ನನ್ನ ವಿರುದ್ಧದ ಸ್ಟಿಂಗ್ ಆಪರೇಷನ್ ಹಿಂದೆ ಕೃಪಾ ಆಳ್ವ ಹಾಗೂ ರಾಕೇಶ್ ಶೆಟ್ಟಿ ಕೈವಾಡಯಿದೆ: ಕೊನೆಗೂ ಮೌನ ಮುರಿದ ಸಿದ್ದು

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವಿರುದ್ಧ ನಡೆದಿದೆ ಎನ್ನಲಾದ 'ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್' ವಿವಾದದ ಕುರಿತು ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಈ ವಿವಾದದ ಹಿಂದೆ ಮಂಗಳೂರು ಮೂಲದ ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ಹಾಗೂ ಪವರ್ ಟಿವಿಯ ರಾಕೇಶ್ ಶೆಟ್ಟಿ ಅವರ ಕೈವಾಡವಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಶುಕ್ರವಾರ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸ್ಟಿಂಗ್ ಆಪರೇಷನ್ ಸಂಪೂರ್ಣ ಕಟ್ಟುಕಥೆ ಮತ್ತು ದುರುದ್ದೇಶಪೂರಿತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ನನ್ನನ್ನು ಬ್ಲ್ಯಾಕ್ ಮೇಲ್ ಮಾಡುವ ಉದ್ದೇಶದಿಂದಲೇ ಈ ಸುಳ್ಳು ವಿಡಿಯೋವನ್ನ ಸೃಷ್ಟಿಸಲಾಗಿದೆ ಎಂದು ಅವರು ಕಿಡಿಕಾರಿದರು.

Former CM Siddaramaiah Alleges Congress leader Kripa Alva amp amp Rakesh Shetty Behind Sting Operation

ಬ್ಲ್ಯಾಕ್ ಮೇಲ್ ತಂತ್ರ ಮತ್ತು ರಾಜಕೀಯ ಷಡ್ಯಂತ್ರ

"ರಾಕೇಶ್ ಶೆಟ್ಟಿ ಈಗಾಗಲೇ ಪೊಲೀಸರ ಮುಂದೆ ತನ್ನ ತಪ್ಪನ್ನ ಒಪ್ಪಿಕೊಂಡಿದ್ದಾನೆ. ನನ್ನ ವಿರುದ್ಧದ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ಜನರಿಗೆ ವಾಸ್ತವ ಗೊತ್ತಾಗಬೇಕು ಎಂಬ ಉದ್ದೇಶದಿಂದಲೇ ನಾನು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ" ಎಂದು ಸಿದ್ದರಾಮಯ್ಯ ವಿವರಿಸಿದರು.

ಸೆಪ್ಟೆಂಬರ್ 26ರಂದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದಾಗಲೇ ತಮಗೆ ಈ ವಿಚಾರ ತಿಳಿದುಬಂತು ಎಂದ ಅವರು, "ನಾನು ಅಧಿಕಾರದಲ್ಲಿ ಇದ್ದಾಗ ಇಂತಹ ಯಾವುದೇ ಬೆದರಿಕೆ ಹಾಕುವ ಧೈರ್ಯ ಮಾಡಿರಲಿಲ್ಲ. ಈಗ ನಾನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಈ ರೀತಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಆದರೆ ಅವರ ಉದ್ದೇಶ ಎಂದಿಗೂ ಈಡೇರುವುದಿಲ್ಲ," ಎಂದು ಸಿದ್ದರಾಮಯ್ಯ ಹೇಳಿದರು.

ತಮ್ಮ 1984ರಿಂದ ಇಲ್ಲಿಯ ತನಕದ ಸುದೀರ್ಘ ರಾಜಕೀಯ ಜೀವನದಲ್ಲಿ ಇಂತಹ ಕಪ್ಪು ಚುಕ್ಕೆ ಬಂದಿರಲಿಲ್ಲ ಮತ್ತು ಜನ ಇದನ್ನು ನಂಬುವುದಿಲ್ಲ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಪೊಲೀಸ್ ತನಿಖೆಯಿಂದ ಸತ್ಯ ಹೊರಬರಲಿದೆ

ಈ ವಿವಾದದ ಹಿಂದೆ ಸ್ವಪಕ್ಷೀಯರ ಕೈವಾಡವಿದೆಯೇ ಅಥವಾ ಬೇರೆ ಪಕ್ಷದವರ ಪಿತೂರಿ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಪ್ರಸ್ತುತ ಪೊಲೀಸ್ ತನಿಖೆ ನಡೆಯುತ್ತಿದೆ. ಸತ್ಯಾಂಶ ತನಿಖೆಯಿಂದಲೇ ಹೊರಬರಬೇಕಿದೆ. ನಮ್ಮ ಪೊಲೀಸರ ತನಿಖೆಯ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ. ಹೀಗಾಗಿ ಎಸ್ಐಟಿ ಅಥವಾ ಬೇರೆ ಉನ್ನತ ಮಟ್ಟದ ತನಿಖೆಯ ಅಗತ್ಯವಿಲ್ಲ," ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಹೆಚ್.ಡಿ. ಕುಮಾರಸ್ವಾಮಿ ಅವರು ತಮಗೆ ಬೆಂಬಲ ವ್ಯಕ್ತಪಡಿಸಿದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ತನಗೆ ಯಾರ ಒಲುಮೆಯೂ ಬೇಕಿಲ್ಲ, ತನಿಖೆಯಿಂದಲೇ ವಾಸ್ತವ ಅನಾವರಣಗೊಳ್ಳಲಿದೆ ಎಂದರು.

ದಸರಾ ಸಂದರ್ಭದಲ್ಲಿ ದಿನಕ್ಕೆ ಮೂವರು ಉಸ್ತುವಾರಿ ಸಚಿವರನ್ನ ನೇಮಿಸಿದ್ದರ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಅನೇಕರು ಸರಿಯಾಗಿ ಹಾಜರಾಗಲೇ ಇಲ್ಲ, ನನ್ನ ಪ್ರಕಾರ ಆ ನೇಮಕದ ಅಗತ್ಯವಿರಲಿಲ್ಲ, ಆದರೆ ಅದು ಹೊಸ ಮುಖ್ಯಮಂತ್ರಿಗಳ ನಿರ್ಧಾರ ಎಂದು ಹೇಳಿದರು.

ಯಾರಿದು ಕಾಂಗ್ರೆಸ್ ನಾಯಕಿ ಕೃಪಾ ಆಳ್ವ?

ಸಿದ್ದರಾಮಯ್ಯ ಅವರ ಆರೋಪದಿಂದಾಗಿ ದಿಢೀರ್ ಸುದ್ದಿಯಲ್ಲಿರುವ ಕೃಪಾ ಆಳ್ವ, ಕರಾವಳಿ ಭಾಗದ ಪ್ರಭಾವಿ ಮಹಿಳಾ ಕಾಂಗ್ರೆಸ್ ನಾಯಕಿ. 1992ರಲ್ಲಿ ಹತ್ಯೆಗೀಡಾದ ಮಂಗಳೂರಿನ ಪ್ರಸಿದ್ಧ ಸಮಾಜ ಸೇವಕ ಹಾಗೂ ನಾಯಕ ಅಮರ್ ಆಳ್ವ ಅವರ ಪತ್ನಿಯಾಗಿರುವ ಇವರು, ಪತಿಯ ನಿಧನದ ನಂತರ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡರು.

ಲಯನ್ಸ್ ಕ್ಲಬ್ ಮೂಲಕ ಸಮಾಜ ಸೇವೆ ಆರಂಭಿಸಿದ ಇವರು, ಕರ್ನಾಟಕದ 324-D5 ಜಿಲ್ಲೆಯ ಮೊದಲ ಮಹಿಳಾ ಡಿಸ್ಟ್ರಿಕ್ಟ್ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದಾರೆ.

ನಂತರ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡು ಸಕ್ರಿಯ ರಾಜಕಾರಣಕ್ಕೆ ಇಳಿದ ಇವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಂದರೆ 2015ರಲ್ಲಿ 'ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದರು. ಇದೀಗ ಅದೇ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಇವರ ಹೆಸರು ತಳುಕುಹಾಕಿಕೊಂಡಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+