7th Pay Commission: ಸರ್ಕಾರದ ಮೇಲೆ ಆಗುವ ಆರ್ಥಿಕ ಪರಿಣಾಮಗಳೇನು?

ಬೆಂಗಳೂರು, ಅಕ್ಟೋಬರ್ 22: ಕರ್ನಾಟಕ ಸರ್ಕಾರಕ್ಕೆ ವರದಿ ನೀಡಿರುವ ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ವೇತನ, ಭತ್ಯೆ, ಪಿಂಚಣಿಗಳ ಏರಿಕೆಗಳ ಕುರಿತು ಹಲವು ಶಿಫಾರಸು ಮಾಡಿದೆ. ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ 558 ಪುಟಗಳ ಸಂಪುಟ-1ರ ವರದಿಯನ್ನು ಒಪ್ಪಿಕೊಂಡಿದೆ. ಆಗಸ್ಟ್‌ನಿಂದಲೇ ಜಾರಿಗೆ ಬರುವಂತೆ ಆಯೋಗದ ವರದಿ ಜಾರಿಗೊಳಿಸಿದೆ. ಆದರೆ ಇದರಿಂದಾಗಿ ಸರ್ಕಾರದ ಮೇಲೆ ಆಗುವ ಆರ್ಥಿಕ ಪರಿಣಾಮಗಳೇನು?.

ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ವೇತನ ಪರಿಷ್ಕರಣೆಯ ಆರ್ಥಿಕ ಪರಿಣಾಮಗಳು ಎಂದು ಸಹ ತನ್ನ ವರದಿಯಲ್ಲಿ ವಿವರಣೆ ನೀಡಿದೆ. ವೇತನ ಮತ್ತು ಭತ್ಯೆಗಳು, ಪಿಂಚಣಿ ಮತ್ತು ಇತರೆ ನಿವೃತ್ತಿ ವೇತನ ಸೌಲಭ್ಯಗಳ ಪರಿಷ್ಕರಣೆಯ ಕುರಿತು ಆಯೋಗದ ಶಿಫಾರಸುಗಳು, ಆರ್ಥಿಕ ವರ್ಷ 2022-23ನೇ ಸಾಲಿನಲ್ಲಿನ ರೂ.74,081 ಕೋಟಿಗಳ ವಾಸ್ತವಿಕ ವೆಚ್ಚಕ್ಕೆ ಹೋಲಿಸಿದರೆ, ರಾಜ್ಯ ಸರ್ಕಾರಕ್ಕೆ ಪ್ರತಿ ವರ್ಷಕ್ಕೆ ರೂ.17,440.15 ಕೋಟಿಗಳಷ್ಟು ಹೆಚ್ಚುವರಿ ವೆಚ್ಚ ಆಗುವುದೆಂದು ಅಂದಾಜು ಮಾಡಲಾಗಿದೆ.

Economic Impact Of Karnatakas 7th State Pay Commission Report Implementation

ಇದು ಆರ್ಥಿಕ ವರ್ಷ 2022-23ರಲ್ಲಿನ ವಾಸ್ತವಿಕ ವೆಚ್ಚದಲ್ಲಿ ಶೇ 23.55ರ ಹೆಚ್ಚಳವನ್ನು ಸೂಚಿಸುತ್ತದೆ. ಹೆಚ್ಚುವರಿ ವೆಚ್ಚದ ವಿವರಗಳನ್ನು ನೀಡಲಾಗಿದೆ ಎಂದು ಹೇಳಿದೆ. ವೇತನ, ಪಿಂಚಣಿ ಮತ್ತು ಭತ್ಯೆಗಳ ಪರಿಷ್ಕರಣೆಯ ಕಾರಣದಿಂದ ಆಗುವ ಹೆಚ್ಚುವರಿ ವೆಚ್ಚ ಒಟ್ಟು 18,240.15 ಕೋಟಿ ರೂ.ಗಳು. ಈ ಆಯೋಗದ ಪರಿಶೀಲನಾರ್ಹ ಅಂಶಗಳ ವ್ಯಾಪ್ತಿಯ ಅಡಿಯಲ್ಲಿ ಒಳಗೊಂಡಿರದ ನೌಕರರ ವೇತನ ಮತ್ತು ಭತ್ಯೆಗಳ ಮೇಲಿನ ವೆಚ್ಚ ಕಡಿಮೆಗೊಳಿಸಿದ್ದು, -8000. ಈ ಆಯೋಗದ ಶಿಫಾರಸುಗಳ ಮೇಲಿನ ಹೆಚ್ಚುವರಿ ವೆಚ್ಚ 17,440.15 ಕೋಟಿ ರೂ.ಗಳು ಎಂದು ಹೇಳಿದೆ.

ಯಾವುದಕ್ಕೆ ಎಷ್ಟು ವೆಚ್ಚ?; ಇವುಗಳಲ್ಲಿ ವೇತನ/ ಪರಿಷ್ಕೃತ ವೇತನಕ್ಕೆ ಲೆಕ್ಕ ಹಾಕಲಾದ ವಾರ್ಷಿಕ ಹೆಚ್ಚುವರಿ ವೆಚ್ಚ 7408.79 ಕೋಟಿ ರೂ.ಗಳು. ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆ 824 ಕೋಟ ರೂ.ಗಳು. ಇತರೆ ಭತ್ಯೆಗಳು 400 ಕೋಟಿ ರೂ.ಗಳು. ವೈದ್ಯಕೀಯ ಭತ್ಯೆಗಳು 109.90 ಕೋಟಿ ರೂ.ಗಳು. ಪಿಂಚಣಿ ಮತ್ತು ಕುಟುಂಬ ಪಿಂಚಣಿ 3791.43 ಕೋಟಿ ರೂ.ಗಳು. ಎನ್.ಪಿ.ಎಸ್. ವಂತಿಗೆ 530.45 ಕೋಟಿ ರೂ.ಗಳು. ಮರಣ ಮತ್ತು ವಿವೃತ್ತಿ ಉಪದಾನ 1083.56 ಕೋಟಿ ರೂ.ಗಳು.

ರಜೆ ನಗದೀಕರಣ 241.02 ಕೋಟಿ ರೂ.ಗಳು, ನಿವೃತ್ತಿ ವೇತನದ ಪರಿರ್ವತನೆ 563.41 ಕೋಟಿ ರೂ.ಗಳು., ಹೆಚ್ಚುವರಿ ಪಿಂಚಣಿ/ ಕುಟುಂಬ ಪಿಂಚಣಿ 373.89 ಕೋಟಿ ರೂ.ಗಳು, ನಿವೃತ್ತಿದಾರರಿಗೆ ವೈದ್ಯಕೀಯ ಸೌಲಭ್ಯ 315 ಕೋಟಿ ರೂ.ಗಳು. ಅನುದಾನಿತ ಸಂಸ್ಥೆಗಳ (ವೇತನಾನುದಾನ) 2599.30 ಕೋಟಿ ರೂ.ಗಳು.

ಆರ್ಥಿಕ ಇಲಾಖೆಯಿಂದ ಪಡೆಯಲಾದ ಆರ್ಥಿಕ ವರ್ಷ 2022-23ರ ವಾಸ್ತವಿಕ ವೆಚ್ಚಗಳ ಅಂಕಿ ಸಂಖ್ಯೆಗಳ ಆಧಾರದ ಮೇಲೆ ಆರ್ಥಿಕ ವರ್ಷ 2024-25ನೇ ಸಾಲಿಗಾಗಿ ಹಚ್ಚುವರಿ ಆರ್ಥಿಕ ಪರಿಣಾಮಗಳನ್ನು ಅಂದಾಜಿಸಿದೆ. ಆರ್ಥಿಕ ವರ್ಷ 2023-24ರ ಸಾಲಿಗಾಗಿ ವೆಚ್ಚದಲ್ಲಿನ ಹೆಚ್ಚುತ್ತಿರುವ ಬೆಳವಣಿಗೆಯನ್ನು ಒಳಗೊಂಡಿರುತ್ತದೆ. ಅಂದಾಜಿಸಲಾದ ಹೆಚ್ಚುವರಿ ವೆಚ್ಚವಾದ ರೂ.17440.15 ಕೋಟಿಗಳು ಅಸ್ತಿತ್ವದಲ್ಲಿರುವ ಮಧ್ಯಂತರ ಪರಿಹಾರದ ಮೇಲಿನ ವೆಚ್ಚವನ್ನು ಒಳಗೊಂಡಿರುತ್ತದೆ ಎಂದು ಆಯೋಗ ಹೇಳಿದೆ.

ಇತ್ತೀಚೆಗೆ ತಿಳಿಸಿದಂತೆ, 2022-23ನೇ ಸಾಲಿನಲ್ಲಿ ವೇತನ, ಪಿಂಚಣಿಗಳು ಮತ್ತು ಅನುದಾನಿತ ಸಂಸ್ಥೆಗಳ ವೇತನಾನುದಾನದ ವೆಚ್ಚವು ರೂ. 74,081 ಕೋಟಿಗಳಾಗಿದ್ದು, ಮುಂದಿನ ವರ್ಷ 2023-24ರ ಪರಿಷ್ಕೃತ ಆಯವ್ಯಯ ಅಂದಾಜುಗಳಲ್ಲಿ ವೇತನಗಳಿಗಾಗಿ ರೂ. 65,003 ಕೋಟಿ ಮತ್ತು ನಿವೃತ್ತಿ ವೇತನಗಳಿಗಾಗಿ ರೂ. 25,116 ಕೋಟಿ, ಒಟ್ಟಾಗಿ ರೂ.90,119 ಕೋಟಿಗಳನ್ನು ಮುಂಗಡವಾಗಿ ಒದಗಿಸಲಾಗಿರುತ್ತದೆ. ಇದು ಹಿಂದಿನ ವರ್ಷದ ವೆಚ್ಚಕ್ಕಿಂತ ಶೇ.21.65 ರಷ್ಟು ಹೆಚ್ಚಳವಾಗಿರುವುದನ್ನು ಸೂಚಿಸುತ್ತದೆ ಎಂದು ತಿಳಿಸಿದೆ.

ಹಾಗೆಯೇ, 2024-25ರ ಆಯವ್ಯಯ ಅಂದಾಜುಗಳಲ್ಲಿ ವೇತನಕ್ಕಾಗಿ ರೂ. 80,434 ಕೋಟಿ ಮತ್ತು ಪಿಂಚಣಿಗಳಿಗಾಗಿ ರೂ. 32,355 ಕೋಟಿ, ಒಟ್ಟಾಗಿ ರೂ.1,12,789 ಕೋಟಿಗಳನ್ನು ಒದಗಿಸಲಾಗಿರುತ್ತದೆ. ಇದು 2023-24ರಲ್ಲಿ ಅಂದಾಜಿಸಲಾಗಿರುವುದಕ್ಕಿಂತ ರೂ. 22,570 ಕೋಟಿಗಳಷ್ಟು ಹೆಚ್ಚಳವಾಗಿದ್ದು, ಇದು ಹಿಂದಿನ ವರ್ಷಕ್ಕಿಂತ ಶೇ.25 ರಷ್ಟು ಹೆಚ್ಚಾಗಿರುವುದನ್ನು ತೋರಿಸುತ್ತದೆ.

ವಾಸ್ತವವಾಗಿ, ಎಮ್‌ಟಿಎಫ್‌ಪಿ 2024-28 ರಲ್ಲಿ ನೌಕರರ ವೇತನ ಮತ್ತು ಭತ್ಯೆಗಳು, ಪಿಂಚಣಿಗಳು ಮತ್ತು ಇತರ ನಿವೃತ್ತಿ ವೇತನ ಸೌಲಭ್ಯಗಳ ಪರಿಷ್ಕರಣೆಯ ಕಾರಣದಿಂದ ರೂ. 15,000 ಕೋಟಿಯಿಂದ ರೂ. 20,000 ಕೋಟಿಗಳವರೆಗಿನ ಹೆಚ್ಚುವರಿ ವೆಚ್ಚವನ್ನು ನಿರೀಕ್ಷಿಸಲಾಗಿದೆ. ಆರ್ಥಿಕ ವರ್ಷ 2024-25 ರ ಅಂದಾಜು ಆಯವ್ಯಯದ ಅನುಸಾರ ಅಥವಾ 2024-28 ಎಮ್‌ಟಿಎಫ್‌ಪಿ ಎರಡೂ ರೀತಿಯಲ್ಲಿ ನೋಡಿದಾಗಲೂ ಈ ಆಯೋಗದ ಶಿಫಾರಸ್ಸುಗಳ ಜಾರಿಗಾಗಿ ಹೆಚ್ಚುವರಿ ವೆಚ್ಚವನ್ನು ಭರಿಸಲು ಆರ್ಥಿಕ ವರ್ಷ 2024-25ನೇ ಸಾಲಿನ ಆಯವ್ಯದಲ್ಲಿ ಸಾಕಾಷ್ಟು ಅವಕಾಶವಿದೆ ಎಂದು ಆಯೋಗ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+