ನೌಕರ ಮರು ನೇಮಕಗೊಂಡ ನಂತರ ಗಳಿಕೆ ರಜೆಗೂ ಅರ್ಹರು

ಧಾರವಾಡ, ಮೇ 28; ಕೆಎಸ್ಆರ್‌ಟಿಸಿ ನೌಕರರಿಗೆ ಕರ್ನಾಟಕ ಹೈಕೋರ್ಟ್‌ ಸಿಹಿಸುದ್ದಿ ನೀಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರ ಮರು ನೇಮಕಗೊಂಡ ನಂತರ ಗಳಿಕೆ ರಜೆಯ ನಗದೀಕರಣಕ್ಕೂ ಅರ್ಹರು ಎಂದು ಹೈಕೋರ್ಟ್ ಆದೇಶ ನೀಡಿದೆ.

ಕೆಎಸ್‌ಆರ್‌ಟಿಸಿ ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್‌ ಅವರ ಪೀಠ ಈ ಆದೇಶ ನೀಡಿದೆ. ಸಿಬ್ಬಂದಿ ವಜಾಗೊಂಡಿದ್ದ ಅವಧಿಗೆ ಗಳಿಕೆ ರಜೆ ನಗದು ಪಡೆಯುವಂತಿಲ್ಲ ಎಂಬ ಸಾರಿಗೆ ಸಂಸ್ಥೆಯ ವಾದ ಹೈಕೋರ್ಟ್ ಒಪ್ಪಿಲ್ಲ.

Karnataka State Road Transport Corporation

ಒಮ್ಮೆ ಉದ್ಯೋಗಿ ಅಥವಾ ನೌಕರಗಳಿಕೆ ರಜೆ ಪಡೆಯಲು ಅರ್ಹನಾದರೆ ಆತ ಅದರ ನಗದೀಕರಣಕ್ಕೂ ಸಹಜವಾಗಿಯೇ ಅರ್ಹನಾಗಿರುತ್ತಾನೆ. ಅದರಂತೆ ಸಿಬ್ಬಂದಿಗೆ ಗಳಿಕೆ ರಜೆ ನಗದು ಪಾವತಿಸಬೇಕು ಎಂದು ಕೆಎಸ್ಆರ್‌ಟಿಸಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಏನಿದು ಗಳಿಕೆ ರಜೆ ಪ್ರಕರಣ?; 1977ರಲ್ಲಿ ಕೆಎಸ್ಆರ್‌ಟಿಸಿ ನಿರ್ವಾಹಕರಾಗಿ ನೇಮಕಗೊಂಡಿದ್ದನ ವಿ. ನಾಗರಾಜ್ 2012ರ ಜುಲೈನಲ್ಲಿ ನಿವೃತ್ತರಾಗಿದ್ದರು. 1991ರಲ್ಲಿ ಅವರು ಕಾರ್ಯ ಲೋಪದ ಆರೋಪದಡಿ ಸೇವೆಯಿಂದ ವಜಾಗೊಂಡಿದ್ದರು. ಆಗ ಅವರು ಕಾರ್ಮಿಕ ನ್ಯಾಯಾಲಯದ ಮೊರೆ ಹೋಗಿದ್ದರು. 1993ರಲ್ಲಿ ನ್ಯಾಯಾಲಯ ಮರು ನೇಮಕ ಮಾಡಿಕೊಳ್ಳಬೇಕು. ಎಲ್ಲಾ ಭತ್ಯೆ ಮತ್ತು ಬಾಕಿ ವೇತನ ನೀಡಬೇಕು ಎಂದು ಆದೇಶ ನೀಡಿತ್ತು.

Karnataka State Road Transport Corporation

ಆದರೆ ಕೆಎಸ್‌ಆರ್‌ಟಿಸಿಯು ಹೊಸ ಸುತ್ತೋಲೆಯನ್ನು ಹೊರಡಿಸಿ, 300 ರಜೆಗಳ ಬದಲಿಗೆ 246 ಗಳಿಕೆ ರಜೆಗಳಿಗೆ ಮಾತ್ರ ನಗದು ನೀಡಲಾಗುವುದು ಎಂದು ಹೇಳಿತ್ತು. ಇದರಿಂದ ನಾಗರಾಜ್ ಮತ್ತೆ ಕಾರ್ಮಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ವಿ. ನಾಗರಾಜ್‌ಗೆ 1991ರ ಜ.14ರಿಂದ 1993ರ ಜ.7ರವರೆಗಿನ 82 ದಿನಗಳ ರಜಾ ಗಳಿಕೆಯ ನಗದು ಸಂಬಂಧ 1.09 ಲಕ್ಷವನ್ನು ಶೇ 12 ರಷ್ಟು ಬಡ್ಡಿದರಲ್ಲಿ ಪಾವತಿ ಸುವಂತೆ ಕೆಎಸ್‌ಆರ್‌ಟಿಸಿಗೆ ಆದೇಶ ಕೊಟ್ಟಿತ್ತು.

ಇದನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಕೆಎಸ್‌ಆರ್‌ಟಿಸಿ ಮೇಲ್ಮನವಿ ಸಲ್ಲಿಕೆ ಮಾಡಿತ್ತು. ನಿಗದಿತ ಅವಧಿಯಲ್ಲಿ ಕಾರ್ಯ ನಿರ್ವಹಣೆ ಮಾಡದ ನಾಗರಾಜ್ ಅವರು ಗಳಿಕೆ ನಗದು ರಜೆ ಪ್ರಯೋಜನ ಪಡೆಯಲು ಅರ್ಹರಲ್ಲ ಎಂದು ಹೇಳಿತ್ತು. ಆದರೆ ಕೋರ್ಟ ಈ ವಾದವನ್ನು ತಳ್ಳಿ ಹಾಕಿದೆ.

ರಜೆ ನಿರ್ವಹಣಾ ಸೌಲಭ್ಯ; ಕೆಎಸ್ಆರ್‌ಟಿಸಿ ನಿಗಮದ ಘಟಕಗಳಲ್ಲಿ ಚಾಲಕ, ನಿರ್ವಾಹಕ ಮತ್ತು ಚಾಲಕ ಕಂ ನಿರ್ವಾಹಕ ಸಿಬ್ಬಂದಿಗಳಗೆ ಮೊಬೈಲ್ ಮುಖಾಂತರ ರಜೆ ನಿರ್ವಹಣಾ ವ್ಯವಸ್ಥೆಯನ್ನು 2019ರಲ್ಲಿ ಜಾರಿಗೆ ತರುವ ಕುರಿತು ಆದೇಶ ಹೊರಡಿಸಿತ್ತು.

ನಿಗಮವು ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೇವೆ ಒದಗಿಸಲು ಆಡಳತ ವ್ಯವಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಕಾರ್ಯಾಚರಣೆಯನ್ನು ಸುಧಾರಿಸಲು ಹಲವಾರು ಯೋಜನೆಗಳನ್ನು ರೂಪಿಸಿ, ಜಾರಿಗೆ ತಂದಿತ್ತು. ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುವ ನೌಕರರು ನಿಯಮಗಳ ಅನ್ವಯ ವಿವಿಧ ಭೀತಿಯ ಈ ರಜೆಗಳನ್ನು ಪಡೆದುಕೊಳ್ಳಲು ಮತ್ತು ರಜೆ ಮಂಜೂರಾತಿಯಲ್ಲಿ, ಪಾರದರ್ಶಕತೆಯನ್ನು ತರಲು ಲೀವ್ ಕಿಯೋಸ್ಕ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು.

ಲೀವ್ ಕಿಯೋಸ್ಕ್ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕವಾಗಿ ಹಾಗೂ ಸಿಬ್ಬಂದಿ ಸ್ನೇಹಿಯಾಗಿ ಉದ್ಯೋಗೀಕರಿಸುವ ಸದುದ್ದೇಶದಿಂದ ಆನ್ ಲೈನ್ ಮೂಲಕ ರಜೆ ಪಡೆಯುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿತ್ತು. ಸದರಿ ವ್ಯವಸ್ಥೆಯ ರೂಪರೇಷೆ ಮತ್ತು ಸ್ವರೂಪವನ್ನು ರೂಪಿಸಿ ಬಿಡುಗಡೆ ಮಾಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+