ರಾಜ್ಯ ವಿಧಾನಸಭೆ ಚುನಾವಣೆ: ಮತದಾನ ಹೆಚ್ಚಿಸಲು ಬೂತ್‌ಗಳಲ್ಲಿ ಮೂಲಸೌಕರ್ಯಗಳ ವ್ಯವಸ್ಥೆಗೆ ಚಿಂತನೆ!

ರಾಜ್ಯ ವಿಧಾನಸಭೆ ಚುನಾವಣೆಗೆ ಬೂತ್‌ಗಳಲ್ಲಿ ಹೆಚ್ಚಿನ ಸೌಲಭ್ಯಗಳ ವ್ಯವಸ್ಥೆ ಕಲ್ಪಿಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಈ ಮೂಲಕ ಮತದಾರರನ್ನು ಸೆಳೆಯಲು ಭಾರತದ ಚುನಾವಣಾ ಆಯೋಗ (ಇಸಿಐ) ಯೋಚಿಸಿದೆ.

ಬೆಂಗಳೂರು ಫೆಬ್ರವರಿ 18: ರಾಜ್ಯ ವಿಧಾನಸಭೆ ಚುನಾವಣೆಗೆ ಬೂತ್‌ಗಳಲ್ಲಿ ಹೆಚ್ಚಿನ ಸೌಲಭ್ಯಗಳ ವ್ಯವಸ್ಥೆ ಕಲ್ಪಿಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಈ ಮೂಲಕ ಮತದಾರರನ್ನು ಸೆಳೆಯಲು ಭಾರತದ ಚುನಾವಣಾ ಆಯೋಗ (ಇಸಿಐ) ಯೋಚಿಸಿದೆ.

ಬೂತ್‌ಗಳಲ್ಲಿ ಮತದಾರರಿಗೆ ಆಸನ ವ್ಯವಸ್ಥೆ ಮಾಡುವುದರಿಂದ ಹಿಡಿದು ಮತದಾನ ಕೇಂದ್ರಗಳ ಬಗ್ಗೆ ಹೆಚ್ಚು ನಿಖರವಾದ ಮಾಹಿತಿಗಾಗಿ ತನ್ನ ಅಪ್ಲಿಕೇಶನ್ ಅನ್ನು ಮತ್ತಷ್ಟು ಕಸ್ಟಮೈಸ್ ಮಾಡುವವರೆಗೆ, ಭಾರತದ ಚುನಾವಣಾ ಆಯೋಗ (ಇಸಿಐ) ಕರ್ನಾಟಕದ ಕೆಲವು ಭಾಗಗಳಲ್ಲಿ ಮತದಾನದ ಸಮಸ್ಯೆಯನ್ನು ಪರಿಹರಿಸಲು ಪರಿಹಾರ ಕ್ರಮಗಳನ್ನು ಯೋಜಿಸಿದೆ.

ಅಸೆಂಬ್ಲಿ ಚುನಾವಣೆಗೆ ಸರಿಸುಮಾರು ಎರಡು ತಿಂಗಳು ಬಾಕಿ ಇರುವಾಗ, ಕಳೆದ ವಾರ ಕರ್ನಾಟಕ ಪ್ರವಾಸ ಕೈಗೊಂಡಿದ್ದ ನವದೆಹಲಿಯ ಇಸಿಐನ ಮೂವರು ಸದಸ್ಯರ ತಂಡವು ಕಳಪೆ ಮತದಾನದ ಕಾರಣಗಳನ್ನು ಪತ್ತೆ ಹಚ್ಚುವ ಮೂಲಕ ಕಳವಳ ವ್ಯಕ್ತಪಡಿಸಿದೆ. ಕಡಿಮೆ ಮತದಾನದ ಸಮಸ್ಯೆಗೆ ದೊಡ್ಡ ಪ್ರಮಾಣದ ಜನಸಂಖ್ಯೆಯ ವಲಸೆ ಮತ್ತು ಮತಗಟ್ಟೆಗಳಲ್ಲಿ ಶೌಚಾಲಯಗಳ ಕೊರತೆ ಕಾರಣ ಎಂದು ಇಸಿಐ ತಂಡ ಉಲ್ಲೇಖಿಸಿದೆ.

ಆಯೋಗ ಕರ್ನಾಟಕದಲ್ಲಿ 90 ವಿಧಾನಸಭಾ ಕ್ಷೇತ್ರಗಳನ್ನು ಗುರುತಿಸಿದೆ. ಇವುಗಳಲ್ಲಿ ಇತ್ತೀಚಿನ ದಿನಗಳಲ್ಲಿ ರಾಜ್ಯದ ಸರಾಸರಿ 72% ಕ್ಕಿಂತ ಕಡಿಮೆ ಮತದಾನವಾಗಿದೆ.

ಕಡಿಮೆ ಮತದಾನಕ್ಕೆ ಕಾರಣ ಪತ್ತೆ

ಕಡಿಮೆ ಮತದಾನಕ್ಕೆ ಕಾರಣ ಪತ್ತೆ

ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ ಮಾತನಾಡಿ, ಜೀವನೋಪಾಯದ ಸಮಸ್ಯೆಗಳ ಮೇಲೆ ದೊಡ್ಡ ಪ್ರಮಾಣದ ವಲಸೆಯು ಕೆಲವು ಪ್ರದೇಶಗಳಲ್ಲಿ ಕಡಿಮೆ ಮತದಾನಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಇನ್ನು ಕೆಲವು ಪ್ರದೇಶಗಳಲ್ಲಿ ಶೌಚಾಲಯಗಳ ಕೊರತೆಯಿಂದ ಹಿಡಿದು ಮತಗಟ್ಟೆಗಳ ಹೊರಗೆ ಉದ್ದನೆಯ ಸರತಿ ಸಾಲುಗಳಲ್ಲಿ ಕಾಯುವುದು ಸಮಸ್ಯೆಯಾಗಿದೆ.

ಶೌಚಾಲಯ, ಆಸನದ ವ್ಯವಸ್ಥೆ

ಶೌಚಾಲಯ, ಆಸನದ ವ್ಯವಸ್ಥೆ

ಪ್ರಸ್ತುತ ಎಲ್ಲಾ ಮಹಾನಗರಗಳ ಪೈಕಿ ಕೋಲ್ಕತ್ತಾದಲ್ಲಿ ಅತಿ ಹೆಚ್ಚು ಶೇಕಡಾವಾರು ಮತದಾನವಾಗಿದೆ ಎಂದು ಇಸಿಐ ಅಧಿಕಾರಿ ತಿಳಿಸಿದ್ದಾರೆ. "ಶೌಚಾಲಯಗಳಿರುವ ಸ್ಥಳಗಳಲ್ಲಿ ಬೂತ್‌ಗಳನ್ನು ಸ್ಥಾಪಿಸುವುದು ಉತ್ತಮ ಮಾರ್ಗವಾಗಿದೆ. ಮತದಾರರಿಗೆ ಆಸನದ ವ್ಯವಸ್ಥೆಯನ್ನು ಮಾಡುವುದು. ಜೊತೆಗೆ ಮತದಾರರು ತಮ್ಮ ಹತ್ತಿರದ ಬೂತ್‌ನಲ್ಲಿ ಸರತಿ ಸಾಲು ಎಷ್ಟಿದೆ ಎಂದು ತಿಳಿದುಕೊಳ್ಳಲು ಅನುವು ಮಾಡಿಕೊಡುವ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿದ್ದೇವೆ. ಇದರಿಂದ ಮತದಾರರು ತಮ್ಮ ಭೇಟಿಯನ್ನು ಜನಸಂಖ್ಯೆ ಕಡಿಮೆ ಇರುವ ಸಮಯದಲ್ಲಿ ಭೇಟಿ ನೀಡಲು ಅನುವು ಮಾಡಿದಂತಾಗುತ್ತದೆ"ಎಂದು ಮೀನಾ ವಿವರಿಸಿದರು.

ಮತಗಟ್ಟೆಗಳನ್ನು ಪತ್ತೆಹಚ್ಚುವಲ್ಲಿ ಸಮಸ್ಯೆ

ಮತಗಟ್ಟೆಗಳನ್ನು ಪತ್ತೆಹಚ್ಚುವಲ್ಲಿ ಸಮಸ್ಯೆ

"ಬೆಂಗಳೂರಿನಂತಹ ನಗರಗಳಲ್ಲಿನ ಅನೇಕ ಮತದಾರರು ತಮ್ಮ ಮತಗಟ್ಟೆಗಳನ್ನು ಪತ್ತೆಹಚ್ಚುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮತಗಟ್ಟೆಗಳನ್ನು ಉತ್ತಮವಾಗಿ ಪತ್ತೆಹಚ್ಚಲು ಮತ್ತು ಮತದಾರರ ಸ್ಥಳದಿಂದ ಮತಗಟ್ಟೆಗೆ ನಿಜವಾದ ಅಂತರವನ್ನು ತೋರಿಸಲು ಇಸಿಐ ಅಪ್ಲಿಕೇಶನ್‌ ಸುಲಭವಾಗಿದೆ" ಎಂದು ಅವರು ಹೇಳಿದರು.

ಮೀನಾ ಮಾತನಾಡಿ, ಈ ಹಿಂದೆ ಕರ್ನಾಟಕ ಸರಾಸರಿ ಶೇ.70-72ರಷ್ಟು ಮತದಾನವಾಗಿತ್ತು. ಆದಾಗ್ಯೂ ಸುಮಾರು 90 ಕ್ಷೇತ್ರಗಳಲ್ಲಿ (ಒಟ್ಟು 40%) ರಾಜ್ಯದ ಸರಾಸರಿಗಿಂತ ಕಡಿಮೆ ಮತದಾನವಾಗಿದೆ ಎಂದು ಅವರು ಹೇಳಿದರು.

ಬೂತ್‌ಗಳಲ್ಲಿ ಸೌಲಭ್ಯಗಳು

ಬೂತ್‌ಗಳಲ್ಲಿ ಸೌಲಭ್ಯಗಳು

ECI ಪ್ರಕಾರ, ಕಲ್ಯಾಣ ಕರ್ನಾಟಕ ಪ್ರದೇಶದ ಕೆಲವು ಕ್ಷೇತ್ರಗಳು, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಕೆಲವು ಕ್ಷೇತ್ರಗಳು ಈ ಹಿಂದೆ 50% ಕ್ಕಿಂತ ಕಡಿಮೆ ಮತದಾನವನ್ನು ವರದಿ ಮಾಡಿದ್ದರೆ, ಪುರಸಭೆಯ ಮಿತಿಯ ಕೆಲವು ಕ್ಷೇತ್ರಗಳಲ್ಲಿ ರಾಜ್ಯದ ಸರಾಸರಿಗಿಂತ ಕಡಿಮೆ ಮತದಾನವಾಗಿದೆ ಎಂದು ವರದಿಯಾಗಿದೆ. "ಈ ಬಾರಿ ಉತ್ತಮ ವ್ಯವಸ್ಥೆಗಳಿಂದ ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ ನಾವು ಉತ್ತಮ ಮತದಾನದ ಶೇಕಡಾವಾರು ಪ್ರಮಾಣವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗುತ್ತದೆ" ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+