ರೈಲಿನಲ್ಲಿ ಅಮ್ಮ-ಮಗಳ ಕಾಡಿದ ಕುಡುಕನಿಗೆ ಗೂಸಾ

ರೈಲಿನಲ್ಲಿ ಮೈಸೂರಿಗೆ ಪ್ರಯಾಣ ಮಾಡುತ್ತಿದ್ದ 38 ವರ್ಷದ ತಾಯಿ ಮತ್ತು 11 ವರ್ಷದ ಮಗಳ ಮಾನಭಂಗಕ್ಕೆ ಯತ್ನಿಸಿದ 35 ವರ್ಷದ ಮಾನಗೇಡಿ ಯುವಕ ಇಬ್ಬರಿಗೂ ಕಾಟ ಕೊಟ್ಟಿದ್ದಾನೆ. ಕೊನೆಗೆ ಸಹ ಪ್ರಯಾಣಿಕರು ಅಮ್ಮ-ಮಗಳ ನೆರವಿಗೆ ಬಂದು ಅವನಿಗೆ ತಕ್ಕ ಶಾಸ್ತಿ ಮಾಡಿದ್ದಾರೆ.
ಅಮ್ಮ-ಮಗಳ ಇಬ್ಬರೇ ಇರುವುದನ್ನು ಅರಿತ ಮಾನಗೇಡಿ ಯುವಕ ಬಾಲಕಿ ಶೌಚಕ್ಕೆಂದು ಹೋದಾಗ ಅವಳನ್ನು ಹಿಂಬಾಲಿಸಿದ್ದಾನೆ. ಶೌಚಾಲಯದಲ್ಲೇ ಅವಳನ್ನು ಕೂಡಿ ಹಾಕಿ ಬಲಾತ್ಕಾರ ನಡೆಸಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಬಂದ ಬಾಲಕಿಗೆ ಕೈತೊಳೆಯುವ ವಾಷ್ ಬೇಸಿನ್ ಬಳಿಯೂ ಕಾಟ ಕೊಟ್ಟಿದ್ದಾನೆ. ಅಲ್ಲಿಂದ ಪಾರಾದ ಬಾಲಕಿ ಅಮ್ಮನ ಬಳಿ ಬಂದು ನಡೆದ ಘಟನೆಯನ್ನು ವಿವರಿಸಿದ್ದಾಳೆ.
ಮಗಳ ಅವಸ್ಥೆ ಕಂಡು ಆತಂಕಗೊಂಡ ತಾಯಿ ಬೋಗಿಯಲ್ಲಿದ್ದ (S3 coach) ಟಿಟಿ ಮತ್ತು ಪೊಲೀಸರಿಗೆ ವಿಷಯ ತಿಳಿಸಿದರೆ ಆ ಪ್ರಭೃತಿಗಳು 'ಹಂಗೆಲ್ಲಾ ಮಾಡಬಾರದು. ಸುಮ್ನೆ ಹೋಗಿ ಮಲಗಿಕೋ' ಎಂದು ಹೇಳಿ ಸುಮ್ಮನಾಗಿದ್ದಾರೆ.
ಆದರೆ ಸ್ವಲ್ಪ ಹೊತ್ತಿನ ಬಳಿಕ ಯುವಕ ಮತ್ತೆ ತನ್ನಾಟ ಮುಂದುವರಿಸಿದ್ದಾನೆ. ಈ ಬಾರಿ ತಾಯಿಯ ಮೇಲೆ ಎರಗಲು ಯತ್ನಿಸಿದ್ದಾನೆ. ಆಕೆಯನ್ನು ನೋಡುತ್ತಾ ಕೆಣಕಿದ್ದಾನೆ. ನಿಜಕ್ಕೂ ಗಾಬರಿಗೆ ಬಿದ್ದ ಮಹಿಳೆ, ಇನ್ನು ಸಾಧ್ಯವಿಲ್ಲವೆಂದು ಜೋರಾಗಿ ಕೂಗಿಕೊಂಡಿದ್ದಾರೆ. ''ಎಚ್ಚೆತ್ತ'' ಪ್ರಯಾಣಿಕರು ಪರಿಸ್ಥಿತಿ ಕೈಮೀರುವ ಮುನ್ನ ಆರೋಪಿಯನ್ನು ಹಿಡಿದು ಸಮ ಥಳಿಸಿದ್ದಾರೆ.
ಪಾನಮತ್ತ ಯುವಕನನ್ನು ಪಕ್ಕದ ಬೋಗಿಗೆ ತಳ್ಳಿದ TTE, ಅವನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ಇತ್ತ ಅನಗತ್ಯವಾಗಿ ಕಿರಿಕಿರಿ ಅನುಭವಿಸಿದ ತಾಯಿ-ಮಗಳು ಸಹ ಯಾವುದೇ ದೂರು ನೀಡದೆ ಪ್ರಯಾಣ ಮುಗಿಸಿ, ಮನೆ ಸೇರಿಕೊಂಡಿದ್ದಾರೆ.












Click it and Unblock the Notifications