ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಪಾನ್‍ನಲ್ಲಿ 7.3ರ ಪ್ರಮಾಣ ಭೂಕಂಪ, ಸುನಾಮಿ ಎಚ್ಚರಿಕೆ

|
Google Oneindia Kannada News

ಟೋಕಿಯೋ, ನವೆಂಬರ್ 22: ಉತ್ತರ ಜಪಾನ್ ನಲ್ಲಿ 7.3ರ ಪ್ರಮಾಣದಲ್ಲಿ ಮಂಗಳವಾರ ಪ್ರಬಲ ಭೂಕಂಪವಾಗಿದ್ದು, ಉತ್ತರ ಪೆಸಿಫಿಕ್ ತೀರದಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಭೂಕಂಪವು ಟೋಕಿಯೋದಲ್ಲಿ ಕೇಂದ್ರಿಕೃತವಾಗಿತ್ತು. ಫುಕುಶಿಮಾ ಕಡಲ ತೀರದ ಹತ್ತು ಕಿ.ಮೀ. ಆಳದಲ್ಲಿ ಕಂಡುಬಂದಿದೆ.

ಮಂಗಳವಾರ ಬೆಳಗ್ಗೆ 5.59ರ ಸುಮಾರಿಗೆ ಭೂಕಂಪವಾಗಿದ್ದು, ಹಾನಿ ಅಥವಾ ಸಾವು-ನೋವಿನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಟೋಕಿಯೋ ಎಲೆಕ್ಟ್ರಿಕ್ ಕಂಪನಿ ಫುಕುಶಿಮಾದ ಅಣು ವಿದ್ಯುತ್ ಘಟಕಕ್ಕೆ ಹಾನಿಯಾಗಿದೆಯೆ ಎಂದು ಪರಿಶೀಲಿಸುತ್ತಿದೆ.

Japan

ತಕ್ಷಣಕ್ಕೆ ಅಣು ವಿದ್ಯುತ್ ಘಟಕವನ್ನು ತಲುಪಲು ಸಾಧ್ಯವಿಲ್ಲ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ. ಒನಾಗವಾ ಅಣು ಸ್ಥಾವರಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಟೊಹೊಕು ಎಲೆಕ್ಟ್ರಿಕ್ ಪವರ್ ಕಂಪನಿ ಹೇಳಿದೆ.

ಫುಕುಶಿಮಾ ಕಡಲ ತೀರದಿಂದ ಹಡಗುಗಳು ತೆರಳುತ್ತಿವೆ. ಸುನಾಮಿ ಎಚ್ಚರಿಕೆ ನೀಡಲಾಗಿದೆ. 2011ರ ಮಾರ್ಚ್‍ನಲ್ಲೇ ಭೂಕಂಪನ ಹಾಗೂ ಸುನಾಮಿಯಿಂದ ಟೆಪ್ಕೋಸ್ ದಾಯಿಚಿ ಅಣು ಸ್ಥಾವರ ಸಂಪೂರ್ಣ ಹಾನಿಯಾಗಿತ್ತು.

English summary
A powerful earthquake off the northeast Japanese shore Tuesday sent residents fleeing to higher ground and prompted worries about the Fukushima nuclear power plant destroyed by a tsunami five year ago. Authorities issued a tsunami warning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X