Ration Card: ನೀವು ಹೊಸ ರೇಷನ್ ಕಾರ್ಡ್ ಪಡೆಯಬೇಕೆ.?-ಫಾಲೋ ಮಾಡಿ ಇಲ್ಲಿನ ಸಿಂಪಲ್ ಟಿಪ್ಸ್
Ration Card: ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿಯೂ ಒಂದಾಗಿದೆ. ಹಾಗಾದರೆ ನೀವು ಹೊಸ ರೇಷನ್ ಕಾರ್ಡ್ (ಬಿಪಿಎಲ್, ಎಪಿಎಲ್)ಗೆ ಅರ್ಜಿ ಸಲ್ಲಿಬೇಕಾದ್ರೆ ಯಾವೆಲ್ಲ ದಾಖಲೆಗಳಿರಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ ಯಾವ ವೆಬ್‌ಸೈಟ್ ಹಾಗೂ ನಂಬರ್‌ಗೆ ಸಂಪರ್ಕಿಸಬಹುಸು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಯಾವೆಲ್ಲಾ ಅರ್ಹತೆಗಳಿರಬೇಕು.?
* ಹೊಸ ಪಡಿತರ ಚೀಟಿಗಾಗಿ ನವ ದಂಪತಿಗಳು ಅರ್ಜಿ ಸಲ್ಲಿಸಬಹುದು.
* ತಮ್ಮ ಕುಟುಂಬದಿಂದ ಹೊರಗೆ ಉಳಿದು ಪ್ರತ್ಯೇಕವಾಗಿ ವಾಸಿಸುವವರು ಅರ್ಜಿ ಸಲ್ಲಿಕೆ ಮಾಡಹುದು. ಅಲ್ಲದೆ, ಹಿಂದಿನ ಪಡಿತರ ಚೀಟಿಯಲ್ಲಿ ನಿಮ್ಮೆ ಹೆಸರಿದ್ದರೆ, ಅದನ್ನು ತೆಗೆಸಬೇಕಾಗುತ್ತದೆ.
* ಕುಟುಂಬದ ಆದಾಯದ ಆಧಾರದ ಮೇಲೆ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಎಂದು ನಿರ್ಧರಿಸಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
* ಆಧಾರ್ ಕಾರ್ಡ್
* ಖಾಯಂ ನಿವಾಸದ ಪುರಾವೆ
* ಮೊಬೈಲ್ ಸಂಖ್ಯೆ
* ಡ್ರೈವಿಂಗ್ ಲೈಸೆನ್ಸ್
* ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಫೋಟೋ
* ಮತದಾರರ ಗುರುತಿನ ಚೀಟಿ
* ಆದಾಯ ಪ್ರಮಾಣ ಪತ್ರ
* ಮನೆಯ ಸದಸ್ಯರ ಬಗ್ಗೆ ಮಾಹಿತಿ
ರೇಷನ್ ಕಾರ್ಟ್‌ಗೆ ಆನ್‌ಲೈನ್ ಅರ್ಜಿ ಸಲ್ಲಿಸುವುದೇಗೆ?
* https://ahara.kar.nic.in/home ಲಾಗಿನ್ ಆಗಿ
* ಸೆಲೆಕ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ
* ಹೊಸ ಪೇಜ್‌ನಲ್ಲಿ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು. ಬಳಿಕ, ತಿಳಿಸಲಾದ ಎಲ್ಲಾ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.
* ಅಪ್‌ಲೋಡ್ ಮಾಡಿದ ನಂತರ ಫಾರ್ಮ್ ಅನ್ನು ಸಬ್‌ಮಿಟ್ ಮಾಡಬೇಕಾಗುತ್ತದೆ.
* ಅರ್ಜಿ ಸಲ್ಲಿಕೆ ವೇಳೆ ನೀವು ನೀಡಿರುವಂತಹ ಎಲ್ಲಾ ದಾಖಲಾತಿಗಳು ಸರಿಯಾಗಿದ್ದರೆ, ನಿಮ್ಮ ಮನೆಗೆ ಹೊಸ ಪಡಿತರ ಚೀಟಿ ಕಳುಹಿಸಲಾಗುತ್ತದೆ.
ಇನ್ನು ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಪಡಿತರ ಚೀಟಿ ಇಲಾಖೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಕರ್ನಾಟಕ ಪಡಿತರ ಚೀಟಿ ಸಹಾಯವಾಣಿ ಸಂಖ್ಯೆ ಟೋಲ್ ಫ್ರೀ 18004259339 ಮತ್ತು ಸಹಾಯವಾಣಿ ಸಂಖ್ಯೆ 1967ಗೆ ಸಂಪರ್ಕಿಸಬಹುದಾಗಿದೆ.
ಪಡಿತರ ಚೀಟಿ ರದ್ದಿಗೆ ನಿರ್ಧಾರ: ಮೂರು ತಿಂಗಳಿನಿಂದ ಪಡಿತರ ಪಡೆಯದವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಲು ಆಹಾರ ಇಲಾಖೆ ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸರ್ಕಾರದ ಇತರ ಯೋಜನೆಗಳ ಪ್ರಯೋಜನೆಗಳನ್ನು ಪಡೆದುಕೊಳ್ಳಲು ಮಾತ್ರ ಬಿಪಿಎಲ್ ಕಾರ್ಡ್ ಬಳಸಿಕೊಳ್ಳುತ್ತಿರುವ ಆರೋಪ ಸರ್ಕಾರದವರೆಗೂ ಬಂದಿದ್ದು, ಆದ್ದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲು ಮುಂದಾಗಿದೆ ಎನ್ನಲಾಗಿದೆ.












Click it and Unblock the Notifications