ಜಗದೀಶ್ ಶೆಟ್ಟರ್‌ಗೆ ಟಿಕೆಟ್, ಬೆಳಗಾವಿಗೆ ಗ್ರ್ಯಾಂಡ್ ಎಂಟ್ರಿ!
ಎಲ್ಲಾ ಅಂದುಕೊಂಡ ರೀತಿಯೇ ನಡೆದಿದ್ದು, ಮತ್ತೆ ಕರ್ನಾಟಕದ ರಾಜಕೀಯ ಅಖಾಡದಲ್ಲಿ ಗೆದ್ದು ಬೀಗಿದ್ದಾರೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ. ಜಗದೀಶ್ ಶೆಟ್ಟರ್ ಅವರನ್ನ ಬಿಜೆಪಿಗೆ ವಾಪಸ್ ಕರೆದುಕೊಂಡು ಬರುವ ಮೂಲಕ, ಹೊಸ ದಾಳ ಉರುಳಿಸಿರುವ ಅವರು ಜಗದೀಶ್ ಶೆಟ್ಟರ್‌ಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ಕೊಡಿಸುವಲ್ಲಿ ಸಕ್ಸಸ್ ಆಗಿದ್ದಾರೆ.
ಬಿಜೆಪಿ ಮತ್ತೊಂದು ಸುತ್ತಿನಲ್ಲಿ ತನ್ನ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದು, ಈ ಪಟ್ಟಿಯಲ್ಲೀಗ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಕೂಡ ಟಿಕೆಟ್ ಪ್ರಕಟಿಸಿದೆ ಬಿಜೆಪಿ ಹೈಕಮಾಂಡ್. ಈ ಮೂಲಕ ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಅವರ ವಿರುದ್ಧ, ಸೃಷ್ಟಿಯಾಗಿದ್ದ ಹುಸಿ ಅಲೆಯನ್ನು ಮೀರಿ ಪ್ರಧಾನಿ ಮೋದಿ & ಬಿಜೆಪಿ ವರಿಷ್ಠರಾದ ಅಮಿತ್ ಶಾ & ನಡ್ಡಾ ಅವರು ಪ್ರಮುಖ ನಿರ್ಣಯ ಕೈಗೊಂಡಿದ್ದಾರೆ. ಹಾಗಾದರೆ ಇದರಿಂದ ಬಿಜೆಪಿ ಪಾಲಿಗೆ ಹೇಗೆ ಲಾಭವಾಗಲಿದೆ? ಯಡಿಯೂರಪ್ಪ ಅವರ ಮಾತಿಗೆ ಬಿಜೆಪಿ ಹೈಕಮಾಂಡ್ ಈ ಮೂಲಕ ಹೇಗೆ ಮಣೆ ಹಾಕಿದೆ? ಆ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಲಿಂಗಾಯತ ಮತಗಳೇ ಇಲ್ಲಿ ನಿರ್ಣಾಯಕ!
ಹೊರ ನೋಟಕ್ಕೆ ಬೆಳಗಾವಿ ಗಡಿ ಜಿಲ್ಲೆಯಾಗಿ ಕಂಡರೂ, ಮರಾಠಿ ಭಾಷಿಕರ ಮತವೇ ಇಲ್ಲಿ ನಿರ್ಣಾಯಕ ಎನಿಸಿದರೂ ಲಿಂಗಾಯತ ಮತಗಳು ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುತ್ತವೆ. ಹೀಗಾಗಿಯೇ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ ಅಭ್ಯರ್ಥಿಗೆ ಮಣೆ ಹಾಕುತ್ತಿದೆ ಬಿಜೆಪಿ. ಇದೀಗ ಕೂಡ ಅಷ್ಟೇ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್‌ನ ನೀಡಿರುವ ಬಿಜೆಪಿ ಹೈಕಮಾಂಡ್, ಕಾಂಗ್ರೆಸ್ ವಿರುದ್ಧ ಹೊಸ ತಂತ್ರ ಮುಂದಿಟ್ಟಿದೆ. ಹಾಗಾದ್ರೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಯಾವ ಪಕ್ಷಕ್ಕೆ ಹೆಚ್ಚು ಒಲವು ಇದೆ? ಬನ್ನಿ ತಿಳಿಯೋಣ.
ಬಿಜೆಪಿ ಪಾಲಿಗೆ ಭದ್ರಕೋಟೆ ಬೆಳಗಾವಿ
ಬೆಳಗಾವಿ ಲೋಕಸಭಾ ಕ್ಷೇತ್ರ ಸುಮಾರು 2 ದಶಕ ಅಂದ್ರೆ 20 ವರ್ಷಗಳಿಂದಲೂ ಬಿಜೆಪಿಯ ಭದ್ರಕೋಟೆ ಆಗಿದೆ. 2004 ರಿಂದ, ಬಿಜೆಪಿ ಭದ್ರಕೋಟೆಯಾಗಿ ಗುರುತಿಸಿಕೊಂಡಿರುವ ಬೆಳಗಾವಿ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ವರ್ಕೌಟ್ ಆಗುತ್ತದೆ. ಇಲ್ಲಿ ಒಟ್ಟು 08 ವಿಧಾನಸಭಾ ಕ್ಷೇತ್ರ ಇದ್ದು. 8 ವಿಧಾನಸಭಾ ಕ್ಷೇತ್ರಗಳ ಪೈಕಿ 3 ಕ್ಷೇತ್ರದಲ್ಲಿ ಬಿಜೆಪಿ ಜಯ ಸಾಧಿಸಿದ್ದು ಐದರಲ್ಲಿ ಕಾಂಗ್ರೆಸ್ ಪಕ್ಷ ವಿಜಯ ಪತಾಕೆ ಹಾರಿಸಿದೆ. ಹೀಗಾಗಿ ಕುತೂಹಲ ಡಬಲ್ ಆಗಿದ್ದರೂ, ಬಿಜೆಪಿ ಇದೀಗ ಹೊಸ ಗೇಮ್ ಪ್ಲ್ಯಾನ್ ಮಾಡಿದೆ. ಇದೇ ಕಾರಣಕ್ಕೆ ಜಗದೀಶ್ ಶೆಟ್ಟರ್ ಅವರಿಗೆ ಮಣೆ ಹಾಕಿದೆ.
ಒಟ್ನಲ್ಲಿ ಈಗ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಿ ಆಯ್ಕೆ ಆಗಿರುವುದು, ಒಂದು ಕಡೆ ಕೆಲವೇ ಕೆಲವು ಬಿಜೆಪಿ ನಾಯಕರಿಗೆ ಅಸಮಾಧಾನ ಮೂಡಿಸಿದೆ. ಈ ಅಸಮಾಧಾನದ ನಡುವೆ ಕೂಡ ಬೆಳಗಾವಿ ಅಖಾಡದಲ್ಲಿ ಜಾತಿ ಲೆಕ್ಕಾಚಾರ ಕೂಡ ಜೋರಾಗಿ ಇದೆ. ಹೀಗಾಗಿಯೇ ಯಾರು ಗೆಲ್ತಾರೆ? ಯಾರಿಗೆ ಸೋಲಿನ ಬುತ್ತಿ? ಅನ್ನೋದು ಇನ್ನೇನು ಕೆಲವೇ ದಿನದಲ್ಲಿ ಗೊತ್ತಾಗಲಿದೆ. ಅಲ್ಲಿಯವರೆಗೂ ಚುನಾವಣೆ ಫೈಟಿಂಗ್ ಮಾತ್ರ ಜೋರಾಗಿ ನಡೆಯುವುದು ಗ್ಯಾರಂಟಿ. ಹೀಗಾಗಿ 2024ರ ಲೋಕಸಭಾ ಚುನಾವಣೆ ಫಲಿತಾಂಶ ಬರುವ ತನಕ ಕಾದು ನೋಡಬೇಕಿದೆ.












Click it and Unblock the Notifications