ಸ್ಥಳೀಯ ಸಂಸ್ಥೆಗಳ ಫೈಟ್: ಮತ ಎಣಿಕೆಗೆ ಸಿದ್ಧತೆ, ಸಂಜೆ ವೇಳೆಗೆ ಫಲಿತಾಂಶ

ಬೆಂಗಳೂರು, ಡಿ.30: ರಾಜ್ಯದಲ್ಲಿ ಡಿ.27 ರಂದು ನಡೆದಿದ್ದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಯ ಮತ ಎಣಿಕೆ ಬುಧವಾರ (ಡಿ.30) ಪ್ರಾರಂಭವಾಗಲಿದೆ.

ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸಂಜೆಯ ವೇಳೆಗೆ ಫಲಿತಾಂಶದ ವಿವರ ಲಭ್ಯವಾಗುವ ಸಾಧ್ಯತೆ ಇದೆ.

ಚಿಕ್ಕಮಗಳೂರು, ತುಮಕೂರು ಜಿಲ್ಲೆಯ ಶಿರಾ, ಗದಗ-ಬೆಟಗೇರಿ ಹಾಗೂ ನೂತನ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರಸಭೆಗಳಿಗೆ ಚುನಾವಣೆ ನಡೆಯುತ್ತದೆ. ಬೆಳಗಾವಿ ಜಿಲ್ಲೆಯ ಅಥಣಿ, ಧಾರವಾಡ ಜಿಲ್ಲೆಯ ಅಣ್ಣಿಗೇರಿ ಹಾಗೂ ಹಾವೇರಿ ಜಿಲ್ಲೆಯ ಬಂಕಾಪುರ ಪುರಸಭೆ ಸೇರಿ 209 ವಾರ್ಡ್‌ಗಳಿಗೆ ಚುನಾವಣೆ ನಡೆದಿತ್ತು.

Election Result: Karnataka 58 Urban Local Body Result today

ಇದಲ್ಲದೆ ವಿವಿಧ ಕಾರಣಗಳಿಂದ ತೆರವಾಗಿರುವ ಚಾಮರಾಜನಗರ ಸಭೆಯ 6, ಹರಿಹರ ನಗರಸಭೆಯ 21, ದಾಂಡೇಲಿ ನಗರಸಭೆಯ 18, ಗೌರಿಬಿದನೂರು ನಗರಸಭೆಯ 10, ಮೂಡಲಗಿ ಪುರಸಭೆಯ 9, ಚಡಚಣ ಪಟ್ಟಣ ಪಂಚಾಯಿತಿಯ 4, ಸೇಡಂ ಪುರಸಭೆಯ 13, ಹಾನಗಲ್ ಪುರಸಭೆಯ 19 ಹಾಗೂ ಜಮಖಂಡಿ ನಗರಸಭೆಯ 9 ಸ್ಥಾನಗಳಿಗೂ ಚುನಾವಣೆ ನಡೆದಿದೆ.

ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳು ಸೇರಿ 1185 ವಾರ್ಡ್‌ಗಳಿಗೆ ಮತದಾನ ಆರಂಭವಾಗಿದೆ. ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಸಿಪಿಐ (ಎಂ), ಎಸ್‌ಡಿಪಿಐ, ಅಮ್ ಆದ್ಮಿ ಪಕ್ಷ, ಕೆ.ಆರ್.ಎಸ್. ಸಹಿತ ಹಲವು ಪಕ್ಷಗಳು ಹಾಗೂ ಪಕ್ಷೇತರರು ಸೇರಿ 4,961 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗುತ್ತದೆ.

Election Result: Karnataka 58 Urban Local Body Result today

ಅವಿರೋಧ ಆಯ್ಕೆ:

ಹೆಬ್ಬಗೋಡಿ ನಗರಸಭೆಯಲ್ಲಿ ಈಗಾಗಲೇ ಐವರ ಅವಿರೋಧ ಆಯ್ಕೆಯಾಗಿದ್ದು, 26 ಅಭ್ಯರ್ಥಿಗಳ ಫಲಿತಾಂಶ ಬರಬೇಕಿದೆ. ವಿಜಯಪುರ ಜಿಲ್ಲೆಯ ನಲತವಾಡ ಪಟ್ಟಣ ಪಂಚಾಯಿತಿಯಲ್ಲಿ ಇಬ್ಬರು ಅವಿರೋಧ ಆಯ್ಕೆಯಾಗಿದ್ದು, 14 ವಾರ್ಡ್‌ಗಳ ಫಲಿತಾಂಶ ಬರಬೇಕಿದೆ. ಅರಭಾವಿ ಪಟ್ಟಣ ಪಂಚಾಯಿತಿಯಲ್ಲಿ ಒಬ್ಬರು ಅವಿರೋಧ, ಕಮತಗಿಯಲ್ಲಿ ಒಬ್ಬರು, ಬೆಳಗಲಿ ಪಟ್ಟಣ ಪಂಚಾಯತ್‌ನಲ್ಲಿ ಒಬ್ಬರು, ತಾವರಗೇರಾ ಹಾಗೂ ಭಾಗ್ಯನಗರ ಪಟ್ಟಣ ಪಂಚಾಯತ್‌ನಲ್ಲಿ ತಲಾ ಇಬ್ಬರು ಅವಿರೋಧ ಆಯ್ಕೆಯಾಗಿದ್ದಾರೆ.

ರಾಜಕೀಯ ಪಕ್ಷಗಳ ಕಣ್ಣು:

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶದ ಮೇಲೆ ರಾಜಕೀಯ ಪಕ್ಷಗಳು ತೀವ್ರ ಕಣ್ಣು ನೆಟ್ಟಿವೆ. ಇದು ರಾಜಕೀಯ ಪಕ್ಷಗಳಿಗೆ ಸ್ಥಳೀಯ ಮಟ್ಟದಲ್ಲಿ ಬಲ ನೀಡುವಂತಹ ಸಾಮರ್ಥ್ಯ ಹೊಂದಿರುವ ಕಾರಣ ಎಲ್ಲರೂ ತಮ್ಮ ಬಲ ಹೆಚ್ಚಿಸಿಕೊಳ್ಳಲು ಹವಣಿಸುತ್ತಿದ್ದಾರೆ.

Recommended Video

      ಟೀಂ‌ ಇಂಡಿಯಾಗೆ ಅಂದು‌ ಗೇಲಿ‌ಮಾಡಿದ್ದಕ್ಕೆ ಇಂದು ಮಾನ‌ಕಳೆದುಕೊಂಡ ಮೈಕೆಲ್ ವಾನ್ | Oneindia Kannada

      ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದ ನಂತರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿದ್ದು, ಸ್ಥಳೀಯ ಮಟ್ಟದ ನಾಯಕತ್ವಗಳಿಗೆ ಇದು ನಿರ್ಣಾಯಕ ಆಗಲಿದೆ. ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆ ಬಹುತೇಕ ಕಡೆಗಳಲ್ಲಿ ನೇರಾನೇರ ಫೈಟ್ ಕಂಡುಬಂದಿತ್ತು. ಯಾರ ಕೈ ಮೇಲಾಗಲಿದೆ ಎಂಬುದು ಸಂಜೆಯ ವೇಳೆಗೆ ಚಿತ್ರಣ ಹೊರಬರಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+