Operation Hasta: ಜೆಡಿಎಸ್ ಶಾಸಕರನ್ನ ಸೆಳೆಯಲು ಕಾಂಗ್ರೆಸ್ ಪ್ಲಾನ್: ಕುಮಾರಸ್ವಾಮಿ ಹೇಳಿದ್ದೇನು?
ಬೆಂಗಳೂರು, ಜುಲೈ 17: ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ಸೆಳೆಯುತ್ತಿದ್ದಾರೆ. ಅವರು ನಮ್ಮ ಶಾಸಕರನ್ನ ಸೆಳೆಯುವುದನ್ನ ಇನ್ನೂ ನಿಲ್ಲಿಸಿಲ್ಲ ಎಂಬುದು ಗೊತ್ತು ನನಗೆ. 12 ಜನ ಹೋಗ್ತಾರಂತೆ, ಸೆಳೆಯುವಂತ ಕೆಲಸ ಆಗ್ತಿದೆ ನಾನು ಗಮನಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಈ ಕುರಿತು ವಿಧಾನಸೌಧದಲ್ಲಿ ಸುದಿಗೋಷ್ಟಿಯಲ್ಲಿ ಮಾತನಾಡಿದ ಅವರು, 12 ಜನ ಶಾಸಕರು ಹೋಗ್ತಾರಂತೆ ಎನ್ನುವ ಚರ್ಚೆಯಾಗುತ್ತಿದೆ. ಆದರೆ ನಾವೆಲ್ಲರೂ ಒಟ್ಟಾಗಿ ಇದ್ದೇವೆ ಎಂದು ಕಾಂಗ್ರೆಸ್ ಸರ್ಕಾರದ ಆಪರೇಷನ್ ಹಸ್ತ ಕುರಿತು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಈಗಾಗಲೇ ವರ್ಗಾವಣೆ ದಂಧೆ ಕುರಿತು ನಾನು ಮಾತನಾಡಿದ್ದೇನೆ. ಈಗ ನಡೆಯುತ್ತಿರುವ ಯೋಜನೆಗಳ ಕಾಮಗಾರಿಗಳ ಒಟ್ಟು ಅಂದಾಜು ವೆಚ್ಚವನ್ನು 20-30%ಗೆ ಹೆಚ್ಚಳ ಮಾಡಿಕೊಳ್ಳಲಾಗುತ್ತಿದೆ. ಕಮಿಷನ್ ಹೊಡೆಯೋದಕ್ಕೆ ಏನು ಬೇಕೋ ಅದನ್ನು ಮಾಡಿಕೊಳ್ಳುತ್ತಿದ್ದಾರೆ. ಸಚಿವರೊಬ್ಬರು ಒಂದು ಪತ್ರಿಕೆಯ ಕಟಿಂಗ್ ಇಟ್ಟುಕೊಂಡು ಎಲ್ಲೆಲ್ಲಿ ರೇಟ್ ಫಿಕ್ಸ್ ಆಗಿದೆ ಅಂತ ಹೇಳಿದರು. ನಾನು ಆ ಕಟಿಂಗ್ ನಲ್ಲಿರುವ ಸುದ್ದಿ ಯಾವುದು ಎಂದು ಪತ್ತೆ ಹಚ್ಚಿದೆ.
ತೀರಾ ನೀಡಿದ ಮೇಲೆ ಅದು 2013ರಿಂದ 2018ರವರೆಗೆ ನಡೆದಿರುವ ವರ್ಗಾವಣೆ ದಂಧೆಗೆ ಸಂಬಂಧಿಸಿದ ಸುದ್ದಿ. ಮುಖ್ಯ ಎಂಜಿನಿಯರ್ ಹುದ್ದೆಗೆ 30 ಕೋಟಿ ಕಪ್ಪಾ ಎನ್ನುವ ಸುದ್ದಿಯ ಕಟಿಂಗ್ ಅದು. ಅದು ರೇವಣ್ಣ ಅವರದ್ದಾಗಲಿ, ನನ್ನ ಕಾಲದ್ದಾಗಲಿ ಆಗಿರಲಿಲ್ಲ ಎಂದು ಟಾಂಗ್ ನೀಡಿದರು.
ರೈತರು ಆತ್ಮಹತ್ಯೆ ಸುದ್ದಿ ವಿಚಾರವಾಗಿ ಮಾತನಾಡಿದ ಅವರು, ರೈತರ ಆತ್ಮಹತ್ಯೆ ಬಗ್ಗೆ ಸರ್ಕಾರ ಚಕಾರ ಎತ್ತುತ್ತಿಲ್ಲ. ಮಹಾಘಟಬಂಧನ್ ಯಾಕೆ ಮಾಡ್ತಾರೆ..? ಅಧಿಕಾರಕ್ಕೆ ತಾನೆ? ವಿಧಾನಸೌಧದಲ್ಲಿ 18 ಪಕ್ಷಗಳು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು..? ಆಮೇಲೆ ಏನಾಯ್ತು..? ನಾವು ತಾಜ್ ವೆಸ್ಟ್ ನಲ್ಲಿ ಇದ್ರೆ ಮಹಾ ಅಪರಾಧ ರೀತಿಯಲ್ಲಿ ಚರ್ಚೆ ಮಾಡ್ತಾರೆ ಎಂದು ಕಿಡಿಕಾರಿದರು.
ವಿಪಕ್ಷಗಳ ಸಭೆಗೆ ಆಹ್ವಾನ ವಿಚಾರವಾಗಿ ಮಾತನಾಡಿದ ಅವರು, ಅದು ಅವರಿಗೆ ಬಿಟ್ಟಿದ್ದು , ನನಗೆ ಆಹ್ವಾನ ಕೊಟ್ಟಿಲ್ಲ. ಪಾಟ್ನಾ ದಲ್ಲಿ ನಡೆದ ಸಭೆಗೂ ನನಗೆ ಆಹ್ವಾನ ಇರಲಿಲ್ಲ. ನಾಳೆ ಚುನಾವಣೆ ಆದ್ಮೇಲೆ ಅವರು ಕಾಂಗ್ರೆಸ್ ಜೊತೆಗೆ ಇತರ ಪಕ್ಷ ಇರುತ್ತಾ..? ಯಾರಿಗೆ ಗೊತ್ತು..? ಎಂದು ಪ್ರಶ್ನಿಸಿದ ಅವರು, ಕರ್ನಾಟಕ ಸಂಪತ್ ಬರಿತ ನಾಡು ಹೀಗಾಗಿ ಇಲ್ಲಿಂದಲೇ ದುಡ್ಡು ದೇಶಕ್ಕೆ ಹಂಚುತ್ತಾರೆ. ಇದು ಎಟಿಎಂ ಅಂತ ಅಮಿತ್ ಶಾನೇ ಹೇಳಿಲ್ವಾ..? ನಾವು ಸ್ವತಂತ್ರವಾಗಿ ಹೋದರು ಎರಡರಿಂದ ಮೂರು ಕ್ಷೇತ್ರ ಗೆಲ್ಲುವ ಸಾಮರ್ಥ್ಯ ಇದೆ ಎಂದು ಕುಮಾರಸ್ವಾಮಿ ಹೇಳಿದರು.
ಮುಖ್ಯಮಂತ್ರಿಗೆ ಕನ್ನಡ ಭಾಷೆ ಅರ್ಥ ಆಗುವುದಿಲ್ಲವೇ?
ವಿಧಾನ ಪರಿಷತ್ ನಲ್ಲಿ ಅವರು ರಾಜ್ಯಪಾಲರ ಭಾಷಣದ ಮೇಲೆ ಉತ್ತರ ಕೊಟ್ಟಾಗ ಸಿಎಂ ಮಾತನಾಡಿದ್ದಾರೆ. 123 ಕ್ಷೇತ್ರ ಗೆಲ್ಲದಿದ್ದರೆ ಜೆಡಿಎಸ್ ಪಕ್ಷವನ್ನು ವಿಸರ್ಜನೆ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದರು. ಈಗೆಲ್ಲಿ ವಿಸರ್ಜನೆ ಮಾಡಿದ್ದಾರೆ? ಎಂದು ನನ್ನನ್ನು ಪ್ರಶ್ನೆ ಮಾಡಿದ್ದಾರೆ. ಆದರೆ, ಅವರ ಅಜ್ಞಾನಕ್ಕೆ ನನ್ನ ಮರುಕವಿದೆ. ನನ್ನ ಪಕ್ಷದ ಪಂಚರತ್ನ ಯೋಜನೆ ಅನುಷ್ಠಾನಕ್ಕೆ ತರಲು ಒಂದು ಅವಕಾಶ ಕೊಡಿ. ಐದು ವರ್ಷದಲ್ಲಿ ಯೋಜನೆಯನ್ನ ಪ್ರತೀ ಕುಟುಂಬಕ್ಕೆ ತಲುಪಿಸದಿದ್ರೆ ಪಕ್ಷ ವಿಸರ್ಜನೆ ಮಾಡೋದಾಗಿ ಹೇಳಿದ್ದೆ. ಮುಖ್ಯಮಂತ್ರಿಗೆ ಕನ್ನಡ ಭಾಷೆ ಅರ್ಥ ಆಗುವುದಿಲ್ಲವೇ? ಎಂದು ಸಿದ್ದರಾಮಯ್ಯ ಗೆ ಟಾಂಗ್ ನೀಡಿದ್ದಾರೆ.
ಇನ್ನೂ ಗ್ಯಾರಂಟಿ ಘೋಷಣೆಗಳ ವಿರುದ್ದ ಕಿಡಿಕಾರಿದ ಅವರು, ಗ್ಯಾರಂಟಿ ಮಾಡಲ್ ಅಂತೆ. ಗ್ಯಾರಂಟಿ ಅನೌನ್ಸ್ ಮಾಡಿದ ಮೇಲೆಯೇ ರೈತ ಆತ್ಮ ಹತ್ಯೆ ಮಾಡಿಕೊಂಡಿರುವುದು. ಕೃಷಿ ಇಲಾಖೆಯಲ್ಲಿ ನಿಮ್ಮ ಸಾಧನೆ ಏನು? ಲೂಟಿ ಮಾಡಿಬಿಟ್ರು ಅಂತ ಬಿಜೆಪಿಗೆ ಹೇಳಿದ್ರಿ. ನಿಮ್ಮ ಸಾಧನೆ ಏನು. ಈ ಸಂದೇಶ ಕೊಡ್ರಪ್ಪ ನಿಮ್ಮ ಮಹಾಘಟಬಂಧನ್ ನಲ್ಲಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿಕಾರಿದರು.
ವಿಪಕ್ಷ ಸ್ಥಾನದ ಕುರಿತು ಮಾತನಾಡಿದ ಅವರು, ನಾನು ಸಲಹೆ ಕೊಡೋಕೆ ದೊಡ್ಡವನಲ್ಲ. ಬಿಜೆಪಿ 65 ಸ್ಥಾನ ಗೆದ್ರೂ ಅವರಲ್ಲಿ ದೊಡ್ಡ ನಾಯಕರಿದ್ದಾರೆ, ಬಿಜೆಪಿ ನಾಯಕರಿಗೆ ಮನವಿ ಮಾಡುತ್ತೇನೆ ಮೊದಲು ನಿಮ್ಮ ವಿಪಕ್ಷ ನಾಯಕರನ್ನ ಆಯ್ಕೆ ಮಾಡಿ. ವಿಪಕ್ಷ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ, ಅಶೋಕ್ ಅನೇಕ ನಾಯಕರಿದ್ದಾರೆ. ಅನೇಕರು ಸಮರ್ಥರಿದ್ದಾರೆ. ಮೊದಲು ಒಬ್ಬರನ್ನ ಆಯ್ಕೆ ಮಾಡಿ. ಕುಮಾರಸ್ವಾಮಿ ವಿಪಕ್ಷ ನಾಯಕ ಆಗ್ತಾರಂತೆ, ಕೇಂದ್ರದ ಮಂತ್ರಿಗೆ ಟವೆಲ್ ಹಾಕಿದ್ದಾರಂತೆ. ಹೀಗೆಲ್ಲಾ ಮಾಧ್ಯಮದಲ್ಲಿ ಬರುತ್ತಿದೆ. ನಮ್ಮ ಪಕ್ಷದಲ್ಲಿ 19 ಶಾಸಕರಿದ್ದಾರೆ. ಅವರ ಜೊತೆಯಲ್ಲೇ ಹೋರಾಟ ಮಾಡುತ್ತೇವೆ ಎಂದು ಹೇಳಿದರು.












Click it and Unblock the Notifications