರುವ ಸಂದರ್ಭದಲ್ಲಿ ಟ್ವಿಟ್ಟರ್ ಖಾತೆ ತೆರೆದು ತಮ್ಮ ಪುತ್ರನ ಸರ್ಕಾರಕ್ಕೆ ಶುಭ ಹಾರೈಸಿದ್ದಾರೆ.
ದೇವೇಗೌಡ ಅವರು ಟ್ವಿಟ್ಟರ್ ಖಾತೆಯಲ್ಲಿ ಸೇರ್ಪಡೆ ಆಗಿರುವುದಕ್ಕೆ ಅವರ ಅಭಿಮಾನಿಗಳು, ಕಾರ್ಯಕರ್ತರು, ಸಾರ್ವಜನಿಕರು ತೀವ್ರ ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.ಮಾಜಿ ಪ್ರಧಾನಿ ಟ್ವಿಟ್ಟರ್ ಆರಂಭಿಸಿದ ಬೆನ್ನಲ್ಲೇ ನೂರಾರು ಜನರು ಅವರನ್ನು ಫಾಲೋ ಮಾಡಲು ಆರಂಭಿಸಿದ್ದಾರೆ.

ಅಚ್ಚರಿಯ ಸಂಗತಿಯೆಂದರೆ ದೇವೇಗೌಡರನ್ನು ನೂರಾರು ಜನ ಫಾಲೋ ಮಾಡುತ್ತಿದ್ದರೆ ದೇವೇಗೌಡರು ಕೇವಲ ಎರಡು ಖಾತೆಯನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ, ಅದರಲ್ಲಿ ಮೊದಲನೆಯದು ಅವರ ಪುತ್ರ ಎಚ್‌ಡಿ ಕುಮಾರಸ್ವಾಮಿಯವರ ಖಾಸಗಿ ಖಾತೆ, ಎರಡನೆಯದ್ದು ಸಿಎಂ ಆಫ್ ಕರ್ನಾಟಕ, ಅವರ ಪುತ್ರನೇ ಸಿಎಂ ಆಗಿರುವುದರಿಂದ ಅವರ ಖಾತೆ ಫಾಲೋ ಮಾಡಿದ್ದಾರೆ.
ದೇವೇಗೌಡರನ್ನು ಫಾಲೋ ಮಾಡಲು ನೂರಾರು ಜನ ಅಭಿಮಾನಿಗಳಿದ್ದರೆ ದೇವೇಗೌಡರು ಮಾತ್ರ ಟ್ವಿಟ್ಟರ್ ಖಾತೆಯಲ್ಲೂ ತಮ್ಮ ಪುತ್ರ ವ್ಯಾಮೋಹವನ್ನು ಮೆರೆದಿದ್ದಾರೆ.












Click it and Unblock the Notifications