ಜೈ ಶ್ರೀರಾಮ್ ಎಂದ ಸಿದ್ದರಾಮಯ್ಯ: ಕೆ ಎಸ್ ಈಶ್ವರಪ್ಪ ಹೇಳಿದ್ದೇನು?
ಶಿವಮೊಗ್ಗ, ಜನವರಿ 23: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ರಾಮ ಮಂದಿರ ಉದ್ಘಾಟನೆ ಮಾಡಿದ ಬಳಿಕ ಮಾತನಾಡುತ್ತಾ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ. ಕೆಟ್ಟ ಮೇಲೆ ಬುದ್ಧಿ ಬಂದಂತಾಗಿದೆ ಸಿದ್ದರಾಮಯ್ಯ ಪರಿಸ್ಥಿತಿ ಎಂದು ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಶಿವಮೊಗ್ಗದಲ್ಲಿ ಮಾಧ್ಯಮಗಳ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ಎಲ್ಲಾ ಮುಗಿದ ಮೇಲೆ ಈಗ ಜೈ ಶ್ರೀರಾಮ್ ಅಂತಾ ಕೂಗಿದ್ದಾರೆ. ಕೊನೆಗೂ ಅವರಿಗೆ ರಾಮ ಬುದ್ಧಿ ಕೊಟ್ನಲ್ಲ ಅಂತಾ ಸಂತಸವಾಗಿದೆ. ಜೈ ಶ್ರೀರಾಮ್ ಬಿಜೆಪಿ ಆಸ್ತಿ ಅಲ್ಲ, ಪ್ರಪಂಚದ ಹಿಂದೂಗಳ ಆಸ್ತಿ. ಬರೀ ಮುಸಲ್ಮಾನರನ್ನೇ ಇಟ್ಟುಕೊಂಡರೆ ಬದುಕುವುದಕ್ಕೆ ಆಗಲ್ಲ. ಹಿಂದೂಗಳು ಕೂಡ ಬೇಕು ಅಂತಾ ಕೊನೆಗೂ ಸಿದ್ದರಾಮಯ್ಯಗೆ ಬುದ್ಧಿ ಬಂದಿದೆ. ದೇವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಒಳ್ಳೆಯದು ಮಾಡಲಿ ಎಂದು ಈಶ್ವರಪ್ಪ ಹೇಳಿದ್ದಾರೆ.

ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೀರೋ ಆಗಿದ್ದಾರೆ. ಕರ್ನಾಟಕದ ಜನರ ಮುಂದೆ ಸಿದ್ದರಾಮಯ್ಯ ವಿಲನ್ ಆಗಿದ್ದಾರೆ. ರಾಜ್ಯ ಸರ್ಕಾರ ಹುಚ್ಚು ಸರ್ಕಾರ ಅನ್ನೋದಕ್ಕೆ ಮತ್ತೊಂದು ಉದಾಹರಣೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಂದಡರಾಮ ದೇವಾಲಯ ಅರ್ಚಕರಿಗೆ ನೋಟೀಸ್ ನೀಡಿದ್ದಾರೆ. ಆ ಹಣವನ್ನು ವಾಪಾಸು ಕಟ್ಟಬೇಕು ಅಂತ ಹೇಳಿದೆ. ಚಿಕ್ಕಮಗಳೂರು ತಹಶಿಲ್ದಾರ್ ನೋಟಿಸ್ ನೀಡಿದ್ದಾರೆ. ಇದು ಗೌರವಯುತ ಅರ್ಚಕರಿಗೆ ಮಾಡಿದ ದೊಡ್ಡ ಅಪಚಾರ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಿರೇ ಮಗಳೂರು ಕಣ್ಣನ್ ಹೇಳ್ತಾರೆ ನೋಟಿಸ್ ಬಂದ್ರೆ ಸಂಸ್ಕೃತಿಯ ಗತಿ ಏನು ಅಂತ. ಕಾಂಗ್ರೆಸ್ ಸರ್ಕಾರದ ಆದಾಯದ ಮೇಲೆಯ ಸಂಬಳ ನಿರ್ಧಾರ ಮಾಡೋದಾದ್ರೆ. ಹೆಚ್ಚು ಆದಾಯ ಬರುವ ದೇವಾಲಯದಲ್ಲಿ ಹೆಚ್ಚು ಸಂಬಳ ಕೊಡ್ತಾರಾ? ಈ ರೀತಿಯ ನೋಟಿಸ್ ಗೆ ಹಿಂದೂ ಸಮಾಜ ಸಹಿಸಲ್ಲ. ಮಂತ್ರಿಗಳ ಸಂಬಳವನ್ನು ವಾಪಾಸು ಕಟ್ಟಿ ಅಂದಾಗ ಸಿಟ್ಟು ಬರುತ್ತೇ ಅಲ್ವ, ಆದಾಯಾದ ಮೇಲೆ ಸಂಬಳ ತಿರ್ಮಾನ ಮಾಡ್ತಾರೆ ಅಂದ್ರೆ ಹೇಗೆ? 44 ವರ್ಷಗಳಿಂದ ಪೂಜೆ ಮಾಡಿಕೊಂಡು ಬಂದಿದ್ದಾರೆ. ಹಣಕ್ಕಾಗಿ ಅವರು ಪೂಜೆ ಮಾಡಿಲ್ಲ, ಕನ್ನಡದಲ್ಲಿ ಪೂಜೆ ಮಾಡುತ್ತೀರುವ ಏಕೈಕ ವ್ಯಕ್ತಿ ಕಣ್ಣನ್ ಎಂದರು.
ಇನ್ನೂ ಇದು ಸಣ್ಣ ವಿಷಯ ಅಂತ ರಾಮಲಿಂಗರೆಡ್ಡಿ ಹೇಳಿದ್ದಾರೆ. ಮಂತ್ರಿಗಳೇ ನಿಮಗೆ ಅಪಮಾನ ಆಗಿದ್ದರೆ ಸಹಿಸುತ್ತಿದ್ದರಾ? ಅರ್ಚಕರು ಪೂಜೆ ಮಾಡುತ್ತಿರುವುದರಿಂದ ಸಂಸ್ಕೃತಿ ಉಳಿದಿದೆ, ಕಾಂಗ್ರೆಸ್ ಸರ್ಕಾರ ಸಂಸ್ಕೃತಿಗೆ ಮಾಡುತ್ತಿರುವ ಅಪಮಾನ ಇದು. ಮುಜರಾಯಿ ಸಚಿವರು ರಾಜ್ಯದ ಜನರ ಬಳಿ ಕ್ಷೇಮೆ ಕೇಳಬೇಕು. ಮುಂದೆ ಹೀಗೆ ನೋಟಿಸ್ ಕೋಡಲ್ಲ ಅಂತ ಹೇಳಬೇಕು, ಭಾರತೀಯ ಜನತಾ ಪಕ್ಷ ಮುಂದೇ ಹೇಗೆ ಹೋರಾಟ ಮಾಡಬೇಕು ಅಂತ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ಕನ್ನಡದ ಪೂಜಾರಿಗೆ ಆಗಿರುವ ಅಪಮಾನ ಅಲ್ಲ ಇದು. ಹಿಂದೂಗಳಿಗೆ ಮಾಡಿದ ಅಪಮಾನ ಇದು, ನೋಟಿಸ್ ನೀಡಿದ ತಹಶಿಲ್ದಾರರ್ ಅವರನ್ನು ವಜಾಗೊಳಿಸಬೇಕು. ರಾಜ್ಯದಲ್ಲಿ 50 ಸಾವಿರ ಅರ್ಚಕರಿದ್ದಾರೆ. ನೋಟಿಸ್ ನೀಡಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು. ದೇವಸ್ಥಾನಗಳ ಬಗ್ಗೆ ಭಕ್ತಿಯಿಂದ ಯೋಚನೆ ಮಾಡಬೇಕು, ದೇವಸ್ಥಾನಗಳ ಅಭಿವೃದ್ಧಿ ಆದರೆ ಹೆಚ್ಚಿನ ಆದಾಯ ಬರುತ್ತದೆ. ಅಭಿವೃದ್ಧಿ ವಿಚಾರದಲ್ಲಿ ಅರ್ಚಕರಿಗೆ ಜವಾಬ್ದಾರಿ ಕೊಡುದು ಸರಿಯಲ್ಲ. ರಾಜ್ಯ ಸರ್ಕಾರ ಜನರ ಬಳಿ ಕ್ಷೇಮೆ ಕೇಳಬೇಕು, ಬೇರೆ ಯಾರಿಗಾದರೂ ನೋಟಿಸ್ ನೀಡಿದ್ದಾರಾ ನೋಡಬೇಕು. ಈ ವಿಷಯ ಕೇಳಿ ನನಗೆ ತುಂಬಾ ನೋವಾಗಿದೆ.
ದೇವಸ್ಥಾನದ ಆದಾಯವನ್ನು ಬೇರೆ ಉದ್ದೇಶಗಳಿಗೆ ಬಳಸಲಾಗುತ್ತಿದೇಯಾ? ಈ ಬಗ್ಗೆ ಬಹಿರಂಗ ಮಾಡಬೇಕು. ನಿನ್ನೆ ರಾಮ ಮಂದಿರ ಉದ್ಘಾಟನೆ ಆಗಿದೆ, ನಿನ್ನೆ ದೀಪಾವಳಿ ರೀತಿಯಲ್ಲಿ ಸಡಗರ ಸಂಭ್ರಮ ಇತ್ತು. ಅಸ್ಸಾಂ ದೇವಸ್ಥಾನಕ್ಕೆ ರಾಹುಲ್ ಗಾಂಧಿ ಅವರನ್ನು ಯಾಕೇ ಬಿಟ್ಟಿಲ್ಲ ಗೊತ್ತಿಲ್ಲ. ದೇವಸ್ಥಾನದ ಆದಾಯವನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಬೇಕು. ಸಿದ್ದರಾಮಯ್ಯ ನಡುವಳಿಕೆ ಮೊದಲು ಸರಿ ಇರಲಿಲ್ಲ, ಇದನ್ನು ನಾನು ರಾಜಕೀಯ ವಿಷಯಕ್ಕೆ ಬಳಸಲು ಹೋಗಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ನವರ ಬಗ್ಗೆ ಕಳೆದು ಹೋಗಿದ್ದ ಗೌರವ ಸ್ವಲ್ಪ ಬಂದಿದೆ. ಇದನ್ನೆ ಕಾಪಾಡಿಕೊಳ್ಳಿ ಎಂದು ಕೇಳುತ್ತೇನೆ. ರಾಮ ಯಾವ ಪಕ್ಷದ ರಾಮ ಅಲ್ಲ, ಹಿಂದೂ ಸಮಾಜ ಜಾಗೃತ ಆಗುತ್ತಿರೋದು. ಕಾಂಗ್ರೆಸ್ ಗೆ ಸಮಾಧಾನ ಆಗುತ್ತಿಲ್ಲ, ಗಾಂಧಿ ಸಮಾಧಿ ಮೇಲು ಹೇ ರಾಮ ಅಂತ ಇದೆ. ಕಾಂಗ್ರೆಸ್ ದೇಶದಲ್ಲಿ ನಿರ್ನಾಮ ಆಗುತ್ತಿದೆ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಡ್ರೆಸ್ ಇಲ್ಲದೆ ಹೋಗುತ್ತೆ. ಬದಲಾವಣೆ ದಿಕ್ಕಿನಲ್ಲಿ ಹೋಗಬೇಕು ಅಂತ ಸಿದ್ದರಾಮಯ್ಯ ಘೋಷಣೆ ಕೂಗಿರಬೇಕು ಎಂದು ಹೇಳಿದರು.












Click it and Unblock the Notifications