• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಾಕಿಂಗ್: ಕೊರೊನಾ ಟೆಸ್ಟ್ ಮಾಡಿಸುವುದೇ ಮೂರ್ಖತನ, ಮಾಡಿಸಿದರೆ ಪಾಸಿಟಿವ್ ಪಕ್ಕಾ!

|

ಐದನೇ ಅನ್ ಲಾಕ್ ಮೂಲಕ ದೇಶದಲ್ಲಿ ಕೊರೊನಾ ನಿಯಮಗಳು ಸಡಿಲಗೊಳ್ಳುತ್ತಿದ್ದಂತೆಯೇ, ಪಾಸಿಟೀವ್ ಸಂಖ್ಯೆ ಎಗ್ಗಿಲ್ಲದಂತೇ ಹೆಚ್ಚಾಗುತ್ತಿದೆ. ಸಾರ್ವಜನಿಕರು ಬಹುತೇಕ ತಮ್ಮ ಎಂದಿನ ಜೀವನಶೈಲಿಗೆ ಮರಳುತ್ತಿದ್ದಾರೆ.

ಕೊರೊನಾ ಟೆಸ್ಟ್ ವಿಚಾರದಲ್ಲಿ ಆರೋಪ/ಶಂಕೆಗಳು ಹಲವು ಬಾರಿ ಎದುರಾಗಿದೆ. ಈ ವೈರಾಣುವಿನ ಬಗ್ಗೆ ವೈದ್ಯರ ವರ್ಗ ಭಯಪಡಬೇಕಾಗಿಲ್ಲ. ಬದಲಿಗೆ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸಿಕೊಳ್ಳಿ ಎಂದು ಹೇಳುತ್ತಲೇ ಇದ್ದಾರೆ.

ಭಾಗ-1: ಕೊವಿಡ್-19 ಔಷಧಿ ಪತ್ತೆಯಾದರೂ ಸೋಂಕಿತರಿಗೆ ಸಿಗುವುದೇ ಅನುಮಾನ

ಕೊರೊನಾ ಟೆಸ್ಟ್ ವಿಚಾರದಲ್ಲಿ ಮತ್ತು ಇದಾದ ನಂತರ ಚಿಕಿತ್ಸೆಯ ರೂಪದಲ್ಲಿ ಖಾಸಗಿ ಆಸ್ಪತ್ರೆಗಳು ಸಿಕ್ಕಾಪಟ್ಟೆ ಬಿಲ್ ಮಾಡುತ್ತಿವೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.

ಸರಕಾರ ಕೊರೊನಾ ಟೆಸ್ಟ್ ಹೆಚ್ಚು ಮಾಡಬೇಕು ಎನ್ನುವ ಟಾರ್ಗೆಟ್ ಅನ್ನು ಇಟ್ಟುಕೊಂಡಿದೆ. ಈ ನಡುವೆ, ಡಾ.ರಾಜು ಎನ್ನುವ ವೈದ್ಯರು ಕೊರೊನಾ ವಿಚಾರದಲ್ಲಿ ಹೇಳಿದ ಮಾತಿನ ವಿಡಿಯೋ, ವೈರಲ್ ಆಗುತ್ತಿದೆ. ಡಾಕ್ಟರ್ ಹೇಳಿದಿಷ್ಟು:

ಖ್ಯಾತ ವೈದ್ಯ ಡಾ.ರಾಜು ಹೇಳಿದ ಶಾಕಿಂಗ್ ಜ್ಯೂಸ್

ಖ್ಯಾತ ವೈದ್ಯ ಡಾ.ರಾಜು ಹೇಳಿದ ಶಾಕಿಂಗ್ ಜ್ಯೂಸ್

"ಬೆಂಗಳೂರಿನಲ್ಲಿ ಕೇಸ್ ಜಾಸ್ತಿಯಾಗುತ್ತಿದೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಪಾಸಿಟೀವ್ ಕೇಸ್ ಬರುತ್ತಿದೆ. ಇದಕ್ಕೆ, ಏನು ಕಾರಣ ಎನ್ನುವ ಪ್ರಶ್ನೆಯನ್ನು ಹಲವರು ನನ್ನಲ್ಲಿ ಕೇಳುತ್ತಿದ್ದಾರೆ. ಮುಂದಕ್ಕೆ ಇದು ಲಕ್ಷಕ್ಕೂ ಹೋದರೂ ಆಶ್ಚರ್ಯ ಪಡಬೇಕಾಗಿಲ್ಲ. ಇದಕ್ಕೆ ಎರಡು ಕಾರಣ, ಒಂದು ಹಣ, ಇನ್ನೊಂದು ರೋಗ ನಿರೋಧಕ ಶಕ್ತಿ" - ಡಾ.ರಾಜು.

ಕೊರೊನಾ ಟೆಸ್ಟ್

ಕೊರೊನಾ ಟೆಸ್ಟ್

"ಬೆಂಗಳೂರಿನಲ್ಲಿ ದೊಡ್ಡದೊಡ್ಡ ಆಸ್ಪತ್ರೆಗಳಿವೆ, ಎನ್ನುವ ಓವರ್ ಕಾನ್ಫಿಡೆನ್ಸ್ ಜನರಿಗಿದೆ. ಹಾಗಾಗಿಯೇ, ಕೊರೊನಾ ಟೆಸ್ಟ್ ಮಾಡಿಸಿಕೊಳ್ಳೋಕೆ ಜನ ಹೋಗುತ್ತಾರೆ. ಇದೊಂದು, ಪಕ್ಕಾ ಅನಾವಶ್ಯಕ. ನೆಗಡಿ, ತಲೆನೋವು ಬಂದರೆ ಅಥವಾ ಅಕ್ಕಪಕ್ಕದ ಮನೆಯವರಿಗೆ ಪಾಸಿಟೀವ್ ಬಂದರೆ, ಎಲ್ಲರೂ ಟೆಸ್ಟ್ ಮಾಡಿಸುವುದು ಖಂಡಿತಾ ಬೇಕಾಗಿಲ್ಲ"ಎಂದು ಡಾ.ರಾಜು ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಂಪತಿಗೆ ಕೊರೊನಾ ಸೋಂಕು

ಕೊರೊನಾ ಅನ್ನು ಜನ ನಿರ್ಲ್ಯಕ್ಷಿಸಬೇಕು

ಕೊರೊನಾ ಅನ್ನು ಜನ ನಿರ್ಲ್ಯಕ್ಷಿಸಬೇಕು

"ಕೊರೊನಾ ಅನ್ನು ಜನ ನಿರ್ಲ್ಯಕ್ಷಿಸಬೇಕು ಎನ್ನುವುದು ನನ್ನ ವಾದ. ಟೆಸ್ಟ್ ಅನ್ನೋದು ಬೆಂಗಳೂರಿನಲ್ಲಿ ಒಂದು ವ್ಯಾಪಾರ ಆಗಿದೆ. ಎರಡು ಗಂಟೆಯಲ್ಲಿ ರಿಪೋರ್ಟ್ ಕೊಡುತ್ತೇವೆ ಎಂದು ಜಾಹೀರಾತು ನೀಡುವ ಮೂಲಕ, ಇದರ ಹಿಂದೆ ದೊಡ್ಡ ದಂಧೆಯೇ ಇದೆ. ನಾಲ್ಕು ತಿಂಗಳಿನಿಂದ, ನನ್ನ ಬಳಿ ಬರುವ ಒಬ್ಬರಿಗೂ ನಾನು ಕೊರೊನಾ ಟೆಸ್ಟ್ ಮಾಡಿಸಲು ಹೇಳಿಲ್ಲ" ಡಾ.ರಾಜು.

ಕೊರೊನಾಗೆ ಇನ್ನೂ ಲಸಿಕೆ ಸಿದ್ದವಾಗಿಲ್ಲ

ಕೊರೊನಾಗೆ ಇನ್ನೂ ಲಸಿಕೆ ಸಿದ್ದವಾಗಿಲ್ಲ

"ಕೊರೊನಾಗೆ ಇನ್ನೂ ಲಸಿಕೆ ಸಿದ್ದವಾಗಿಲ್ಲ. ಆದರೂ, ಆಸ್ಪತ್ರೆಗೆ ದಾಖಲಾದಾರೆ, ಸಾವಿರಾರು ರೂಪಾಯಿ ಮೆಡಿಸಿನ್ ಗೆಂದು ಪೀಕಲಾಗುತ್ತಿದೆ. ಬೇರೆ ಬೇರೆ ಔಷಧಗಳನ್ನು ಪ್ರಯೋಗಿಸಲಾಗುತ್ತಿದೆ. ಇದು, ಡೆತ್ ರೇಟ್ ಜಾಸ್ತಿಯಾಗಲು ಕಾರಣವಾಗಬಹುದು. ಇದೊಂದು ಸಾಮಾನ್ಯಗಿಂತ ಸಾಮಾನ್ಯ ವೈರಲ್ ಫ್ಲೂ" ಎಂದು ಡಾ.ರಾಜು ಹೇಳಿದ್ದಾರೆ.

  ರಾಜ್ಯ ಸರ್ಕಾರ ಜಾರಿಗೊಳಿಸಿದ unlock 5.0 ಮಾರ್ಗಸೂಚಿಯಲ್ಲಿ ಏನಿದೆ | Oneindia Kannada
  ಯಾವ ಟೆಸ್ಟ್ ಕೂಡಾ ನಂಬಿಕೆಗೆ ಅರ್ಹವಾದುದಲ್ಲ

  ಯಾವ ಟೆಸ್ಟ್ ಕೂಡಾ ನಂಬಿಕೆಗೆ ಅರ್ಹವಾದುದಲ್ಲ

  "ಈಗ ನಡೆಯುತ್ತಿರುವ ಯಾವ ಟೆಸ್ಟ್ ಕೂಡಾ ನಂಬಿಕೆಗೆ ಅರ್ಹವಾದುದಲ್ಲ. ಕೊರೊನಾ ಜನರನ್ನು ಆರ್ಥಿಕವಾಗಿ ಕೊಲೆ ಮಾಡುತ್ತಿದೆ. ಜನರು ಮೊದಲು ಒತ್ತಡದಿಂದ ಹೊರಗೆ ಬರಬೇಕು, ಪೌಷ್ಠಿಕ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು. ಕಷಾಯ ವೈರಾಣುವನ್ನು ಕೊಲ್ಲಲ್ಲ, ಆದರೆ ಅದರಿಂದ ಜನರಿಗೆ ರಿಲೀಫ್ ಸಿಗುತ್ತೆ. ಇನ್ನಾದರೂ, ಜನರು ಕೊರೊನಾ ಭಯದಿಂದ ಹೊರಬರಲಿ. ಟೆಸ್ಟ್ ಮಾಡಿಸಿಕೊಳ್ಳುವುದು ಸೂಕ್ತವಲ್ಲ"ಎಂದು ಡಾ.ರಾಜು ಅಭಿಪ್ರಾಯ ಪಟ್ಟಿದ್ದಾರೆ.

  English summary
  Doing The Corona Test Is A Foolishness, People Should Not Afraid: Dr. Raju,
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X