ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮ ಪಂಚಾಯಿತಿ ಚುನಾವಣೆ; ಆಯೋಗದ ಸ್ಪಷ್ಟನೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 14 : ಗ್ರಾಮ ಪಂಚಾಯಿತಿ ಚುನಾವಣೆ ಬಗ್ಗೆ ರಾಜ್ಯ ಚುನಾವಣಾ ಆಯೋಗ ಸ್ಪಷ್ಟನೆಯನ್ನು ನೀಡಿದೆ. ಚುನಾವಣೆ ಬಗ್ಗೆ ನಕಲಿ ರಾಜ್ಯಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂದು ಆಯೋಗ ಹೇಳಿದೆ.

ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಏಪ್ರಿಲ್ 5 ಮತ್ತು 9ರಂದು ನಡೆಸಲಾಗುತ್ತದೆ ಎಂಬ ನಕಲಿ ರಾಜ್ಯಪತ್ರ ಹರಿದಾಡುತ್ತಿದೆ. ಆಯೋಗವು ಚುನಾವಣೆ ಸಂಬಂಧದಲ್ಲಿ ಇದುವರೆಗೆ ಯಾವುದೇ ದಿನಾಂಕವನ್ನು ಗೊತ್ತು ಪಡಿಸಿರುವುದಿಲ್ಲ ಎಂದು ಆಯೋಗ ಸ್ಪಷ್ಟನೆ ನೀಡಿದೆ.

ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡಿಕೆ ವಿರುದ್ಧ ಹೈಕೋರ್ಟ್‌ಗೆ ಪಿಐಎಲ್ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡಿಕೆ ವಿರುದ್ಧ ಹೈಕೋರ್ಟ್‌ಗೆ ಪಿಐಎಲ್

Election Commission Clarification On Gram Panchayat Elections

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ರಾಜ್ಯ ಚುನಾವಣಾ ಆಯೋಗದ ಹೆಸರಿನಲ್ಲಿರುವ ಆದೇಶವು ನಕಲಿಯಾಗಿರುತ್ತದೆ. ಈ ಆದೇಶದ ಮೂಲಕ ಸಾರ್ವಜನಿಕರ ಗಮನಕ್ಕೆ ಇದನ್ನು ತರಲಾಗುತ್ತಿದೆ ಎಂದು ಆಯೋಗ ತಿಳಿಸಿದೆ.

ಗ್ರಾಮ ಪಂಚಾಯಿತಿ ಚುನಾವಣೆ: ಚುನಾವಣಾ ಆಯೋಗದ ಮಹತ್ವದ ನಿರ್ಧಾರಗ್ರಾಮ ಪಂಚಾಯಿತಿ ಚುನಾವಣೆ: ಚುನಾವಣಾ ಆಯೋಗದ ಮಹತ್ವದ ನಿರ್ಧಾರ

ಪ್ರೌಢ ಶಿಕ್ಷಣ : ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಪ್ರೌಢ ಶಿಕ್ಷಣದಲ್ಲಿ ಉತ್ತೀರ್ಣರಾಗಿರಬೇಕು. ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್‌ಗಳನ್ನು ಕರ್ನಾಟಕದಲ್ಲಿ ಕಡ್ಡಾಯವಾಗಿ ಹೊಂದಿರಬೇಕು ಎಂಬುದಾಗಿ ಚುನಾವಣಾ ಆಯೋಗ ಆದೇಶಿಸಿದೆ ಎಂಬ ನಕಲಿ ರಾಜ್ಯ ಪತ್ರ ಹರಿದಾಡುತ್ತಿತ್ತು.

ಶಿರಾ ಉಪ ಚುನಾವಣೆ ಖಚಿತ; ಆರ್. ಆರ್. ನಗರ, ಮಸ್ಕಿಗೆ ಕಾನೂನು ಅಡ್ಡಿ! ಶಿರಾ ಉಪ ಚುನಾವಣೆ ಖಚಿತ; ಆರ್. ಆರ್. ನಗರ, ಮಸ್ಕಿಗೆ ಕಾನೂನು ಅಡ್ಡಿ!

ಚುನಾವಣಾ ಆಯೋಗ ಮತದಾನ ನಡೆಸಲು ದಿನಾಂಕ ನಿಗದಿ ಮಾಡಿಲ್ಲ. ಇಂತಿಷ್ಟು ಶಿಕ್ಷಣವನ್ನು ಹೊಂದಿರಬೇಕು ಹಾಗೂ ಇಂತಿಷ್ಟು ಮಕ್ಕಳನ್ನು ಹೊಂದಿರಬೇಕು ಎಂಬ ಬಗ್ಗೆ ಯಾವುದೇ ಆದೇಶವನ್ನು ಹೊರಡಿಸಿರುವುದಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ.

Recommended Video

ಭಾರತದ ಕಣ್ತಪ್ಪಿಸಿ ಸರೋವರದ ಬಳಿ ಬಂದ ಚೀನಾ. | Oneindia Kannada

ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ಆಯೋಗದ ಹೆಸರಿನಲ್ಲಿ ಹರಿದಾಡುತ್ತಿರುವ ಆದೇಶವೂ ನಕಲಿಯಾಗಿದೆ. ಜನರು ಇಂತಹ ಯಾವುದೇ ಆದೇಶಗಳನ್ನು ನಂಬಬಾರದು ಎಂದು ಚುನಾವಣಾ ಆಯೋಗ ಹೇಳಿದೆ.

English summary
Karnataka election commission issued the clarification about gram panchayat elections. Election commission not finalized any date for elections. Fake circular spreading in the social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X