ಚುನಾವಣೆಯಿಂದಾಗಿ ಸೀರೆಗೆ ಬಂತು ಭರ್ಜರಿ ಬೇಡಿಕೆ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 12: ಇದು ಸಾಲು ಸಾಲು ಮದುವೆ ಸಮಾರಂಭಗಳು ನಡೆಯುವ ಸೀಸನ್. ಈ ವೇಳೆ ಬಟ್ಟೆ ಅಂಗಡಿಗಳು ಗ್ರಾಹಕರಿಂದ ತುಂಬಿಕೊಳ್ಳುವುದು ಸಹಜ. ಆದರೆ, ಈ ಬಾರಿ ಬಟ್ಟೆ ಅಂಗಡಿಗಳಲ್ಲಿ ಸೀರೆಗೆ ಬೇಡಿಕೆ ದುಪ್ಪಟ್ಟಾಗಿದೆ.

ಲೋಡ್‌ಗಟ್ಟಲೆ ಸೀರೆಗಳನ್ನು ವ್ಯಾಪಾರಿಗಳು ತರಿಸಿಕೊಳ್ಳುತ್ತಿದ್ದಾರೆ. ಈ ಸೀರೆಗಳು ನೀರಿನಂತೆ ಖರ್ಚಾಗುತ್ತಿವೆ. ಇಲ್ಲಿ ಹತ್ತಾರು ಜನರು ಗುಂಪುಗೂಡಿ ಖರೀದಿಗೆ ಹೋಗುವುದಿಲ್ಲ. ಗ್ರಾಹಕರು ಗಂಟೆಗಟ್ಟಲೆ ಕುಳಿತು ಇದೇ ಬಣ್ಣ, ವಿನ್ಯಾಸ, ಗುಣಮಟ್ಟ ಬೇಕು ಎಂದು ಪಟ್ಟು ಹಿಡಿಯುವುದಿಲ್ಲ. ಅಂಗಡಿಯವರು ಮಾಡಿಟ್ಟ ಪ್ಯಾಕ್‌ಗಳನ್ನು ಕೊಂಡೊಯ್ಯುತ್ತಾರೆ. ಲಕ್ಷಗಟ್ಟಲೆ ರೂಪಾಯಿ ವ್ಯವಹಾರ ಇಲ್ಲಿ ನಡೆಯುತ್ತದೆ.

ಬಿಜೆಪಿ ಪಾಲಿಗೆ ಈ ಬಾರಿ ಕರ್ನಾಟಕದ ಚುನಾವಣೆ ಎಂಥ ಚದುರಂಗದಾಟ!

ಚುನಾವಣೆಯ ಕಾರಣದಿಂದ ಬಟ್ಟೆ ಅಂಗಡಿಗಳಲ್ಲಿ ಸೀರೆ ವ್ಯಾಪಾರ ಬಲು ಜೋರಾಗಿದೆ. ಮಹಿಳಾ ಮತದಾರರನ್ನು ಸೆಳೆಯಲು ಸೀರೆ ಮತ್ತು ಆಭರಣಗಳ ಆಮಿಷವೊಡ್ಡಲು ರಾಜಕೀಯ ಪಕ್ಷಗಳು ಮುಂದಾಗಿವೆ. 100-250 ರೂಪಾಯಿವರೆಗಿನ ಶಿಫಾನ್ ಸೀರೆಗಳಿಗೆ ಬಟ್ಟೆ ಅಂಗಡಿಗಳಲ್ಲಿ ಬಲು ಬೇಡಿಕೆ ಉಂಟಾಗಿದೆ.

Election effect: high demands for sarees

ಮುಖ್ಯವಾಗಿ, ಬಟ್ಟೆ ವ್ಯಾಪಾರಕ್ಕೆ ಹೆಸರಾಗಿರುವ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಲೋಡ್‌ಗಟ್ಟಲೆ ಸೀರೆ ಮಾರಾಟವಾಗುತ್ತಿದೆ. ಸುಮಾರು 2 ಕೋಟಿಗೂ ಹೆಚ್ಚಿನ ಮೌಲ್ಯದ ಸೀರೆಗಳ ವ್ಯಾಪಾರ ನಡೆದಿದೆ ಎನ್ನಲಾಗುತ್ತಿದೆ.

ಚುನಾವಣೆ ಬಂತು... ಸೀರೆಗಳ ಕಾರುಬಾರು ಜೋರೋ ಜೋರು!

ರಾಜಕೀಯ ಮುಖಂಡರು ನೇರವಾಗಿ ಸೀರೆಗಳನ್ನು ಖರೀದಿಸಲು ಮುಂದಾಗುತ್ತಿಲ್ಲ. ಕೆಲವು ಏಜೆಂಟ್‌ಗಳ ಮೂಲಕ ಬೇರೆ ಬೇರೆ ಮಳಿಗೆಗಳಲ್ಲಿ ಸೀರೆಗಳನ್ನು ಕೊಳ್ಳುತ್ತಿದ್ದಾರೆ. ಚಿಕ್ಕಪೇಟೆಯಲ್ಲಿ ನೂರಾರು ಸೀರೆ ಅಂಗಡಿಗಳಿದ್ದು, ಬಹುತೇಕ ಎಲ್ಲ ಅಂಗಡಿಗಳಲ್ಲಿಯೂ ಸೀರೆಗಳಿಗೆ ಬೇಡಿಕೆ ಹೆಚ್ಚಿದೆ.

Election effect: high demands for sarees

ಮಧ್ಯವರ್ತಿಗಳು ಒಂದು ಸೀರೆ ಮೇಲೆ 20-30 ರೂಪಾಯಿವರೆಗೆ ಕಮಿಷನ್ ಪಡೆದುಕೊಳ್ಳುತ್ತಿದ್ದಾರೆ. ಈ ಮೂಲಕ ಬಟ್ಟೆ ವ್ಯಾಪಾರಿಗಳಿಗಿಂತಲೂ ಅಧಿಕ ಲಾಭ ಮಾಡಿಕೊಳ್ಳುತ್ತಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಟಿಕೆಟ್ ರಾಜಕೀಯ

ಹೆಚ್ಚಿನ ಸೀರೆಗಳ ಖರೀದಿಗಾಗಿ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳುತ್ತಿದ್ದಾರೆ. ಖರೀದಿಸಿದ ಸೀರೆಗಳನ್ನು ಆಯೋಗದ ಕಣ್ತಪ್ಪಿಸಿ ಒಮ್ಮೆಲೆ ಸಾಗಿಸುವುದು ಕಷ್ಟವಾಗುವ ಕಾರಣ, ಕೆಲವು ಬಂಡಲ್‌ಗಳಷ್ಟು ಸೀರೆಗಳನ್ನು ಮಾತ್ರವೇ ಸಾಗಿಸುತ್ತಿದ್ದಾರೆ. ಇನ್ನು ಕೆಲವರು ಟ್ರಸ್ಟ್‌ಗಳ ಹೆಸರಿನಲ್ಲಿ ಸೀರೆ ಖರೀದಿ ನಡೆಸುತ್ತಿದ್ದಾರೆ.

Election effect: high demands for sarees

ಆಭರಣಕ್ಕೂ ಡಿಮ್ಯಾಂಡ್ ಹೆಚ್ಚಳ
ಅಕ್ಷಯ ತೃತೀಯದಂದು ಆಭರಣ ಖರೀದಿಗೆ ಜನರು ಆಭರಣ ಅಂಗಡಿಗಳಿಗೆ ಮುಗಿಬೀಳುವುದು ಸಹಜ. ಆಭರಣ ವ್ಯಾಪಾರಿಗಳು ಸಹ ಆ ದಿನಕ್ಕಾಗಿ ಎದುರು ನೀಡುತ್ತಿದ್ದಾರೆ. ಅದಕ್ಕೂ ಮೊದಲೇ ಅಂಗಡಿಗಳಲ್ಲಿ ಆಭರಣಗಳ ಖರೀದಿ ಜೋರಾಗಿದೆ.

ರಾಜಕೀಯ ಪಕ್ಷಗಳು ಸಹ ಆಭರಣ ಮಳಿಗೆಗಳತ್ತ ಮುಖ ಮಾಡುತ್ತಿದ್ದಾರೆ. ಮಹಿಳಾ ಅಭ್ಯರ್ಥಿಗಳ ಓಲೈಕೆಗೆ ಮೂಗುತಿ, ಕಿವಿಯೋಲೆ ಮುಂತಾದ ಆಭರಣಗಳನ್ನು ಹಂಚುವ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ ಎನ್ನುತ್ತವೆ ಮೂಲಗಳು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Demands for sarees in shops become high due to assembly election. political parties buying lads of sarees to woo female voters

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ