Prajwal Revanna: ನಾನು ಅದನ್ನ ನೋಡ್ಬೇಕು, ಪ್ಲೀಸ್‌ ಕೊಡಿ: ಪ್ರಜ್ವಲ್‌ ರೇವಣ್ಣ ಕೇಳಿಕೊಂಡಿದ್ದೇನು?

ಅತ್ಯಾಚಾರ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಜೈಲುಪಾಲಾಗಿರುವ ಹಾಸನ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರು ಕೋರ್ಟ್‌ ಮುಂದೆ ದೊಡ್ಡ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಸದ್ಯ ಪ್ರಜ್ವಲ್‌ ರೇವಣ್ಣ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ತಮ್ಮ ಮೇಲಿನ ಸಾಕ್ಷಿಗಳ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ತಮ್ಮ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಒದಗಿಸಿರುವ ಸಾಕ್ಷಿಗಳನ್ನು ನೀಡುವಂತೆ ಪ್ರಜ್ವಲ್‌ ರೇವಣ್ಣ ಕೋರ್ಟ್‌ಗೆ ಕೇಳಿಕೊಂಡಿದ್ದಾರೆ. ಈ ಸಂಬಂಧ ಪ್ರಜ್ವಲ್‌ ಪರ ವಕೀಲರು ಸಾಕ್ಷಿಗಳನ್ನು ಕೋರಿದ್ದಾರೆ. ಪ್ರಜ್ವಲ್‌ ರೇವಣ್ಣ ಕೇಸ್‌ನಲ್ಲಿ ಈ ಹಿಂದೆ ಪೆನ್‌ಡ್ರೈವ್‌ ಮೂಲಕ ಹಂಚಿಕೆಯಾಗಿದ್ದ ಅಶ್ಲೀಲ ವಿಡಿಯೋಗಳು ಹಾಗೂ ಫೋಟೋಗಳೇ ಪ್ರಬಲ ಸಾಕ್ಷಿ ಎನ್ನಲಾಗಿದೆ.

Former-mp-prajwal-revanna-plea-high-court-doubts-on-evidence

ಈಗಾಗಲೇ ಇದೇ ಸಾಕ್ಷಿಗಳನ್ನು ಉಲ್ಲೇಖಿಸಿ ತನಿಖಾಧಿಕಾರಿಗಳು ಚಾರ್ಜ್‌ಶೀಟ್‌ ಕೂಡ ಸಲ್ಲಿಕೆ ಮಾಡಿದ್ದಾರೆ. ಇದೀಗ ಪ್ರಜ್ವಲ್‌ ರೇವಣ್ಣ ಅವರು ತಮ್ಮ ಮೇಲಿನ ಆರೋಪ ಕುರಿತಾದ ಸಾಕ್ಷಿಗಳನ್ನು ಒದಗಿಸುವಂತೆ ಕೇಳಿಕೊಂಡಿದ್ದಾರೆ. ಅಲ್ಲದೆ ಪ್ರಜ್ವಲ್‌ ಕಾರು ಚಾಲಕನಿಂದ ಪೊಲೀಸರು ಜಪ್ತಿ ಮಾಡಿರುವ ಮೊಬೈಲ್‌ನಲ್ಲಿ ಹಲವು ಸಾಕ್ಷಿಗಳಿವೆ ಎನ್ನಲಾಗಿದೆ. ಹಾಗಾಗಿ ಪೊಲೀಸರು ಜಪ್ತಿ ಮಾಡಿರುವ ಎಲ್ಲ ಫೋಟೋ ಮತ್ತು ವಿಡಿಯೋಗಳನ್ನು ನಮಗೆ ಒದಗಿಸಿ ಎಂದು ಕೋರಿದ್ದಾರೆ ಎಂದು ವರದಿಯಾಗಿದೆ.

ಪ್ರಜ್ವಲ್ ಪರ ವಾದಿಸಿದ ವಕೀಲ ಜಿ. ಅರುಣ್‌, ವಿಚಾರಣಾ ನ್ಯಾಯಾಲಯದಲ್ಲಿ ನಮ್ಮ ಅರ್ಜಿದಾರರನ್ನು ಕಾನೂನುಬದ್ಧವಾಗಿ ಸಮರ್ಥಿಸಿಕೊಳ್ಳುವ ಭಾಗವಾಗಿ ಈ ಅರ್ಜಿ ಸಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರಜ್ವಲ್‌ ಕಾರು ಚಾಲಕನಿಂದ ಪೊಲೀಸರು ಜಪ್ತಿ ಮಾಡಿರುವ ಮೊಬೈಲ್‌ನಿಂದ ಪಡೆದುಕೊಂಡಿರುವ ಎಲ್ಲಾ ಫೋಟೋ ಮತ್ತು ವಿಡಿಯೋಗಳನ್ನು ನಮಗೆ ಒದಗಿಸಬೇಕು,'' ಎಂದು ಕೋರಿದರು.

ಎಫ್‌ಎಸ್‌ಎಲ್‌ ವರದಿಯಲ್ಲಿ ಪ್ರಜ್ವಲ್‌ ಅವರಿಂದ ಅತ್ಯಾಚಾರ ನಡೆದಿರುವುದು ದೃಢ ಹಾಗೂ ಆ ವಿಡಿಯೋಗಳು ಕೂಡ ಅಸಲಿ ಎಂದು ತಿಳಿಸಿದೆ. ಹೀಗಾಗಿ ಈ ಈ ವಿಡಿಯೋಗಳ ಮೇಲೆ ಹಲವು ಅನುಮಾನಗಳಿದ್ದು, ಪೊಲೀಸರು ಸಾಕ್ಷಿ ಎಂದು ಪರಿಗಣಿಸಿರುವ ವಿಡಿಯೋ ಹಾಗೂ ಫೋಟೋಗಳನ್ನು ನೀಡುವಂತೆ ಕೋರಿದ್ದಾರೆ.

Former-mp-prajwal-revanna-plea-high-court-doubts-on-evidence

ಪ್ರಜ್ವಲ್‌ ಕಾರು ಚಾಲಕನ ಮೊಬೈಲ್‌ನಲ್ಲಿ ಬರೋಬ್ಬರಿ 2 ಸಾವಿರ ಅಶ್ಲೀಲ ವಿಡಿಯೋಗಳು ಹಾಗೂ 15 ಸಾವಿರ ಫೋಟೊಗಳು ಇವೆ ಎಂದು ಹೇಳಲಾಗಿದೆ. ಈ ಕಾರಣಕ್ಕೆ ಪ್ರಜ್ವಲ್‌ ಅವರು ಕೋರಿದಂತೆ ಆ ಸಾಕ್ಷಿಗಳನ್ನು ಒದಗಿಸಲು ಸಾಧ್ಯವಿಲ್ಲ. ಇದರಿಂದ ಮಹಿಳೆಯರ ಖಾಸಗಿತನಕ್ಕರ ಧಕ್ಕೆಯಾಗುತ್ತದೆ ಎಂದು ಎದುರಾಳಿ ವಕೀಲರು ಆಕ್ಷೇಪಿಸಿದ್ದಾರೆ.

ಈ ಪ್ರಕರಣದಲ್ಲಿ ದೂರುದಾರರನ್ನು ಬಿಟ್ಟು ಉಳಿದ ಸಂತ್ರಸ್ತರ ವಿವರ ಬಹಿರಂಗಗೊಳಿಸಲು ನ್ಯಾಯಾಲಯ ಯಾವ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ನೀವು ಕೇಳುತ್ತಿರುವ ದಾಖಲೆ ಕೂಡ ಸಾವಿರಾರು ಪುಟಗಳಲ್ಲಿದ್ದು, ನಿಮಗೆ ಅದರ ಅಗತ್ಯವೇನಿದೆ ಎಂದು ಕೋರ್ಟ್‌ ಕೂಡ ಪ್ರಶ್ನೆ ಮಾಡಿದೆ.

ಅಂತಿಮವಾಗಿ ಈ ಪ್ರಕರಣದಲ್ಲಿ ಸಂತ್ರಸ್ತರು, ಅದರಲ್ಲೂ ಮಹಿಳೆಯರ ಖಾಸಗಿತನ ಬಹಿರಂಗವಾಗಲು ಒಪ್ಪುವುದಿಲ್ಲ. ಅವರ ಖಾಸಗಿತನಕ್ಕೆ ಧಕ್ಕೆಯಾಗಲು ಅವಕಾಶ ಕೊಡುವುದಿಲ್ಲ. ಬಳಿಕ ಪ್ರಾಸಿಕ್ಯೂಷನ್‌ಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿತು. ಈ ಪ್ರಕರಣದ ವಿಚಾರಣೆಯನ್ನು ಜನವರಿ 16ಕ್ಕೆ ಮುಂದೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+