ರಾಜ್ಯದ 127 ಪಿಜಿಗಳಿಗೆ ಆಹಾರ ಸುರಕ್ಷತಾ ಇಲಾಖೆಯಿಂದ ನೋಟಿಸ್, ದಂಡ!
ಬೆಂಗಳೂರು ನವೆಂಬರ್ 20: ಹಸಿಬಿಸಿ ಸುಟ್ಟ್ ಚಪಾತಿ, ಅರೆಬೆರೆ ಬೆಂದ ಅನ್ನ, ಹುಳ ಇರುವ ಧಾನ್ಯಗಳು, ಅವಧಿ ಮುಗಿದ ಪದಾರ್ಥಗಳು, ಶುಚಿ ಇಲ್ಲದ ಸ್ಥಳ, ರುಚಿ ಇಲ್ಲದ ಆಹಾರ ಇದು ರಾಜ್ಯದ ಬಹುತೇಕ ಪಿಜಿಗಳಲ್ಲಿನ ಅವಸ್ಥೆ. ಇದಕ್ಕೆ ಕಡಿವಾಣ ಹೇರಲು ಆರೋಗ್ಯ ಇಲಾಖೆ ಮುಂದಾಗಿದ್ದು ರಾಜ್ಯದ 127 ಪಿಜಿಗಳಿಗೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ನೋಟಿಸ್ ಜಾರಿ ಮಾಡಿದೆ. ಅಲ್ಲದೆ ನಾಲ್ಕು ಪಿಜಿಗಳಿಗೆ ದಂಡ ಕೂಡ ವಿಧಿಸಿದೆ.
ಹೌದು... ವಿದ್ಯಾಭ್ಯಾಸ, ಕೆಲಸಕ್ಕಾಗಿ ಅದೆಷ್ಟೋ ವಿದ್ಯಾರ್ಥಿಗಳು ಪಿಜಿಯಲ್ಲಿ ಉಳಿದುಕೊಳ್ಳುತ್ತಾರೆ. ಸಾವಿರಾರು ರೂಪಾಯಿ ಮುಂಗಡ ಹಣ ನೀಡಿ ಬರುವ ವಿದ್ಯಾರ್ಥಿಗಳಿಗೆ ಆರಂಭದಲ್ಲಿ ರುಚಿಕರ ಆಹಾರ ನೀಡುವ ಅದೆಷ್ಟೋ ಪಿಜಿಗಳು ಕಾಲಕ್ರಮೇಣ ಕಳಪೆ ಗುಣಮಟ್ಟದ ಆಹಾರ ನೀಡಲು ಆರಂಭಿಸುತ್ತವೆ. ಇದು ವಿದ್ಯಾರ್ಥಿಗಳನ್ನು ಪಿಜಿಗಳತ್ತೆ ಸೆಳೆಯುವ ತಂತ್ರವಾಗಿದೆ. ಅಲ್ಲದೆ ರಾಜ್ಯದ ಅದೆಷ್ಟೋ ಪಿಜಿಗಳನ್ನು ಸ್ಥಳವಕಾಶವಿಲ್ಲದೆ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಕಡಿಮೆ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಇರಲು ಅವಕಾಶ ನೀಡುವುದು, ವಿಶೇಷವಾಗಿ ಗುಣಮಟ್ಟವಿಲ್ಲದೆ ಆಹಾರವನ್ನು ವಿತರಿಸುವುದು ಪರಿಶೀಲನೆಯಿಂದ ಗಮನಕ್ಕೆ ಬಂದಿದೆ.

ಹೀಗಾಗಿ ರಾಜ್ಯದ ಕೆಲ ಪಿಜಿಗಳನ್ನು ಪರಿಶೀಲನೆ ಮಾಡಿದ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ಆಹಾರ ಗುಣಮಟ್ಟವಲ್ಲದ ಪಿಜಿಗಳಿಗೆ ನೋಟೀಸ್ ಜಾರಿ ಮಾಡಿದ್ದಾರೆ. ಇನ್ನೂ ಕೆಲ ಪಿಜಿಗಳಿಗೆ 21,000 ದಂಡ ವಿಧಿಸಲಾಗಿದೆ. ಈ ಮೂಲಕ ಪಿಜಿಗಳಿಗೆ ಇಲಾಖೆ ಬಿಸಿ ಮುಟ್ಟಿಸಿದೆ.
ರಾಜ್ಯದ 305 ಪಿಜಿಗಳ ಮೇಲೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದರು. ಈ ಪೈಕಿ 127 ಪಿಜಿಗಳಲ್ಲಿ ಆಹಾರವನ್ನು ಪರಿಶೀಲನೆಗೆ ಒಳಪಡಿಸಲಾಗಿತ್ತು. ಈ ವೇಳೆ 127 ಪಿಜಿಗಳಲ್ಲಿ ಆಹಾರ ಗುಣಮಟ್ಟ ಕಳಪೆಯಾಗಿರುವುದು ಕಂಡು ಬಂದಿದೆ. ಹೀಗಾಗಿ ಈ ಪಿಜಿಗಳಿಗೆ ಇಲಾಖೆ ನೋಟೀಸ್ ಜಾರಿ ಮಾಡಿದೆ. ಇನ್ನೂ ನಾಲ್ಕು ಪಿಜಿಗಳಿಗೆ 21,000 ದಂಡ ಕೂಡ ವಿಧಿಸಿದೆ.
ಬೆಂಗಳೂರಿನ ಪಿಜಿಯೊಂದರಲ್ಲಿ ಯುವತಿಯರಿಗೆ ಹೆದರಿಸುವ ಪುಂಡ
ಬೆಂಗಳೂರಿನಲ್ಲಿ ಲೇಡೀಸ್ ಪಿಜಿಗಳು ಎಷ್ಟರ ಮಟ್ಟಿಗೆ ಸೇಫ್ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ಕೋರಲಮಂಗಲ ಪಿಜೆಗೆ ನುಗ್ಗಿ ಯುವತಿಗೆ ಚಾಕು ಇರಿದು ಹತ್ಯ ಮಾಡಿದ್ದಾಯ್ತು... ಪಿಜಿಯಲ್ಲಿದ್ದ ಯುವತಿಗೆ ಕಿಸ್ ಕೊಟ್ಟು ಓಡಿ ಹೋಗಿದ್ದೂ ಆಯ್ತು.. ಇತ್ತೀಚೆಗೆ ಪಿಜಿಯಲ್ಲಿದ್ದ ಹೆಣ್ಣೂರಿನ ಅಂಕಣರೆಡ್ಡಿ ಬಡಾವಣೆಯಲ್ಲಿರೋ ಲೇಡಿಸ್ ಪಿಜಿಯಲ್ಲಿ ಇಂಥದ್ದೇ ಘಟನೆ (ನವೆಂಬರ್ 16) ನಡೆದಿದೆ.
ಕತ್ತಲಾದ್ರೆ ಸಾಕು ಲೇಡೀಸ್ ಪಿಜಿಗಳಿಗೆ ನುಗ್ಗೋ ವ್ಯಕ್ತಿಯೊಬ್ಬ ಹೆಣ್ಣೂರಿನ ಪಿಜಿಗೆ ನುಗ್ಗಿ ಇಣುಕಿ ನೋಡೋದಕ್ಕೆ ಶುರು ಮಾಡಿದ್ದನು. ಈ ಪುಂಡನನ್ನು ಕಂಡ ಯುವತಿಯರು ಕೂಗಾಡ್ತಿದ್ದಂತೆ ಎಸ್ಕೇಪ್ ಆಗಿದ್ದಾನು. ಆಕಡೆ ಈಕಡೆ ನೋಡುತ್ತಾ ಲೇಡೀಸ್ ಪಿಜಿ ಕಾಂಪೌಡ್ ಹಾರಿದ್ದ ಈ ವ್ಯಕ್ತಿ ಯುವತಿಯರಿಗೆ ಭಯ ಹುಟ್ಟಿಸಿದ್ದನು. ಈ ಸಂಬಂಧ ಬಾಣಸವಾಡಿ ಠಾಣೆಯಲ್ಲಿ ಪಿಜಿ ಮಾಲೀಕರು ದೂರು ನೀಡಿದ್ದಾರೆ.












Click it and Unblock the Notifications