ಪ್ರಜ್ವಲ್ ರೇವಣ್ಣ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ

ಬೆಂಗಳೂರು, ಡಿ.2 : ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಪುತ್ರ, ಪತ್ನಿಯ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು, ಅದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಎಂಟು ತಿಂಗಳ ಹಿಂದೆ ಆರಂಭಗೊಂಡಿದ್ದ ಖಾತೆ ಬಗ್ಗೆ ಪೊಲೀಸರಿಗೆ ದೂರು ನೀಡಲು ಪ್ರಜ್ವಲ್ ನಿರ್ಧರಿಸಿದ್ದಾರೆ.

ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಮತ್ತು ಅವರ ತಾಯಿ ಭವಾನಿ ರೇವಣ್ಣ ಹೆಸರಲ್ಲಿ ನಕಲಿ ಫೇಸ್‍ಬುಕ್ ಖಾತೆ ತೆರೆಯಲಾಗಿದೆ. ಈ ನಕಲಿ ಖಾತೆಯ ಮೂಲಕ ಯುವತಿಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ದುರ್ಬಳಕೆ ಮಾಡಿಕೊಂಡಿರುವುದು ತಿಳಿದುಬಂದಿದೆ.

Prajwal Revanna

ನಕಲಿ ಖಾತೆ ತೆರೆದಿರುವ ವ್ಯಕ್ತಿ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ ಹುಟ್ಟಿದ ದಿನಾಂಕ, ಸ್ಥಳ, ಶೈಕ್ಷಣಿಕ ವಿಚಾರಗಳನ್ನು ನಿಖರವಾಗಿ ಹಾಕಿದ್ದ. ಪ್ರಜ್ವಲ್ ಅವರ ನಿಜವಾದ ಖಾತೆಯಿಂದ ಪೋಟೋಗಳನ್ನು ತೆಗೆದುಕೊಂಡು ನಕಲಿ ಖಾತೆಯಲ್ಲಿ ಹಾಕಿದ್ದ. ಆದ್ದರಿಂದ ಇದು ಅಸಲಿ ಖಾತೆ ಎಂದು ನಂಬಿದ ಹಲವರು ಸ್ನೇಹಿತರಾಗುತ್ತಿದ್ದರು. [ಕಪಟ ಜ್ಯೋತಿಷಿಗಳ ವಿರುದ್ಧ ಪ್ರತಿಭಟಿಸಲು ಬನ್ನಿ]

ಎಂಟು ತಿಂಗಳ ಹಿಂದೆ ಆರಂಭವಾದ ಖಾತೆಯಲ್ಲಿ 1500 ಜನ ಸ್ನೇಹಿತರಿದ್ದು, 2 ಸಾವಿರ ಜನರು ಲೈಕ್ ಮಾಡಿದ್ದಾರೆ. ನಕಲಿ ಫೇಸ್‌ಬುಕ್ ಖಾತೆ ವಿಚಾರ ತಿಳಿಯುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಅವರು ಖಾತೆಯನ್ನು ಸ್ಥಗಿತಗೊಳಿಸುವಂತೆ ಕೋರಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲು ನಿರ್ಧರಿಸಿದ್ದಾರೆ. ಪ್ರಜ್ವಲ್ ಸ್ನೇಹಿತರು ನಕಲಿ ಖಾತೆಯ ಸ್ಕ್ರೀನ್‌ ಶಾಟ್‌ಗಳನ್ನು ತೆಗೆದುಕೊಂಡಿದ್ದು, ದೂರಿನೊಂದಿಗೆ ಸಲ್ಲಿಸಲಿದ್ದಾರೆ.

Facebook

ಅಂದಹಾಗೆ ಪ್ರಜ್ವಲ್ ರೇವಣ್ಣ ಅವರು ಸಾಮಾಜಿಕ ಜಾಲ ತಾಣದಲ್ಲಿ ಸಕ್ರಿಯರಾಗಿದ್ದು, ಅವರ ಅಸಲಿ ಖಾತೆಯಲ್ಲಿ 4,552 ಲೈಕ್‌ಗಳಿವೆ. ತಮ್ಮ ಕಾರ್ಯಕ್ರಮಗಳ ಚಿತ್ರಗಳನ್ನು ಪ್ರಜ್ವಲ್ ಅದರಲ್ಲಿ ನಿರಂತರವಾಗಿ ಅಪ್‌ಲೋಡ್ ಮಾಡುತ್ತಾರೆ. [ಖಾತೆಯ ವಿಳಾಸ ಇಲ್ಲಿದೆ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+